ವಿಶೇಷ

ಸಾವಿರಾರು ಅನಾಥ ಹಸುಗಳನ್ನು ತಾಯಿಯಂತೆ ಸಾಕುತ್ತಿರುವ ಜರ್ಮನ್ ಮಹಿಳೆ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾವಿರಾರು ಅನಾಥ ಹಸುಗಳನ್ನು ತಾಯಿಯಂತೆ ಸಾಕುತ್ತಿರುವ ಜರ್ಮನ್ ಮಹಿಳೆ..

 

 

ಉತ್ತರ ಪ್ರದೇಶದ ಶ್ರೀಕೃಷ್ಣನ ಜನ್ಮಭೂಮಿ ಎಂದು ನಂಬಲಾಗಿದೆ. ಆದರೆ ಗೋರಕ್ಷಕ ಗೋಪಾಲನ ಜನ್ಮಭೂಮಿಯಲ್ಲೇ ಹಸುಗಳನ್ನು ಯಾರು ನೋಡಿಕೊಳ್ಳದಂತಾಗಿ ಅನಾಥವಾಗಿವೆ. ಆದರೆ ಇಂಥ ಅನಾಥ ಹಸುಗಳಿಗೆ ತಾಯಿಯ ರೂಪದಲ್ಲಿ ಬಂಡಿರುವ ಜರ್ಮನ್ ದೇಶದ ಮಹಿಳೆಯೊಬ್ಬರು ಸುಮಾರು 1200ಕ್ಕೂ ಹೆಚ್ಚು ಗೋವುಗಳನ್ನು ಕಾಪಾಡಿ, ಪೋಷಿಸುತ್ತಿದ್ದಾರೆ..!

 

 

 

ಇವರ ಹೆಸರು ಫ್ರೀಡೆರಿಕ್ ಐರಿನಾ. 1978 ರಲ್ಲಿ ಭಾರತಕ್ಕೆ ಬಂದಿದ್ದ ಐರಿನಾ, ಮಾತುರಾದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗಳ ಸ್ಥಿತಿ ನೋಡಿ ಮರುಗಿ ಆ ಹಸುಗಳ ಆರೈಕೆ ಮಾಡಲು ನಿರ್ಧರಿಸುತ್ತಾಳೆ. ಅಂತೆಯೇ ಒಂದು ಗೋಶಾಲೆ ತೆರೆದು ಹಸುಗಳ ಆರೈಕೆಮಾಡುತ್ತಿರುವ ಐರಿನಾ ಸದ್ಯ ತಮ್ಮ ಗೋಶಾಲೆಯಲ್ಲಿ 1200 ಕ್ಕೂ ಹೆಚ್ಚು ಹಸುಗಳಿಗೆ ಆರೈಕೆ ಮಾಡುತ್ತಿದ್ದಾರೆ.

 

 

ಗೋಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 60 ಜನರ ಸಂಬಳ, ಹಸುಗಳಿಗೆ ಔಷಧಿ ಹಾಗೂ ಆಹಾರಕ್ಕಾಗಿ ತಿಂಗಳಿಗೆ ₹22 ಲಕ್ಷ ಖರ್ಚಾಗುತ್ತಿದೆ. ಈ ಖರ್ಚನ್ನು ತಮ್ಮ ಹಣದಿಂದಲೇ ಭರಿಸುತ್ತಿದ್ದಾರೆ. ಅದಕ್ಕಾಗಿ ಜರ್ಮನ್‌ನಲ್ಲಿರುವ ತಮ್ಮ ಆಸ್ತಿಯನ್ನು ಬಾಡಿಗೆ ನೀಡಿದ್ದು, ಬಾಡಿಗೆಯಿಂದ ಬಂದ ಹಣದಲ್ಲಿ ಗೋಶಾಲೆಯನ್ನು ನಡೆಸುತ್ತಿದ್ದಾರೆ.

 

 

ಹಸುಗಳು ನನ್ನ ಮಕ್ಕಳಿದ್ದ ಹಾಗೆ ಅನೇಕ ಜನರು ಗಾಯಗೊಂಡ ಅಥವಾ ಕಾಯಿಲೆಯಿಂದ ಬಳಲುತ್ತಿರುವ ಹಸುಗಳನ್ನು ಎಲ್ಲೆಂದರಲ್ಲೇ ಬಿಟ್ಟು ಹೋಗುತ್ತಾರೆ. ನಾನು ಅಂತ ಹಸುಗಳಿಗೆ ಅಗತ್ಯವಿರುವ ಆಹಾರ ಮತ್ತು ಔಷಧ ಪೂರೈಸುತ್ತೇನೆ. ಜಾಗ ಸಾಕಾಗುತ್ತಿಲ್ಲ. ಆದರೆ ಹಾಗೆಂದು ಹಸುಗಳನ್ನು ವಾಪಸ್‌ ಕಳಿಸುವುದಿಲ್ಲ,, ಕಣ್ಣು ಕಾಣದ ಹಾಗೂ ತೀವ್ರವಾಗಿ ಗಾಯಗೊಂಡಿರುವ ಹಸುಗಳನ್ನು ಪ್ರತ್ಯೇಕವಾಗಿಟ್ಟು ಆರೈಕೆ ಮಾಡಲಾಗುತ್ತಿದೆ’ ಎಂದು ಫೆಡರಿಕ್ ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top