fbpx
ಸಮಾಚಾರ

ಜಯದೇವ ಆಸ್ಪತ್ರೆಯ ವತಿಯಿಂದ ಬಡವರಿಗೆ ಉಚಿತ ಹೃದಯ ಚಿಕಿತ್ಸಾ ಕಾರ್ಯಕ್ರಮ..!

ಜಯದೇವ ಆಸ್ಪತ್ರೆಯ ವತಿಯಿಂದ ಬಡವರಿಗೆ ಉಚಿತ ಹೃದಯ ಚಿಕಿತ್ಸಾ ಕಾರ್ಯಕ್ರಮ..!

 

 

ಅಮೆರಿಕದ ಮೆಡ್‌ಟ್ರಾನಿಕ್ಸ್‌ ಹಾಗೂ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್‌ ಫೌಂಡೇಷನ್‌ ಸಹಯೋಗದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು 200 ಬಡ ಹೃದ್ರೋಗಿಗಳಿಗೆ ಉಚಿತವಾಗಿ ಉನ್ನತ ಮಟ್ಟದ ಮೆಡಿಕೇಟೆಡ್‌ ಸ್ಟೆಂಟ್‌ ಅಳವಡಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ..ಮುಂದೆ ಓದಿ

 

 

ಬಡ ರೋಗಿಗಳು ಹಾಗೂ ಬಡತನರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ಉನ್ನತ ತಂತ್ರಜ್ಞಾನದ ಸ್ಟೆಂಟ್‌ ಅಳವಡಿಕೆ ಸಲುವಾಗಿ ಇದೇ ಅಕ್ಟೋಬರ್‌ 10 ಹಾಗೂ 11ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮತ್ತು ಅಕ್ಟೋಬರ್‌ 12 ಹಾಗೂ 13ರಂದು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

 

 

 

ಈ ಕಾರ್ಯಾಗಾರಕ್ಕೆ ದಾಖಲಾತಿ ಪಡೆಯಲು ರೋಗಿಗಳು ತಮ್ಮ ಬಿಪಿಎಲ್‌ ರೇಷನ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರವನ್ನು ತಮ್ಮೊಂದಿಗೆ ಕಡ್ಡಾಯವಾಗಿ ತರಲೇಬೇಕು. ಈ ಸೌಲಭ್ಯ ಪಡೆದುಕೊಳ್ಳಲು ಅಕ್ಟೋಬರ್‌ 8ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಜಯದೇವ ಸಂಸ್ಥೆಯ ಪ್ರದಾನ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ರವರು ತಿಳಿಸಿದ್ದಾರೆ.

 

 

ವಿಳಾಸ:
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ,
ಬನ್ನೇರುಘಟ್ಟ ರೋಡ್, ಜಯನಗರ 9ನೇ ಬ್ಲಾಕ್‌,
ಬೆಂಗಳೂರು– 560069

ಫೋನ್ ನಂ: 080 22977433

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top