ಮಾಹಿತಿ

ಕೆಲವು ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಇರುತ್ತದೆ ಕೆಲವಕ್ಕೆ ಕೀ ಚೈನ್ ಇರೋದಿಲ್ಲ..ಯಾಕೆ ಗೊತ್ತಾ?

ಕೆಲವು ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಇರುತ್ತದೆ ಕೆಲವಕ್ಕೆ ಕೀ ಚೈನ್ ಇರೋದಿಲ್ಲ..ಯಾಕೆ ಗೊತ್ತಾ?

 

 

ನಮ್ಮ ಸುತ್ತ ಮುತ್ತ ನಡೆಯುವ ಅನೇಕ ಘಟನೆಗಳು, ವಸ್ತುಗಳು ನಮ್ಮಲ್ಲಿ ಅನೇಕ ಕುತೂಹಲಗಳನ್ನು ಕೆರಳಿಸುತ್ತವೆ. ಆ ರೀತಿಯ ವಸ್ತುಗಳಲ್ಲಿ ವಿಕ್ಸ್ ಇನ್‌ಹೇಲರ್‌ ಗಳೂ ಕೂಡ ಒಂದು. ವಿಕ್ಸ್ ಇನ್‌ಹೇಲರ್‌ ಗಳಲ್ಲಿ ಕೂತಹಲಕಾರಿಯಾದ ವಿಶೇಷ ಸಂಗತಿ ಏನಿದೆ ಅಂತೀರಾ..? ಮುಂದೆ ಓದಿ.

 

 

ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಚಳಿಗಾಲದಲ್ಲಿ ನೆಗಡಿಯಾಗುತ್ತಿರುತ್ತದೆ ನೆಗಡಿಯಿಂದ ಪರಿಹಾರ ಕಂಡುಕೊಳ್ಳಬೇಕೆಂದು ಬಹುತೇಕ ಮಂದಿ ಈ ಇನ್‌ಹೇಲರ್‌ ಗಳನ್ನು ಬಳಸಿಕೊಳ್ಳುತ್ತಾರೆ. ಈ ಇನ್‌ಹೇಲರ್‌ ಗಳನ್ನು ಸರಿಯಾಗಿ ಗಮನಿಸಿದರೆ ಒಂದು ವಿಷಯ ತಿಳಿಯುತ್ತದೆ ಅದೇನೆಂದರೆ ಒಮ್ಮೊಮ್ಮೆ ವಿಕ್ಸ್ ಇನ್‌ಹೇಲರ್‌ ಗಳು ಕೀ ಚೈನ್ ಅನ್ನು ಹೊಂದಿರುತ್ತವೆ, ಇನ್ನು ಕೆಲವೊಮ್ಮೆ ಕೀ ಚೈನ್ ಇರುವುದಿಲ್ಲ. ಯಾಕೆ ಹೀಗೆ

 

 

ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಯಾಕೆ ಇರುತ್ತದೆ ..?

ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಇದ್ದರೆ ಅದನ್ನು ಜನರು ಹುಷಾರಾಗಿ ಇಟ್ಟುಕೊಳ್ಳುತ್ತಾರೆ. ಅದು ಎಲ್ಲೇ ಇದ್ದರೂ ಸುಲಭವಾಗಿ ಅವರ ಕೈಗೆ ಸಿಗುತ್ತದೆ. ಆದರೆ ಕೀ ಚೈನ್ ಇಲ್ಲದ ವಿಕ್ಸ್ ಇನ್‌ಹೇಲರ್ ಸುಲಭವಾಗಿ ಕಳೆದು ಹೋಗುತ್ತದೆ. ಆದ್ದರಿಂದ ಕೆಲವು ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಇರುತ್ತದೆ.,

 

 

ಕೆಲವು ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಯಾಕೆ ಇರಲ್ಲ.?

ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಇದ್ದರೆ ಅದನ್ನು ಜನರು ಹುಷಾರಾಗಿ ಇಟ್ಟುಕೊಳ್ಳುತ್ತಾರೆ ಆಗ ಇನ್‌ಹೇಲರ್‌ ತಯಾರಿಕಾ ಕಂಪನಿಗಳಿಗೆ ಪರೋಕ್ಷವಾಗಿ ಲಾಸ್ ಆಗುತ್ತದೆ. ಅಲ್ಲದೆ ಕೀ ಚೈನ್ ಅಳವಡಿಸೋಕೆ ಹೆಚ್ಚುವರಿ ವೆಚ್ಚ ತಗಲುತ್ತದೆ ಹಾಗಾಗಿ ಇನ್‌ಹೇಲರ್‌ ಜತೆಗೆ ಕೀ ಚೈನ್ ಕೊಡದಿದ್ದರೆ ಅಧಿಕ ಲಾಭ ಪಡೆಯಬಹುದು ಎಂದು ಕೆಲವು ವಿಕ್ಸ್ ಇನ್‌ಹೇಲರ್‌ ಗಳಿಗೆ ಕೀ ಚೈನ್ ಇರೋದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top