fbpx
ಸಮಾಚಾರ

ರೈತನ ಹೊಲದಲ್ಲಿ 2000ವರ್ಷ ಹಿಂದಿನ ನಾಣ್ಯಗಳ ನಿಧಿ ಪತ್ತೆ! ಈಗ ಈ ನಾಣ್ಯಗಳ ಮೌಲ್ಯ ಎಷ್ಟು ಕೋಟಿ ಗೊತ್ತಾ ?

ರೈತನ ಹೊಲದಲ್ಲಿ 2000ವರ್ಷ ಹಿಂದಿನ ನಾಣ್ಯಗಳ ನಿಧಿ ಪತ್ತೆ! ಈಗ ಈ ನಾಣ್ಯಗಳ ಮೌಲ್ಯ ಎಷ್ಟು ಕೋಟಿ ಗೊತ್ತಾ ?

 

 

ಒಬ್ಬ ನಿಧಿ ಪತ್ತೆಕಾರ ಕೋಟ್ಯಂತರ ರೂಪಾಯಿ ಮೌಲ್ಯದ ಖಜಾನೆಯನ್ನು ಕಂಡು ಹಿಡಿದಿದ್ದಾನೆ. ಇಂಗ್ಲೆಂಡ್‍ನ ಬ್ರಿಡ್‍ಫೋರ್ಟ್‍ ನಲ್ಲಿ 35ವರ್ಷದ ಮೈಕ್‍ಸ್ಮೆಲ್ ಎಂಬುವವನು ರೈತನೊಬ್ಬನ ಹೊಲದಲ್ಲಿ ರೋಮನ್ ಸಾಮ್ರಾಜ್ಯಕ್ಕೆ ಸೇರಿದ 2000 ವರ್ಷಕ್ಕಿಂತಲೂ ಹಳೆಯ ಪುರಾತನ ಬಂಗಾರದ ನಾಣ್ಯಗಳನ್ನು ಕಂಡು ಹುಡುಕಿದ್ದಾನೆ.

 

 

ಈ ಹೊಲದಲ್ಲಿ ಮೈಕ್‍ ಅವರಿಗೆ 600 ಚಿನ್ನದ ನಾಣ್ಯಗಳು ಸಿಕ್ಕಿದ್ದು ಈಗ ಆ ನಾಣ್ಯಗಳ ಒಟ್ಟಾರೆ ಮೌಲ್ಯ ಸುಮಾರು ಎರಡು ಕೋಟಿ ರೂಪಾಯಿಗಿಂತಲೂ ಜಾಸ್ತಿಯಿದೆ ಎಂದು ಅಂದಾಜಿಸಲಾಗಿದೆ. ಆದರೆ ಅವುಗಳ ನಿಖರವಾದ ಮೌಲ್ಯಮಾಪನ ಇನ್ನಷ್ಟೇ ಆಗಬೇಕಾಗಿದೆ.ಮೌಲ್ಯಮಾಪನ ಮುಗಿದ ನಂತರ ಈ ನಾಣ್ಯಗಳನ್ನು ಮ್ಯೂಝಿಯಂಗೆ ಕಳುಹಿಸಲಾಗುತ್ತದೆ..

 

 

ಮೈಕ್‍ಗೆ ತಮ್ಮ ಗೆಳೆಯರ ಜೊತೆ ನಿಧಿ ಹುಡುಕಲು ಹೊರಟಿದ್ದನು ಆಗ ಒಬ್ಬ ರೈತನ ಹೊಲದಲ್ಲಿ ತಿರುಗಾಡುತ್ತಿದ್ದಾಗ ಮೈಕ್‍ಗೆ ಡಿಟೆಕ್ಟರ್‍ನ ಸಹಾಯದಿಂದ ಅದರ ಸದ್ದು ಕೇಳಿದ ನಂತರ ಹೊಲವನ್ನು ಅಗೆದಾಗ ಕೆಲವು ನಾಣ್ಯಗಳು ಸಿಕ್ಕಿದೆ ಎಂದು , ಇದರ ಕುರಿತು ಆತ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಅಧಿಕಾರಿಗಳು ಬಂದು ಹೊಲವನ್ನು ಸೀಲ್ ಮಾಡಿ ನಾಣ್ಯ ಗುರುತಿಸುವ ತಜ್ಞನನ್ನು ಕರೆಸಿದರು. ಇದು ಸಾವಿರಾರು ವರ್ಷ ಹಿಂದಿನ ನಾಣ್ಯಗಳೆಂದು ಮತ್ತು ರೋಮನ್ ಸಾಮ್ರಾಜ್ಯದ ನಾಣ್ಯಗಳು ಎಂದು ಒಂದು ನಾಣ್ಯಕ್ಕೆ 80ಸಾವಿರ ರೂಪಾಯಿ ಬೆಲೆ ಇದೆಯೆಂದು ತಜ್ಞರು ತಿಳಿಸಿದ್ದಾರೆ. ಸಿಕ್ಕ ನಾಣ್ಯಗಳ0ಲ್ಲಿ ಅರ್ಧ ದಷ್ಟು ಹೊಲದ ಮಾಲಿಕನಿಗೆ ನೀಡಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top