fbpx
ದೇವರು

ಅಲ್ಕಾನಂದ ನದಿ ತೀರದಲ್ಲಿರೋ ಈ ದೇವಿ ಬೆಳಗ್ಗೆ ಬಾಲಕಿಯಾಗಿ,  ಮಧ್ಯಾಹ್ನ ಯುವತಿಯಾಗಿ,ಸಂಜೆ ವೃದ್ದೆಯಾಗಿ ಬದಲಾಗಿ ಬರೋ ಭಕ್ತರ ಸಂಕಟ ನಿವಾರಣೆ ಮಾಡ್ತಾಳಂತೆ

ಬೆಳಗ್ಗೆ ಬಾಲಕಿಯಾಗಿ,  ಮಧ್ಯಾಹ್ನ ಯುವತಿಯಾಗಿ,ಸಂಜೆ ವೃದ್ದೆಯಾಗಿ ಬದಲಾಗುತ್ತಿರುವ ಈ ಧರಿದೇವಿಯನ್ನು  ಸತ್ಯ ಸಂಗತಿಗಳು.

ಬೆಳಗ್ಗೆ ಬಾಲಕಿಯಾಗಿ ,ಮಧ್ಯಾಹ್ನ ಯುವತಿಯಾಗಿ,ಸಂಜೆಯ ಸಮಯದಲ್ಲಿ ವೃದ್ದೆಯಾಗಿ ಬದಲಾಗುತ್ತಿರುವ ಹೀಗೆ ಒಂದು ದಿನಕ್ಕೆ ಮೂರು ರೂಪದಲ್ಲಿ ದರ್ಶನ ನೀಡುವ ಜಗನ್ಮಾತೆಯೇ ಉತ್ತರ ಭಾರತದ ಉತ್ತರಾಖಂಡದ ರಾಜ್ಯದಲ್ಲಿರುವ ಗರ್ವಾಲ್ ಶ್ರೀನಗರ ಪ್ರಾಂತ್ಯದ  ಅಲ್ಕಾನಂದ ನದಿಯ ತೀರದಲ್ಲಿ ಇರುವ ಧರಿದೇವಿ ದೇವಸ್ಥಾನ.

 

 

ಅಲ್ಲಿನ ಭಕ್ತರು ದೇವಿಯನ್ನು ಧರಾ ಮಾತಾ ಎಂದು ಕರೆಯುತ್ತಿದ್ದಾರೆ.ಈ ದೇವಾಲಯದ ಬಗ್ಗೆ ಜಗನ್ಮಾತೆಯಾದ ಧರಿದೇವಿಯ ಬಗ್ಗೆ ಮತ್ತು  ಈ ದೇವಾಲಯದಲ್ಲಿ ಅಡಗಿರುವ ರಹಸ್ಯಗಳ ಬಗ್ಗೆ ತಿಳಿಯೋಣ ಬನ್ನಿ….

ಧರಿದೇವಿಯನ್ನು ಪೂಜಿಸುವ ಭಕ್ತರಿಗೆ ರಕ್ಷಣೆಯಾಗಿ ನಿಂತು ಆಶೀರ್ವದಿಸಿ ಅರಸುತ್ತಾಳೆ.ಒಂದು ವೇಳೆ ಆಕೆಯ ಅಸ್ತಿತ್ವದ ಬಗ್ಗೆ ಸಂದೇಹ ಮತ್ತು ಧಿಕ್ಕಾರ ಮಾಡಿದರೆ ಸಾಕು ಅವರಿಗೆ ಅನಿಷ್ಟ, ಕೆಡುಕು ತಪ್ಪಿದ್ದಲ್ಲ ಎನ್ನುತ್ತಾರೆ ಅಲ್ಲಿನ ಭಕ್ತರು.ಅದಕ್ಕೆ ಪೂರಕವೆಂಬಂತೆ ಅಲ್ಲಿ ಕೆಲವು ಘಟನೆಗಳು ಜರುಗಿ ಅಲ್ಲಿ ದೇವಿ ಇರುವಳು ಎನ್ನುವುದಕ್ಕೆ ಸಾಕ್ಷಿಯನ್ನು ಸಾಬೀತುಪಡಿಸಿ ಅವಳ ಅಸ್ತಿತ್ವವನ್ನು  ಹೇಳುತ್ತಿವೆ.108 ಶಕ್ತಿ ಪೀಠಗಳಲ್ಲಿ ದರಿದೇವಿಯು ಒಂದು ಎಂದು ಭಾಗವತ್ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಧರಿ ದೇವಿ ಮಂದಿರದ ವಿಶೇಷತೆಗಳು.

ಧರಿದೇವಿಗೆ ಮಹಡಿ ಅಂದರೆ ಮೇಲ್ಛಾವಣಿ ಇಲ್ಲ.ಧರಿದೇವಿಯು ಅಕಾಶವನ್ನೇ ಮೇಲ್ಛಾವಣಿ ಮಾಡಿಕೊಂಡು ನೆಲೆಸಿದ್ದಾಳೆ ಅಂದರೆ ದೇವಾಲಯದ ಮೇಲೆ ಗೋಡೆ ಅಥವಾ ಚತ್ ಇಲ್ಲ.ಈ ದೇವಿಗೆ ಮೇಲ್ಛಾವಣಿ ಇಲ್ಲದೇ ಇರುವುದೇ ಇಷ್ಟ ಎಂದು ಆಕೆಯ ಭಕ್ತರು ಹೇಳುತ್ತಾರೆ.

ಹಾಗೆ ಆ ಕಡೆಯಿಂದ  ನದಿಯ ದಡದ ಮೇಲೆ  ಧರಿ ಎಂಬ ಊರು ಕೂಡ  ಇದೆ.ಈ ದೇವಿಯ ಮಂದಿರವನ್ನು ಮತ್ತು ಆ ಗ್ರಾಮವನ್ನು  ಸೇರಿಸಲು   ಅಲ್ಕಾನಂದ ನದಿಯ ಮೇಲೆ ಸೇತುವೆಯನ್ನು ಸಹ ನಿರ್ಮಿಸಲಾಗಿದೆ.ಅಲ್ಕಾನಂದ ನದಿಯನ್ನು  ಆ ತಾಯಿಯು ಕಣ್ಣ ಸನ್ನೆಯಲ್ಲಿಯೇ  ನಿಯಂತ್ರಿಸಲ್ಪಡುತ್ತದೆ ಎಂದು ಹೇಳುತ್ತಾರೆ.ಆದ್ದರಿಂದ ಈ ನದಿಯ ಪ್ರಶಾಂತವಾಗಿ, ಗಾಂಭೀರ್ಯವಾಗಿ ಹರಿಯುವುದರಿಂದ  ಜೊತೆಗೆ ಜನ, ಜಾನುವಾರುಗಳಿಗೆ ಆಹಾರ, ಆರೋಗ್ಯವನ್ನು  ಸಹ ನೀಡುತ್ತದೆ  ಎನ್ನುವುದು ಜನರ ನಂಬಿಕೆಯಾಗಿದೆ.

 

 

ಇನ್ನೂ ಕೆಲವು ಸಾವಿರ ವರ್ಷಗಳ ಹಿಂದೆಯೇ ಈ ದೇವಾಲಯ ಅಸ್ಥಿತ್ವದಲ್ಲಿ ಇತ್ತೆಂದು ಮಹಾಭಾರತದಲ್ಲಿಯೂ ಸಹ ಈ ಮಂದಿರದ ಬಗ್ಗೆ ಉಲ್ಲೇಖವಾಗಿದೆ.

ಮಹಾ ಕಾಳಿ ಅವತಾರದಲ್ಲಿ ಧರಿ ದೇವಿ ಮಾತೆಯು ಈ ಪ್ರದೇಶದಲ್ಲಿ ನೆಲೆಸಿದ್ದಾಳೆ.ಆದ್ದರಿಂದ ಇಲ್ಲಿ ಅತ್ಯದ್ಬುತವಾದ ಅಮೋಘವಾದ ನಿಗೂಢ ಶಕ್ತಿ ಅಡಗಿದೆ ಎನ್ನುತ್ತಾರೆ ಪಂಡಿತರು.

ಈ ದೇವಾಲಯದ ಸ್ಥಳ ,ಪುರಾಣ,ಇತಿಹಾಸದ ಪ್ರಕಾರ ಕ್ರಿಸ್ತಶಕ 1882 ರಲ್ಲಿ ಕೇದಾರನಾಥ ಪ್ರಾಂತ್ಯವನ್ನು ಒಬ್ಬ ಮುಸ್ಲಿಂ ಸಮುದಾಯದ ರಾಜನು ಈ ಮಂದಿರವನ್ನು ಕೆಡವಿ ಅಂದರೆ ನೆಲಸಮ ಗೊಳಿಸಿ ಅಲ್ಲಿ ಒಂದು ಮಸೀದಿಯನ್ನು ನಿರ್ಮಿಸಲು ಪ್ರಯತ್ನಿಸಿದನಂತೆ.ಈ ರಾಜನು ಇಂತಹ ಘೋರ ಅಪರಾಧವನ್ನು ಎಸಗಲು ಮುಂದಾದಾಗ ಕೇದಾರನಾಥ ಪರ್ವತಗಳು ಮುರಿದು ಬಿದ್ದವು.ಈ ಅಪರಾಧದಿಂದ ಪ್ರಕೃತಿಯಲ್ಲಿ ವಿಪತ್ತು ಸಂಭವಿಸಿ.ಸಾವಿರಾರು ಜನರನ್ನು ಅದು ಬಲಿ ತೆಗೆದುಕೊಂಡಿತ್ತು ಎಂದು ಇಲ್ಲಿನ ಜನರು ಹೇಳುತ್ತಾರೆ.ಇಂತಹ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ರಾಜನು ತನ್ನ ತಪ್ಪಿನ ಅರಿವಾಗಿ ತನ್ನ ಪ್ರಯತ್ನವನ್ನು ಅಲ್ಲಿಗೇ ಕೈಬಿಟ್ಟು ನಿಲ್ಲಿಸುತ್ತಾನೆ.ಅಂದಿನಿಂದ ಇಂದಿನವರೆಗೂ ಆ ವಿಷಯಕ್ಕೆ ಯಾರಾದರೂ ಕೈ  ಹಾಕಿದರೆ ಧರಿ ದೇವಿಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ.ಇದು ಅಲ್ಲಿ ವಾಸಿಸುವ ಸುತ್ತ ಮುತ್ತಲಿನ ಜನರ ಮನಸ್ಸಿನಲ್ಲಿ ಬೇರೂರಿದೆ.

ಇನ್ನೂ ಧರಿ ದೇವಿಯ ಗರ್ಭಗುಡಿಯ ಒಳಗೆ ನೋಡಿದಾಗ ಧರಿ ದೇವಿ ಮಾತೆಯ ಮೇಲಿನ ಅರ್ಧ ಭಾಗವು ಮಾತ್ರ ನಮಗೆ ಕಾಣಸಿಗುತ್ತದೆ.ಇನ್ನೂಳಿದ ಅರ್ಧ ಭಾಗ ಕಾಲ ಮಾಟದಲ್ಲಿ ಇರುವುದು.

 

 

ಧರಿ ಮಾತೆಯನ್ನು ಆಶ್ರಯಿಸಿ ಹೋದವರಿಗೆ ಆಕೆ ಎಂದಿಗೂ ಸಹ ಕೈ ಬಿಡುವುದಿಲ್ಲ ಎಂದು ನಂಬಿಕೆ. ಇನ್ನೂ  ಧಿಕ್ಕರಿಸಿ ತಿರಸ್ಕರಿಸಿದ ಜನರಿಗೆ ಆಕೆಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಇಲ್ಲಿನ ಭಕ್ತರ ಬಲವಾದ ನಂಬಿಕೆಯಾಗಿದೆ.ಅದಕ್ಕೆ ಸಾಕ್ಷಿ ಎಂಬಂತೆ ಉತ್ತರಾಖಂಡದ ರಾಜ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ನೆರೆ ಪ್ರವಾಹಕ್ಕೆ ಈ ದೇವಿಯ ಮಂದಿರವನ್ನು ಅಲ್ಲಿಂದ ತೆಗೆಸಿದ್ದೆ ಮುಖ್ಯ ಕಾರಣ ಎನ್ನುತ್ತಿದ್ದಾರೆ ಇಲ್ಲಿನ ಜನರು.

 

 

ಶ್ರೀ ನಗರದ ವಿದ್ಯುತ್ ಸರಬರಾಜು ಯೋಜನೆಯಗಾಗಿ (hydro electrical power project) ಉತ್ತರಾಖಂಡ ರಾಜ್ಯ ಸರ್ಕಾರವೂ ಧರಿದೇವಿಯ ವಿಗ್ರಹವನ್ನು ಅಲ್ಲಿಂದ ತೆಗೆದು ಸಮೀಪದಲ್ಲಿರುವ ಮತ್ತೊಂದು ಪರ್ವತದ ಮೇಲೆ ಪ್ರತಿಷ್ಠಾಪಿಸಲು ಹೊರಟಾಗ ಮರುದಿನವೇ ಊಹಿಸಲಾಗದ ಕುಂಭ ದ್ರೋಣ ಮಳೆಯು ಅಧಿಕವಾಗಿ ಮಳೆಸುರಿದ ಕಾರಣ ಪ್ರವಾಹ ಬಂದು ಅಲ್ಕಾನಂದ ನದಿ ಮಹಾ ಉಗ್ರರೂಪ ತಾಳಿ ದೇವಿಯು ತಾಂಡವವಾಡಿದಳಂತೆ,ಇದರಿಂದಾಗಿ ಸುಮಾರು 10,000 ಜನರು ಪ್ರಾಣವನ್ನು ಕಳೆದುಕೊಂಡರು.

ನಿಜವಾಗಿ ಹೇಳಬೇಕೆಂದರೆ ಕಾಳಿ ಮಾಟದಲ್ಲಿ ಉಳಿದ ಶರೀರದ ಭಾಗ ಇರೋದಿಲ್ಲವಂತೆ ಆ ಸ್ಥಾನದಲ್ಲಿ ಶ್ರೀ ಯಂತ್ರ ಅಂದರೆ ಶ್ರೀ ಚಕ್ರವನ್ನು ಪೂಜಿಸಲಾಗುತ್ತದೆಯಂತೆ.

 

 

ಜಗದ್ಗುರು  ಶ್ರೀ ಆದಿಶಂಕರಾಚಾರ್ಯರು ಸ್ಥಾಪಿತವಾಗಿರುವ ಶ್ರೀ ಚಕ್ರವನ್ನು ಆ ಜಗನ್ಮಾತೆಯ  ಯೋನಿಯ ಪ್ರತಿರೂಪವಾಗಿ ಭಾವಿಸುತ್ತಾರೆ.

ಈ ಶಕ್ತಿ ಪೀಠಕ್ಕೆ ಉತ್ತರ ದಿಕ್ಕಿನಲ್ಲಿ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ಆಲಯ ನೆಲೆಸಿದೆ.ಇನ್ನೂ ಶಕ್ತಿ ಸ್ವರೂಪಿಣಿಯಾದ ಆ ಜಗನ್ಮಾತೆಯ ಮೂರು ರೂಪಗಳನ್ನು ಮೂರು ಸಮಯದಲ್ಲಿ ಬದಲಾಗುವುದನ್ನು ನೋಡೋದೇ ವಿಶೇಷ ಎಂದು ಹೇಳುತ್ತಾರೆ ಇಲ್ಲಿನ ಜನರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top