fbpx
ದೇವರು

ಶ್ರೀಕೃಷ್ಣ ಭಗವ್ತದ್ಗೀತೆಯಲ್ಲಿ ಹೇಳಿರೋ ಈ 8 ಸೂತ್ರಗಳನ್ನು ಪಾಲಿಸಿದ್ರೆ ನಿಮ್ಮ ಜೀವನ ಸುಂದರವಾಗುತ್ತೆ, ಕಷ್ಟ ಕಾರ್ಪಣ್ಯ ದೂರವಾಗುತ್ತೆ

 ಶ್ರೀಕೃಷ್ಣನು ಭಗವ್ತದ್ಗೀತೆಯಲ್ಲಿ ಹೇಳಿರುವ  ಈ 8 ಸೂತ್ರಗಳನ್ನು ಅನುಸರಿಸಿ ನಮ್ಮ ಜೀವನದಲ್ಲಿ ನಾವು ಪಾಲಿಸಿದರೆ ಸಾಕು ಬದುಕು ಸುಂದರವಾಗುವುದು.

 

 

ಮಹಾಭಾರತದ ಒಂದು ಯುದ್ಧದ ಸನ್ನಿವೇಶದಲ್ಲಿ ಅರ್ಜುನನು,ನಾನು ಯುದ್ಧ ಮಾಡೋದಿಲ್ಲ ಎಂದಾಗ ಭಗವಂತನಾದ ಶ್ರೀ ಕೃಷ್ಣನು,ಅರ್ಜುನನಿಗೆ ಭಗವ್ತದ್ಗೀತೆಯನ್ನು ಭೋದಿಸುತ್ತಾನೆ.

ಭಗವ್ತದ್ಗೀತೆಯಲ್ಲಿನ ಈ 8 ಕೃಷ್ಣನ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ತುಂಬಾ ಸರಳ.

1.ಒಳ್ಳೆಯದಕ್ಕೆ ಆಗಿದೆ,ಆಗುತ್ತಿರುವುದೆಲ್ಲಾ ಒಳ್ಳೆಯದಕ್ಕೆ ಮುಂದೆ ಆಗುವುದೆಲ್ಲಾ ಒಳ್ಳೆಯದೇ ಆಗತ್ತೆ.ಅದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ.

 

 

2.ಹುಟ್ಟಿದಾಗ ಬೆತ್ತಲೆ,ಸತ್ತಾಗಲೂ ಬೆತ್ತಲೆ,ಅಂದರೆ ನಾವು ಹುಟ್ಟಿದಾಗ ಏನನ್ನೂ ತರುವುದಿಲ್ಲ,ಸತ್ತಾಗ ಕೂಡ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.

3.ಬದಲಾವಣೆಯೇ ಜೀವನದ ನಿಯಮ,ಅಂದರೆ ಯಾವುದೇ ರಾಜನಾಗಿದ್ದವನು ಒಂದೇ ದಿನದಲ್ಲಿ ಅಥವಾ ಒಂದೇ ನಿಮಿಷದಲ್ಲಿ ಬಿಕಾರಿಯಾಗಬಹುದು.ಹಾಗಾಗಿ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಕಾಲಕ್ಕೆ ತಕ್ಕಂತೆ ನಾವು ಒಪ್ಪಿಕೊಳ್ಳಲೇಬೇಕು.

 

 

4.ಆತ್ಮಕ್ಕೆ ಜನನವೂ ಇಲ್ಲ,ಮರಣವೂ ಇಲ್ಲ,ಅಂದರೆ ನಮ್ಮ ದೇಹ ನಶ್ವರ.ಆತ್ಮ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೋಗುತ್ತದೆ.ಹಾಗಾಗಿ ಸಾವಿಗೆ ಭಯಪಡಬಾರದೆಂದು ಭಗವಂತನಾದ ಶ್ರೀ ಕೃಷ್ಣನು ಭಗವ್ತದ್ಗೀತೆಯಲ್ಲಿ ತಿಳಿಸಿದ್ದಾನೆ.ಹಾಗಾಗಿ ನಾವು ಸಾವಿಗೆ ಭಯಪಡಬಾರದು.

5.ಕರ್ಮ ಮಾಡಿ ಫಲವನ್ನು ಬಯಸಬೇಡಿ.ಅಂದರೆ ನಾವು ಮಾಡೋ ಕೆಲಸದಲ್ಲಿ ಶ್ರದ್ದೆ ಇದ್ದರೆ ನಮಗೆ ಮಾಡೋ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ ಎನ್ನುವುದು ಇದರ ಅರ್ಥ.

 

 

6.ಸಂದೇಹದಿಂದ ನಮಗೆ ಖುಷಿ ಸಿಗುವುದಿಲ್ಲ ಇದರಿಂದ ನಮ್ಮ ಜೀವನವೇ ಹಾಳಾಗುತ್ತದೆ.

7.ಧ್ಯಾನದಿಂದ ಮನಸ್ಸು ನಿರ್ಮಲವಾಗುವುದಲ್ಲದೆ,ಒಂದು ನಿರಂತರ ಜ್ಯೋತಿಯಂತೆ ಆಗುತ್ತದೆ.

 

 

8.ಮಾನವನು ತನ್ನ ಸ್ವಂತವಾಗಿ ನಿರ್ದಾರಗಳನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಗೆಲ್ಲಲ್ಲೂಬಹುದು,ಸೋಲಲೂಬಹುದು.ಹಾಗಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

ಕೃಷ್ಣನ ಈ ಮಾತುಗಳನ್ನು ನಮ್ಮ ಜೀವನದಲ್ಲಿ ನಾವು ಪಾಲಿಸಿದರೆ ಜಗತ್ತೇ ಸುಂದರಮಯವಾಗಿ ಕಾಣುತ್ತದೆ ಅಲ್ವಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top