fbpx
ಕ್ರೀಡೆ

ತಾಯಿಯ ಚಿನ್ನವನ್ನು ಅಡವಿಟ್ಟು ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗೆದ್ದ ವೀರ.

ತಾಯಿಯ ಚಿನ್ನವನ್ನು ಅಡವಿಟ್ಟು ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗೆದ್ದ ವೀರ.

 

 

ಇದು ಕಾಮನ್‌ವೆಲ್ತ್‌ ಚಾಂಪಿ ಯನ್‌ಶಿಪ್‌ನಲ್ಲಿ ಭಾಗವಹಿಸಬೇಕು ಎನ್ನುವ ಕನಸನ್ನು ಕಟ್ಟುಕೊಂಡಿದ್ದ ಯುವಕನ ಹಿಂದಿರುವ ನೋವಿನ ಕತೆ. ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜಿನ ಪ್ರಥಮ ಬಿಬಿಎಂ ವಿದ್ಯಾರ್ಥಿ, ಇಸ್ರಾರ್‌ ಪಾಷಾ ಅವರು ದಕ್ಷಿಣ ಆಫ್ರಿಕಾದ ಪೊಚೆಫ್‌ಸೂóಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, ಒಂದು ಬೆಳ್ಳಿ ಪದಕ ಪಡೆದು 2ನೇ ಬೆಸ್ಟ್‌ ಲಿಫ್ಟರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

 

ಇಸ್ರಾರ್‌ ಪಾಷಾ ರವರು ಕಾಮನ್‌ವೆಲ್ತ್‌ನಲ್ಲಿ ಪಾಲ್ಗೊಳ್ಳಬೇಕಿದ್ದರೆ ಇಂಡಿಯನ್ ಪವರ್ ಲಿಫ್ಟಿಂಗ್ ಫೆಡರೇಶನ್ನಿಗೆ ಒಂದೂವರೆ ಲಕ್ಷ ರೂಪಾಯಿ ಪಾವತಿಸಬೇಕಿತ್ತು. ಆದರೆ ಅಷ್ಟೊಂದು ಹಣವಿಲ್ಲದೆ ಮಂಕಾಗಿದ್ದ ಮಗನ ಸ್ಥಿತಿ ನೋಡಿ ಮನನೊಂದ ತಾಯಿ ತನ್ನ ಚಿನ್ನವನ್ನೆಲ್ಲ ಅಡವಿಟ್ಟು ಬಂದ ದುಡ್ಡನ್ನು ತನ್ನ ಮಗನಿಗೆ ನೀಡಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಕಳುಹಿಸಿದ್ದಾರೆ. ಅದೃಷ್ಟವಶಾತ್ ತಾಯಿಯ ಚಿನ್ನದ ಬಲದಿಂದ ಅಂತಾರಾಷ್ಟ್ರೀಯ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಪಾಶ ಚಿನ್ನದ ಪದಕವನ್ನು ಗೆದ್ದಿದ್ದಾರೆ.

 

ವಿದೇಶದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ಸ್ವದೇಶಕ್ಕೆ ಮರಳಿದ ಪಾಷಾ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಿದ್ದರೆ. “ಒಂದು ವೇಳೆ ನಾನು ಕ್ರಿಕೆಟ್ ಆಟಗಾರನಾಗಿದ್ದರೆ, ಎಲ್ಲೆಡೆಯಿಂದಲೂ ಪ್ರಶಂಸೆ, ಬಹುಮಾನ ಹರಿದು ಬರುತ್ತಿತ್ತು,, ಆದರೆ ನಾನು ಕ್ರಿಕೆಟ್ ಆಟಗಾರನಲ್ಲ ಹಾಗಾಗಿ ನನ್ನ ಸಾಧನೆ ಯಾರ ಕಣ್ಣಿಗೂ ಬೀಳುತ್ತಿಲ್ಲ” ಎಂದು ಕ್ರಿಕೆಟ್ ಹೊರತಾಗಿ ಇತರ ಕ್ರೀಡೆಗಳಿಗೆ ಭಾರತದಲ್ಲಿ ಸಿಗುವ ಗೌರವದ ಬಗ್ಗೆ ಪಾಷ ಬೇಸರ ವ್ಯಕ್ತಪಡಿಸಿದ್ದಾರೆ.

 

 

“ಕಾಮನ್‌ವೆಲ್ತ್‌ ಚಾಂಪಿ ಯನ್‌ಶಿಪ್‌ನಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳಬೇಕಿದ್ದ ಕೊನೆಯ ದಿನದವರೆಗೂ ಹಣಕ್ಕಾಗಿ ಪೇಚಾಟ ನಡೆಸುತ್ತಿದ್ದಾಗ, ಅಂತಿಮ ಕ್ಷಣದಲ್ಲಿ
ನನ್ನ ತಾಯಿ ತನ್ನ ಚಿನ್ನ ಅಡವಿಟ್ಟು ಹಣ ಒದಗಿಸಿಕೊಟ್ಟಿದ್ದರು,, ನಾನು ಪದಕ ಗೆದ್ದರೂ, ಕ್ರೀಡಾಕೂಟದಲ್ಲಿ ನಗದು ಬಹುಮಾನಗಳಿಲ್ಲದ ಕಾರಣ, ಗೆದ್ದ ಪದಕದ ನಡುವೆ ತಾಯಿಯ ಚಿನ್ನವನ್ನು ಅಡವಿಟ್ಟ ಬೇಸರವಿದೆ. ಅದಿನ್ನೂ ಬ್ಯಾಂಕಿನಲ್ಲಿಯೇ ಇರುವುದರಿಂದ ಲಕ್ಷ ರೂಪಾಯಿಯನ್ನು ಹೊಂದಿಸುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿದೆ” ಎಂದು ಪದಕ ಗೆಲುವಿನ ನಡುವೆಯೂ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top