fbpx
ಸಮಾಚಾರ

ನಟಿ ಸರಿತಾರವರಿಗೆ ಅವರ ಗಂಡಂದಿರು ಕೊಟ್ಟಿರುವ ನರಕ ಯಾತನೆಯನ್ನ ತಿಳ್ಕೊಂಡ್ರೆ ಪಾಪ ಅನ್ಸುತ್ತೆ.

ನಟಿ ಸರಿತಾರವರಿಗೆ ಅವರ ಗಂಡಂದಿರು ಕೊಟ್ಟಿರುವ ನರಕ ಯಾತನೆಯನ್ನ ತಿಳ್ಕೊಂಡ್ರೆ ಪಾಪ ಅನ್ಸುತ್ತೆ.

 

 

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ತನ್ನದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದ ಹಿರಿಯ ನಟಿ ಸರಿತಾ ರವರ ಸ್ಥಿತಿ ಶೋಚನೀಯ ವಾಗಿದೆ..ಕನ್ನಡದಲ್ಲಿ ಡಾ.ವಿಷ್ಣು,ಶ್ರೀನಾಥ್,ರಾಜಕುಮಾರ್, ಅನಂತನಾಗ್ ರಂತ ದೊಡ್ಡ ಕಲಾವಿದರೊಂದಿಗೆ ನಟಿಸಿದ್ದ ಮಹಾನ್ ನಟಿಯ ಬಾಳಿನಲ್ಲಿ ಬೆಂಕಿ ಬಿರುಗಾಳಿಗಳು ತಾಂಡವ ಹಾಡಿವೆ… ಮುಂದೆ ಓದಿ..

 

 

ಚಿತ್ರರಂಗದಲ್ಲಿ ಯಶಸ್ಸನ್ನು ಕಂಡಿದ್ದ ಸರಿತಾರವರು ತಮ್ಮ ಸಾಂಸಾರಿಕ ಜೀವನದಲ್ಲಿ ಯಶಸ್ಸನ್ನು ಕಾಣಲು ವಿಫಲರಾದರು. ಸರಿತಾರವರು ತಮ್ಮ 16ನೇ ವಯಸ್ಸಿನಲ್ಲೇ ತೆಲುಗು ನಟ ವೆಂಕಟ ಸುಬ್ಬಯ್ಯ ಎಂಬುವವರ ಜೊತೆ 1975 ರಲ್ಲಿ ಮದುವೆಯಾಗಿದ್ದರು. ಆದರೆ ಗಂಡನ ಕಿರುಕುಳವನ್ನು ತಾಳಲಾರದೆ ಮದುವೆಯಾದ ಆರು ತಿಂಗಳಿಗೇ ವಿಚ್ಛೇದನವನ್ನು ಪಡೆದುಕೊಂಡರು. ಪತಿಯಿಂದ ವಿಚ್ಛೇದನವನ್ನು ಪಡೆದ ಸರಿತಾರವರು ಸುಮಾರು ಹನ್ನೆರಡು ವರ್ಷಗಳ ಕಾಲ ಒಂಟಿಯಾಗಿ ಜೀವನವನ್ನು ಸಾಗಿಸುತ್ತಾರೆ..

 

 

ಸರಿತಾ ರವರು 1988ರಲ್ಲಿ ಮಲೆಯಾಳಂ ನಟ ಮುಕೇಶ್ ರನ್ನು ಮರುಮದುವೆಯಾಗುತ್ತಾರೆ ಆದರೆ ಆತನು ಕೂಡ ಸರಿತಾರವರಿಗೆ ನರಕಯಾತನೆಯನ್ನು ಕೊಡುತ್ತಾನೆ. ಆತ ಸರಿತಾಗೆ ಚಿತ್ರಗಳಲ್ಲಿ ನಟಿಸದಂತೆ ಬೆದರಿಕೆ ಹಾಕುತ್ತಿದ್ದ ಅಲ್ಲದೆ ಪ್ರತಿ ದಿನ ಕುಡಿದು ಸರಿತಾರವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದ ಈ ಘಟನೆಗಳಿಂದ ಮನನೊಂದ ಸರಿತಾಇಲ್ಲೇ ಇದ್ದಾರೆ ತನ್ನ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಯೋಚಿಸಿ ಕೊನೆಗೆ ತನ್ನ ಎರಡು ಮಕ್ಕಳ ಜೊತೆ ಈ ದೇಶವನ್ನೇ ಬಿಟ್ಟು ದೂರದ ದುಬೈಗೆ ಹೋಗಿ ತನ್ನ ಜೀವನವನ್ನು ಸಾಗಿಸುತ್ತಾರೆ.

 

 

ಸರಿತಾರವರು ದುಬೈನಲ್ಲಿದ್ದಾಗ ಭಾರತದಲ್ಲಿದ್ದ ಮುಕೇಶ್ ರವರು ಮತ್ತೊಂದು ಮದುವೆಯಾಗುತ್ತಾರೆ “ತನಗೆ ವಿಚ್ಛೇದನ ನೀಡದೆ ಮುಕೇಶ್ ಮತ್ತೊಬ್ಬರನ್ನು ವರಿಸಿದ್ದಾರೆ ನಾನು ಭಾರತದಲ್ಲಿಲ್ಲದ ವೇಳೆ ಮುಕೇಶ್ ಇನ್ನೊಂದು ಮದುವೆಯಾಗಿದ್ದಾರೆ. ಅವರು ನನಗೆ ಜೀವನಾಂಶವನ್ನೂ ಕೊಟ್ಟಿಲ್ಲ ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಸರಿತಾ ಹೇಳಿದ್ದರು.

 

 

ಮುಕೇಶ್ ರ ಎರಡನೇ ಮಾಡುವೆ ಕಾನೂನು ಬದ್ದವಾಗಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ ಸರಿತಾಗೆ ಇನ್ನೂ ನ್ಯಾಯ ದೊರಕೇ ಇಲ್ಲ, ಸದ್ಯ ಮುಕೇಶ್ ರವರು ತಮ್ಮ ಎರಡನೇ ಕುಟುಂಬದ ಜೊತೆ ಎರ್ನಾಕುಳಂನಲ್ಲಿ ವಾಸಮಾಡುತ್ತಿದ್ದರೆ ಇತ್ತ ಸರಿತಾ ರವರು ತಮ್ಮ ಇಬ್ಬರು ಮಕ್ಕಳ ಜೊತೆ ದುಬೈನಲ್ಲಿ ನೆಲೆಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top