fbpx
ಸಮಾಚಾರ

ಚಲಿಸುತ್ತಿರುವ ರೈಲಿನಲ್ಲಿ ವಾಟ್ಸಾಪ್ ಸಹಾಯದಿಂದ ಹೆರಿಗೆ ಮಾಡಿ ತಾಯಿ-ಮಗುವಿನ ಪ್ರಾಣ ಉಳಿಸಿದ ಯುವಕ..!

ಚಲಿಸುತ್ತಿರುವ ರೈಲಿನಲ್ಲಿ ವಾಟ್ಸಾಪ್ ಸಹಾಯದಿಂದ ಹೆರಿಗೆ ಮಾಡಿ ತಾಯಿ-ಮಗುವಿನ ಪ್ರಾಣ ಉಳಿಸಿದ ಯುವಕ..!

 

 

ಇದು ಸ್ವಲ್ಪ ಅಚ್ಚರಿಯಾದರೂ, ಸಂತೋಷ ನೀಡುವಂಥ ಸುದ್ದಿ,, ಫೇಸ್ಬುಕ್ ವಾಟ್ಸ್ಆಪ್ ಗಳಿಂದ ಹೀಗೂ ಸಹಾಯವಾಗಬಹುದು ಎಂಬುದು ತಿಳಿಯಲಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರು ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ವೇಳೆ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ MBBS ವಿದ್ಯಾರ್ಥಿಯೊಬ್ಬ ವಾಟ್ಸಾಪ್ ಮೂಲಕ ತನ್ನ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರ ಸೂಚನೆಗಳನ್ನು ಪಾಲಿಸುವ ಮೂಲಕ ಸಿನಿಮೀಯ ಮಾದರಿಯಲ್ಲಿ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾನೆ..

 

 

ಅಹ್ಮದಾಬಾದ್-ಪುರಿ ಎಕ್ಸ್‌ಪ್ರೆಸ್ ರೈಲಿನಲ್ಲಿ ವಿಪಿನ್ ಖಡ್ಸೆ ಎಂಬ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಯಾಣಿಸುತ್ತಿದ್ದ ವೇಳೆ ಇದೇ ರೈಲಿನಲ್ಲಿ ಚಿತ್ರಲೇಖಾ ಎಂಬ ತುಂಬು ಗರ್ಭಿಣಿ ಮಹಿಳೆ ಛತ್ತೀಸ್ಘಡದ ರಾಯ್ಪುರ್ ಗೆ ತೆರಳುತ್ತಿದ್ದರು. ಆಗ ಚಿತ್ರಲೇಖಾಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಕೆಯ ಪತಿ ಮತ್ತು ಸಂಬಂಧಿಕರು ರೈಲಿನ ಚೈನ್ ಎಳೆದು ನಿಲ್ಲಿಸಿದ್ದಾರೆ. ಆದರೆ ತೀವ್ರ ನೋವಿನಿಂದ ಬಳಲುತ್ತಿದ್ದ ಚಿತ್ರಲೇಖಾಗೆ ತೀವ್ರ ರಕ್ತಸ್ರಾವ ಆರಂಭವಾಗಿತ್ತು ಅಲ್ಲದೆ ತಕ್ಷಣ ವೈದ್ಯಕೀಯ ನೆರವು ಬೇಕೆಂದು ರೈಲಿನಲ್ಲಿ ಯಾರಾದರೂ ವೈದ್ಯರಿದ್ದಾರೆಯೇ ಎಂದು ರೈಲ್ವೇ ಸಿಬ್ಬಂದಿ ವಿಚಾರಿಸಿದ್ದಾರೆ.

 

 

ಆಗ ಇನ್ನೂ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ವಿಪಿನ್, ಗರ್ಭಿಣಿ ನೆರವಿಗೆ ಧಾವಿಸಲು ಹಿಂದೇಟು ಹಾಕಿದರೂ ಆಕೆ ಬಾದೆ ಪಡುತ್ತಿದ್ದುದನ್ನು ನೋಡಲಾರದೆ ನೆರವಿಗೆ ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಆತ ವಾಟ್ಸಾಪ್‌ನಲ್ಲಿ ವಿಡಿಯೋ ಕಾಲಿಂಗ್, ಮೆಸೇಜ್ ಮೂಲಕ ಹಿರಿಯ ವೈದ್ಯರನ್ನು ಸಂಪರ್ಕಿಸಿ ಅವರು ನೀಡುವ ಸಲಹೆ ಸೂಚನೆಗಳ ಸಹಾಯದಿಂದ ಆ ಮಹಿಳೆಗೆ ಯಶಸ್ವಿಯಾಗಿ ಡೆಲಿವರಿ ಮಾಡಿದ್ದಾನೆ.

 

 

“ನಾನು ವೈದ್ಯನಾಗುವುದಕ್ಕಿಂತ ಸಾವಿರ ಪಟ್ಟು ಹೆಚ್ಚಿನ ಸಂತೋಷ ಈ ಎರಡೂ ಜೀವಗಳನ್ನು ಉಳಿಸಿದ್ದರಿಂದ ಆಗಿದೆ” ಎಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top