fbpx
ದೇವರು

ಅಕ್ಟೋಬರ್ 5ನೇ ತಾರೀಖು ಶರದ್ ಪೌರ್ಣಮಿ ದಿನ ರಾತ್ರಿ ಈ ಕೆಲಸ ಮಾಡಿದ್ರೆ ನೀವು ಅಂದುಕೊಂಡಿರೋ ಕೆಲಸಗಳು, ಹಣ-ಕಾಸಿನ ಸಮಸ್ಯೆ ದೂರ ಆಗುತ್ತೆ

ಅಕ್ಟೋಬರ್ 5ನೇ ತಾರೀಖು ಶರದ್ ಪೌರ್ಣಮಿಯಂದು ಮಾಡಬೇಕಾದ ಉಪಾಯ.

ಅಕ್ಟೋಬರ್ 5ನೇ ತಾರೀಖು ಶುಕ್ಲ ಪಕ್ಷದ,ಅಶ್ವಿನಿ ಮಾಸದ, ಗುರುವಾರ ಪೂರ್ವಭಾದ್ರಪದ ನಕ್ಷತ್ರದಲ್ಲಿ ಶರದ್ ಪೌರ್ಣಮಿಯು  ಬಂದಿದೆ. ಈ ವರ್ಷದ ಅಮೃತಮಯ ರಾತ್ರಿ  ಶರದ್ ಪೌರ್ಣಮಿಯ ದಿನವು  ಅತ್ಯಂತ  ಮಹತ್ವಪೂರ್ಣವಾದ ದಿನವಾಗಿದ್ದು. ಆ ದಿನ ಯಾವುದೇ ಉಪಾಯ ಮಾಡಿದರೂ ತುಂಬಾ ಶಕ್ತಿಶಾಲಿಯಾಗಿ ಪರಿಣಾಮ ಬೀರುವುದು.ಶಾಸ್ತ್ರಗಳಲ್ಲಿ ಹೇಳಿರುವದೇನೆಂದರೆ ನೀವು ಈ ವಿಶೇಷ ದಿನದಂದು ಯಾವುದೇ ಉಪಾಯ ಮಾಡಿದರೂ ಸಹ ಅದೃಷ್ಟ ದ್ವಿಗುಣವಾಗ್ವುದಲ್ಲದೇ ಅದೃಷ್ಟದ ಬಾಗಿಲು ತೆರೆಯುವುದು.

 

 

ಏಲಕ್ಕಿಯ ಒಂದು ಚಮತ್ಕಾರಿ ಉಪಾಯವನ್ನು ಇಲ್ಲಿ ಇಂದು ನಾವು ನಿಮಗೆ ತಿಳಿಸುತ್ತಿದ್ದೇವೆ.ಇದನ್ನು ನೀವು ಶರದ್ ಪೌರ್ಣಮಿಯ ರಾತ್ರಿ ಅಕ್ಟೋಬರ್ 5 ನೇ ತಾರೀಖು ಗುರುವಾರ ಮಾಡಬಹುದು.ಏಲಕ್ಕಿ  ಎಷ್ಟೇ ಚಿಕ್ಕದಾಗಿದ್ದರು ಅದರ ಮಹತ್ವ ಬಹಳ ದೊಡ್ಡದಿದೆ.ನಾವು ತಿನ್ನುವ  ಆಹಾರದಲ್ಲಿ ಅಡಿಗೆಯಲ್ಲಿ  ಮಿಶ್ರಣ ಮಾಡಿದರೆ ಸ್ವಾದ ರುಚಿ ಹೆಚ್ಚುವುದು,ಟೀಯಲ್ಲಿ ಕೂಡ ಇದನ್ನು ಟೀಯ ಸ್ವಾದ ಮತ್ತು ರುಚಿ ಕೂಡ ಸವಿಯಲು ಚೆನ್ನಾಗಿರುವುದು. ಅಷ್ಟೇ ಅಲ್ಲ ಎಲಕ್ಕಿಯಲ್ಲಿ  ಬಹಳಷ್ಟು ಔಷಧೀಯ ಗುಣಗಳು ಸಹ ಇವೆ.

 

 

ಇದರ ಜೊತೆಗೆ ನೀವು ಶಾಸ್ತ್ರದಲ್ಲಿ ಹೇಳಿರುವ ಈ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಅದೃಷ್ಟ ಅವಶ್ಯವಾಗಿ ಬದಲಾಗಿ ಅದೃಷ್ಟದ ಬಾಗಿಲು ತೆರೆಯುವುದು.ನಿಮಗೆ ಹಣದ ಸಮಸ್ಯೆ ಇದ್ದರೆ ಅಂತಹವೆಲ್ಲವೂ ಸಹ ಪರಿಹಾರವಾಗುವುದು.

ಮೊದಲು 5 ಸಣ್ಣ ಏಲಕ್ಕಿಯನ್ನು ತೆಗೆದುಕೊಂಡು ನಿಮ್ಮ ಪಾರ್ಸ್ ನಲ್ಲಿ ಇಟ್ಟುಕೊಳ್ಳಿ ಸ್ವಲ್ಪ ದಿನದಲ್ಲೇ ನಿಮ್ಮ ಹಣಕ್ಕೆ ಸಂಬಂಧಪಟ್ಟ ಸಮಸ್ಯೆ ದೂರವಾಗುವುದು.ನಿಮ್ಮ ಮನೆಯಲ್ಲಿ ಖುಷಿಯ ವಾತಾವರಣವೂ ಸಹ ನಿಮ್ಮದಾಗುವುದು.

 

 

ನೀವು ನಿಮ್ಮ ಮನಸ್ಸಿನ ಇಷ್ಟದಂತೆ  ನಿಮ್ಮ ಪ್ರೀತಿಯನ್ನು ,ಬಾಳ ಸಂಗಾತಿಯನ್ನು  ಪಡೆಯಬೇಕಾದರೆ ಹಳದಿ  ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಅದರೊಳಗೆ  ಐದು ಏಲಕ್ಕಿಯನ್ನು ಯಾವುದಾದರೂ ವ್ಯಕ್ತಿಗೆ ದಾನವಾಗಿ ಕೊಡಿ.ಆಗ ನಿಮ್ಮ ಮದುವೆ ನೀವು ಇಷ್ಟ ಪಟ್ಟಿರುವವರ ಜೊತೆ  ಬೇಗನೇ ನೆರವೇರುವುದು.

 

 

ನೀವು ನಿಮ್ಮ ಜೀವನದಲ್ಲಿ ತುಂಬಾ ಕಷ್ಟ ಪಡುತ್ತಿದ್ದೀರಾ ? ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ,ಯಶಸ್ಸು ಸಿಗುತ್ತಿಲ್ಲವೇ ? ಹಾಗಾದರೆ ಶರದ್ ಪೌರ್ಣಮಿಯ ರಾತ್ರಿಯ ಸಮಯದಲ್ಲಿ ಹಸಿರು ಬಣ್ಣದ ಬಟ್ಟೆಯಲ್ಲಿ ಐದು ಏಲಕ್ಕಿಯನ್ನು ತೆಗೆದುಕೊಂಡು ಹಸಿರು ಬಣ್ಣದ ಬಟ್ಟೆಯೊಳಗೆ ಸುತ್ತಿಟ್ಟು ಅದನ್ನು ನೀವು ರಾತ್ರಿ ಮಲಗಬೇಕಾದರೆ ನಿಮ್ಮ ದಿಂಬಿನ ಕೆಳಗೆ ಇಟ್ಟು ಮಲಗಿ.ಬೆಳಗ್ಗೆ ಸೂರ್ಯೋದಯ ಆದ ಮೇಲೆ ಅದನ್ನು ಹರಿಯುವ ನೀರಿನಲ್ಲಿ ತೇಲಿ ಬಿಡಿ.ಹೀಗೆ ಮಾಡುವುದರಿಂದ ನಿಮ್ಮ ಈ ಕಷ್ಟವೂ ದೂರವಾಗುವುದು.ನಿಮಗೆ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುವುದು.ಕೆಲಸ ಮಾಡಲು ಮನಸ್ಸು ಸಹ ಮೂಡುವುದು.ಉಲ್ಲಾಸದಿಂದ ಇರುವಿರಿ.

 

 

ಹಾಗೆ ಶ್ರೀ ಸೂಕ್ತವನ್ನು  ಪೌರ್ಣಮಿಯ ದಿನ ರಾತ್ರಿ ಓದಿದರೆ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published. Required fields are marked *

To Top