fbpx
ದೇವರು

ವಿದ್ಯೆ-ಜ್ಞಾಪಕ ಶಕ್ತಿಯಲ್ಲಿ ತೊಂದರೆ , ಶತ್ರುಗಳ ಕಾಟ , ಸಂತಾನ ಸಮಸ್ಯೆಯಿಂದ ನರಳುತ್ತಿರುವವರು ಈ ಬಾಗಲಮುಖಿ ದೇವಿ ದೇವಸ್ಥಾನಕ್ಕೆ ಒಂದ್ಸರಿ ಹೋಗ್ಬಿಟ್ಟು ಬನ್ನಿ ಎಲ್ಲ ಸರಿ ಹೋಗುತ್ತೆ..

ವಿದ್ಯೆ-ಜ್ಞಾಪಕ ಶಕ್ತಿಯಲ್ಲಿ ತೊಂದರೆ , ಶತ್ರುಗಳ ಕಾಟ , ಸಂತಾನ ಸಮಸ್ಯೆಯಿಂದ ನರಳುತ್ತಿರುವವರು ಈ ಬಾಗಲಮುಖಿ ದೇವಿ ದೇವಸ್ಥಾನಕ್ಕೆ ಒಂದ್ಸರಿ ಹೋಗ್ಬಿಟ್ಟು ಬನ್ನಿ ಎಲ್ಲ ಸರಿ ಹೋಗುತ್ತೆ..

 

 

ಹಿಂದೂ ಧರ್ಮದ ಹತ್ತು ಮಹಾವಿದ್ಯೆಯ ದೇವರುಗಳಲ್ಲಿ ಬಾಗಲಮುಖಿ ದೇವಿ ಸಹ ಒಬ್ಬಳು , ಮಹಾನ್ ಬುದ್ಧಿವಂತಿಕೆಯ ದೇವತೆ ಆಕೆ ಭಕ್ತರ ತಪ್ಪುಗ್ರಹಿಕೆಯ ಭಾವನೆ ಮತ್ತು ಭ್ರಮೆಗಳನ್ನುಅಥವಾ ಭಕ್ತರ ವೈರಿಗಳನ್ನು ಸಂಹಾರ ಮಾಡುತ್ತಾಳೆ ಎಂದು ನಂಬಲಾಗಿದೆ

‘ಬಾಗಲ’ ಎಂಬ ಶಬ್ದವು ‘ವಲ್ಗ’ ಎಂಬ ಶಬ್ದದಿಂದ ಬಂದಿದೆ ಹೀಗೆಂದರೆ ನಾಲಿಗೆಯ ಚಲನೆವಲನೆಯನ್ನು ನಿಯಂತ್ರಿಸುವುದು ಎಂದರ್ಥ ,ಈ ದೇವತೆ 108 ವಿವಿಧ ಹೆಸರುಗಳನ್ನು ಹೊಂದಿದ್ದಾಳೆ ,ಪೀತಾಂಬರೀ ಎಂದು ಸಹ ಕರೆಯಲಾಗುತ್ತದೆ , ಬಾಗಲಮುಖಿ ಬುದ್ಧಿವಂತ ದೇವತೆಗಳ ಹತ್ತು ರೂಪಗಳಲ್ಲಿ ಒಂದು , ಬಾಗಲಮುಖಿ ಎಂದರೆ ಶಿವನ ಹಿಂಬದಿ ಎಂದು ಅರ್ಥ.

 

 

ಮಹಾನ್ ವಿದ್ಯೆಗಳಲ್ಲಿ ೮ ನೇ ವಿದ್ಯೆಗೆ ಅಧಿದೇವತೆಯಾಗಿ ತಾಯಿ ಬಾಗಲಮುಖಿ ದೇವಿಯನ್ನು ಆರಾಧಿಸುತ್ತಾರೆ , ಇಲ್ಲಿ ಒಮ್ಮೆ ಭೇಟಿಕೊಟ್ಟರೆ ದಡ್ಡರಾಗಿರುವ ಮಕ್ಕಳು ಚೆನ್ನಾಗಿ ಓದುತ್ತಾರೆ ಅಷ್ಟೇ ಅಲ್ಲದೆ ತಾಯಿ ಸಂತಾನ ಹಾಗು ಮದುವೆ ಫಲಗಳನ್ನು ನೀಡುತ್ತಾಳೆ ಎಂಬ ಪ್ರತೀತಿ ಇದೆ.

 

‘ರುದ್ರಯಮಾಲ’ ಎಂಬ ತಂತ್ರ ವಿದ್ಯೆಯಲ್ಲಿ ಬಾಗಲಮುಖಿ ಸ್ತೋತ್ರವಿದೆ ಇದು ಶತ್ರು ಸಂಹಾರ ಹಾಗು ವಿದ್ಯೆ ಬುದ್ಧಿ ಹೆಚ್ಚಿಸಿಕೊಳ್ಳಲು ಅನುಕೂಲ

“ವದಿ ಮುಕತಿ ರಾಂಕಟಿ ಕ್ಷತಿಪತಿರ್ವಿಶ್ವನರಾಹ್ ಶೀತತಿ ಕ್ರೋಧಿ ಸಂಯತಿ ದುರ್ಜಾನಾ ಸುಜಾಾನತಿ ಖ್ಸಿಪ್ರನುಗಾ ಖಾನ್ಜತಿ. ಗಾರ್ವಿ ಖಾನ್ಜತಿ ಸರ್ವವಿಕ್ಚಾ ಜರಾಟ ತ್ವಿನ್ಮಂತ್ರಿನಾಮಂತ್ರಿತ್ ಶ್ರೀನಿತಿ ಬಾಗ್ಲಾಮುಖಿ ಪ್ರತಿಧಿಮ್ ತುಭ್ಯಾಮ್ ನಮಃ “

 

 

ಈ ಶ್ಲೋಕವನ್ನು ದಿನಕ್ಕೆ 108 ಭಾರಿ ಪಠನೆಮಾಡಿದರೆ ವಿದ್ಯೆ ,ಸಂಪತ್ತು , ಆರೋಗ್ಯ ವೃದ್ಧಿಯಾಗುವುದಂತೆ.

ಹಿಮಾಚಲಪ್ರದೇಶದ ಕಂಗ್ರಾದಲ್ಲಿ ಬಾಗಲಮುಖಿ ದೇವಾಲಯವಿದ್ದು ಸಾವಿರಾರು ಮಂದಿ ಭಕ್ತರು ಬರುತ್ತಾರೆ ಹಾಗೆಯೇ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆಯ ಸಿಂಧನೂರ್ ತಾಲ್ಲೂಕಿನಲ್ಲಿನ ಸೋಮಾಲಪುರ (ಕಲ್ಯಾಣಿ) ಶಕ್ತಿಯುತವಾದ ಬಾಗುಲುಮುಖಿ ಪೀಠವಿದೇ ಇದನ್ನು 300 ವರ್ಷಗಳ ಹಿಂದೆ ದೇವಾಲಯದ ಮಹಾನ್ ಯೋಗಿ ಕಟ್ಟಿದ್ದಾರೆ ಎಂಬ ನಂಬಿಕೆಯು ಇದೆ .

ಶ್ರೀ ಚಿದಾನಂದವಧೂತರು ನಿರ್ಮಿಸಿರುವ. ‘ಶ್ರೀ ದೇವಿ ಚರಿತ್ರೆ’ ಯನ್ನು ಮನೆಮನೆಯಲ್ಲೂ ಹಾಡುತ್ತಾರೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top