fbpx
ದೇವರು

ಶಿವ ಪಾರ್ವತಿ ಪ್ರೇಮ ವಿವಾಹ ಹಾಗೆ ಕಾರ್ತಿಕೇಯ ಹುಟ್ಟಿ ತಾರಕಾಸುರನ ಸಂಹಾರ ಮಾಡಿದ ಕಥೆ ಓದಿ ಚೆನ್ನಾಗಿದೆ

ಪಾರ್ವತಿ-ಪರಮೇಶ್ವರರು  ವಿವಾಹವಾದ ಕಥೆ.

ಬಹಳ ವರ್ಷಗಳ ಹಿಂದೆ ಪಾರ್ವತಿ ರಾಜ ಹಿಮವನ್,ಮೀನ ಎಂಬ ಸುಂದರಿಯನ್ನು ಮದುವೆಯಾದನು.ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು.ಆದರೆ ಅವರಿಗೆ ಮಕ್ಕಳಾಗದಿದ್ದರಿಂದ ದುಃಖದಿಂದಿದ್ದರು.ಅವರು ತಮಗೆ ಮಕ್ಕಳಾಗಲೆಂದು ಪ್ರತಿದಿನ ದೇವಿಯನ್ನು ಪ್ರಾರ್ಥಿಸುತ್ತಿದ್ದರು.

ತಾರಕನೆಂಬ ರಾಕ್ಷಸನು ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು.ತಾರಕಾಸುರನು ದೇವತೆಗಳಿಂದ ಒಂದು ವರವನ್ನು ಪಡೆದಿದ್ದನು.ಅದು ಶಿವನ ಮಗನಿಂದ ಮಾತ್ರ ಅವನ ಸಾವು ಎಂಬುದಾಗಿತ್ತು.ಅದಕ್ಕಾಗಿ ದೇವತೆಗಳು ತಮ್ಮನ್ನು ರಕ್ಷಿಸಲು ದೇವಿಯನ್ನು ಪ್ರಾರ್ಥಿಸಿದರು.

 

 

ಆದರೆ ಅಲ್ಲೊಂದು ಸಮಸ್ಯೆ ಇತ್ತು.ಶಿವನಿಗೆ ಹೆಂಡತಿಯಿರಲಿಲ್ಲ ಮತ್ತು ಯಾವ ಹೆಣ್ಣು ಅವನ ಪ್ರೀತಿಯನ್ನು ಒಲಿಸಿಕೊಳ್ಳಲಾಗುತ್ತಿರಲಿಲ್ಲ. ಆದರೆ ಶಿವನನ್ನು ಒಳಿಸಿಕೊಳ್ಳುವ ಧೈರ್ಯ  ಕೇವಲ ಒಬ್ಬರಲ್ಲಿ ಮಾತ್ರ ಇತ್ತು.ಅವಳೇ ಮಹಾತಾಯಿ ದೇವಿ.

ಅವಳು ಹಿಮವನ್ ಮತ್ತು ಮೀನರ ಮಗಳಾಗಿ ಹುಟ್ಟಲು ನಿರ್ಧರಿಸಿದಳು. ಅವಳು ಹುಟ್ಟಿದಾಗ ,ಅವಳಿಗೆ ಪಾರ್ವತಿ ಎಂದು ಹೆಸರಿಟ್ಟರು. ಅವಳ ತಂದೆ ಪರ್ವತ ರಾಜನಾಗಿದ್ದರಿಂದ ಆವಳಿಗೆ ಪಾರ್ವತಿ ಎನ್ನುವ ಹೆಸರು ಬಂದಿತ್ತು.

ಪಾರ್ವತಿಯು ವಿಶೇಷವಾದ ಸುಂದರ ಮಗುವಾಗಿದ್ದಳು.ಅವಳು ಹೊಳೆಯುವ ಚರ್ಮವನ್ನು ಹೊಂದಿದ್ದಳು ಅವಳ ಚೆಂದದ ನಗು ಎಲ್ಲೆಡೆ ಬೆಳಕು ಚೆಲ್ಲುತ್ತಿತ್ತು.ಮೀನಳಿಗೆ ತನ್ನ ಮಗು ಸಾಮಾನ್ಯ ಮಗುವಲ್ಲ ಎಂದು ತಿಳಿದು ಅವಳನ್ನು ಹೀಗೆ ಕೇಳಿದಳು. “ಯಾರು ನೀನು  ?”ಆಗ ದೇವಿ ಪ್ರತ್ಯಕ್ಷವಾಗಿ ತಾನು ಯಾರೆಂದು ತಿಳಿಸಿದಳು.

ಪಾರ್ವತಿಯನ್ನು ಪ್ರೀತಿ,ಮಮಕಾರದಿಂದ ಬೆಳೆಸಲಾಯಿತು.ಅವಳು ಮೃದು ಮನಸ್ಸಿನವಳಾಗಿ,ಬುದ್ಧಿವಂತೆಯಾಗಿ,ಕರುಣಾಮಯಿಯಾಗಿ ಬೆಳೆದಳು.ಪಾರ್ವತಿ ಚಿಕ್ಕ ವಯಸ್ಸಿನಿಂದಲೇ ಅವಳು ಹೆಚ್ಚು ಸಮಯವನ್ನು ಪ್ರಾರ್ಥನೆ,ಧ್ಯಾನ,ಮತ್ತು ಉಪವಾಸಗಳನ್ನು ಮಾಡುವುದರಲ್ಲಿ ಕಳೆದಳು.

 

 

ಒಂದು ದಿನ ನಾರದ ಮುನಿಗಳು ಹಿಮವನ್ ನ ಆಸ್ಥಾನಕ್ಕೆ ಬಂದರು ಅವರು “ಪಾರ್ವತಿಯ ಅಂಗೈಯನ್ನು ನೋಡಿ,ಪಾರ್ವತಿಯು ಶಿವನನ್ನು ಮದುವೆಯಾಗುವುದಾಗಿ ಅವನೊಂದಿಗೆ ಸಂತೋಷವಾಗಿರುತ್ತಾಳೆ” ಎಂದರು.

“ಆದರೆ ಶಿವನು ಅವಳನ್ನು ಗಮನಿಸಿಯೂ ಸಹ ಪಾರ್ವತಿಯು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಹೆಚ್ಚು ಕಾಲ ಪ್ರಾರ್ಥನೆ ಮತ್ತು ಧ್ಯಾನಗಳಲ್ಲಿ ಕಳೆಯಬೇಕು ಎಂದರು” ಶಿವನು ಕೈಲಾಸದಲ್ಲಿ ತನ್ನ ಮನೆಯಲ್ಲಿ  ಪ್ರಾರ್ಥನೆ ಮತ್ತು ಧ್ಯಾನಗಳಲ್ಲಿ ತಲ್ಲೀನನಾಗಿರುತ್ತಿದ್ದನು. ಅವನು  ಹೊರಗೆ ಹೋದಾಗ,ಯಾರೊಂದಿಗೂ ಬೆರೆಯದೆ ಒಂಟಿಯಾಗಿ ಧ್ಯಾನಿಸುತ್ತಿದ್ದನು.

ಒಂದು ದಿನ ರಾಜ ಹಿಮವನ್ ಗೆ ಶಿವನು ಹತ್ತಿರದಲ್ಲಿಯೇ ಧ್ಯಾನ  ಮಾಡುತ್ತಿದ್ದಾನೆಂದು ತಿಳಿಯಿತು.ಶಿವನಿಗೆ ಕೃತಜ್ಞತೆ ಹೇಳಲು ಹಿಮವನ್, ತನ್ನ ಮನೆಯವರು ಮತ್ತು ಸೇವಕರೊಂದಿಗೆ ಅಲ್ಲಿಗೆ ಹೋದನು. ಹಿಮವನ್ ಶಿವನಿಗೆ “ ನೀವು ನಮ್ಮ ರಾಜ್ಯದ ಅತಿಥಿ.ನಿಮಗೆ  ಸದಾ ಸೇವೆಯನ್ನು ಮಾಡಲು ಯಾರನ್ನಾದರೂ ಕಳುಹಿಸುತ್ತೇನೆ”ಎಂದರು.

ಆ ಕೆಲಸವನ್ನು ಮಾಡಲು ಪಾರ್ವತಿಯು ಮುಂದಾದಳು.ಶಿವನಿಗೆ ಕೆಟ್ಟ ಕೋಪವಿದೆಯೆಂದು ಎಲ್ಲರಿಗೂ  ತಿಳಿದಿತ್ತು.ಧ್ಯಾನದಲ್ಲಿ ತೊಂದರೆ ಮಾಡಿದರಂತೂ ಅವನು ಕೆಂಡಾಮಂಡಲವಾಗುತ್ತಿದ್ದನು.ಪಾರ್ವತಿಯು ಶಿವನಿದ್ದ ಜಾಗವನ್ನು ಶುಚಿಗೊಳಿಸಿ,ಅವನಿಗೆ ಹೂವುಗಳನ್ನು ತರುತ್ತಿದ್ದಳು.ಅವಳು ಶಿವನಿಗೆ ತಿನ್ನಲು ಹಣ್ಣು ಕಾಯಿಯನ್ನು ಇಟ್ಟು ಅವನಿಗಾಗಿ ಸದಾ ಕಾಯುತ್ತಿದ್ದಳು.

ಶಿವನ ಪ್ರೀತಿಯನ್ನು ಒಲಿಸಿಕೊಳ್ಳಲು,ಅವಳು ತನ್ನ ಸಂಯವನ್ನೆಲ್ಲಾ ಧ್ಯಾನ ಮತ್ತು ಪ್ರಾರ್ಥನೆಗಳಲ್ಲಿ ಕಳೆಯುತ್ತಿದ್ದಳು.ಪ್ರತಿದಿನವೂ ಬೆಳಗಿನ ಜಾವ,ಎಷ್ಟೇ ಚಳಿಯಿದ್ದರೂ ಪಾರ್ವತಿ ಸ್ನಾನ ಮಾಡಿ ಧ್ಯಾನ ಮಾಡುತ್ತಿದ್ದಳು.ಅವಳು ಊಟ, ನೀರನ್ನು ತ್ಯಜಿಸಿದಳು,ಅವಳ ಸ್ನೇಹಿತೆಯರು ಮತ್ತು ಅವಳ ತಾಯಿ ಅವಳನ್ನು ತಡೆಯಲು ಎಷ್ಟು ಪ್ರಯತ್ನಿಸಿದರೂ ಅವಳು ಕೇಳುತ್ತಿರಲಿಲ್ಲ.

ಒಂದು ದಿನ ಅವಳು ನದಿಯಿಂದ ಹೊರಗೆ ಬರಬೇಕಾದರೆ ಒಬ್ಬ ಮುದುಕನನ್ನು ಕಂಡಳು. ಅವನು “ನೀನೇಕೆ ಇಷ್ಟು ದೃಢವಾಗಿ ಧ್ಯಾನ ಮಾಡುತ್ತಿರುವೆ ?”ಎಂದು ಕೇಳಿದನು.ಪಾರ್ವತಿಯು ಅದಕ್ಕೆ ಕಾರಣವನ್ನು ಹೇಳಿದಳು.

ಮುದುಕನು ನಕ್ಕು, “ಅವನೊಬ್ಬ ಭಿಕ್ಷುಕ,ಅವನಿಗೆ ಧರಿಸಲು  ಸರಿಯಾದ ಬಟ್ಟೆಗಳು ಸಹ ಇಲ್ಲ! ಅವನ ಮೈ ಮೇಲೆ ಹಾವುಗಳು ಹೊರಳಾಡುತ್ತವೆ. ಅವನು ಸ್ಪಶಾನಗಳಲ್ಲಿಯೋ ,ಗುಹೆಗಳಲ್ಲಿಯೋ ವಾಸಿಸುತ್ತಾನೆ. ಅಂಥವನಿಗಾಗಿ ನೀನು ಧ್ಯಾನಿಸುತ್ತಿದ್ದೀಯಾ ?ಎಂದು ಕೇಳಿದನು.

ಪಾರ್ವತಿಯು ಕೋಪಗೊಂಡು , “ಶಿವನು ಎಲ್ಲಾ ದೇವತೆಗಳಿಗಿಂತ ಶ್ರೇಷ್ಠನಾದವನು.ನಾನು ಅವನನ್ನು ಪ್ರೀತಿಸುತ್ತೇನೆ.ಅವನ ಬಗ್ಗೆ ಇಂತಹ ಮಾತುಗಳನ್ನು ನಾನು ಕೇಳುವುದಿಲ್ಲ.ನೀನು ಹೀಗೆ ಮಾತನಾಡಿದರೆ ನಿನಗೆ ಶಾಪ ಹಾಕುತ್ತೇನೆ” ಎಂದಳು.

 

 

ಮುದುಕನು ನಕ್ಕು, ಶಿವನನ್ನು ಹಾಸ್ಯ ಮಾಡುವುದನ್ನು ಮುಂದುವರೆಸಿದನು. ಪಾರ್ವತಿಯು ಅವನಿಗೆ ಶಾಪ ಹಾಕಲು ಹೋದಾಗ,ಅವನು ಪಾರ್ವತಿಯ ಕೈಯನ್ನು ಹಿಡಿದು ತನ್ನ  ನಿಜ ರೂಪವನ್ನು ತೋರಿಸಿದನು.ಅವಳು ತನ್ನನ್ನು ಪ್ರೀತಿಸುತ್ತಿದ್ದುದನ್ನು ಕಂಡು ಸಂತೋಷಪಟ್ಟು ತನ್ನನ್ನು ಮದುವೆಯಾಗಲು ಕೇಳಿಕೊಂಡನು.

ಶಿವನು ಪಾರ್ವತಿಯನ್ನು ಮದುವೆ ಮಾಡಿಕೊಡಲು ರಾಜ ಹಿಮವನ್ ನನ್ನು ಕೇಳಿಕೊಂಡನು.ಶೀಘ್ರದಲ್ಲೇ ಅವರಿಬ್ಬರೂ ಮದುವೆಯಾಗಿ ಕೈಲಾಸಕ್ಕೆ ಹಿಂದಿರುಗಿದನು.ಅವರಿಗೆ ಕಾರ್ತಿಕೇಯ ಎಂಬ ಮಗ ಹುಟ್ಟಿದನು.ಅವನು ರಾಕ್ಷಸನಾದ ತಾರಕಾಸುರನನ್ನು ಕೊಂದನು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top