fbpx
ಸಾಧನೆ

ಅಂದು ಕಾಡು ಬಡತನದಲ್ಲಿ ತಿನ್ನೋಕೆ ಅನ್ನವಿಲ್ಲದೆ, ಕಂಕುಳಲ್ಲಿ ಪುಟ್ಟ ಮಗುವನ್ನು ಕಟ್ಟಿಕೊಂಡು ಬೀದಿಗಳಲ್ಲಿ ರುಬ್ಬುವ ಕಲ್ಲು ಮಾರುತ್ತಿದ್ದವರು ಇಂದು ಪೊಲೀಸ್ ಅಧಿಕಾರಿ

ಅಂದು ಕಾಡು ಬಡತನದಲ್ಲಿ ತಿನ್ನೋಕೆ ಅನ್ನವಿಲ್ಲದೆ, ಕಂಕುಳಲ್ಲಿ ಪುಟ್ಟ ಮಗುವನ್ನು ಕಟ್ಟಿಕೊಂಡು ಬೀದಿಗಳಲ್ಲಿ ರುಬ್ಬುವ ಕಲ್ಲು ಮಾರುತ್ತಿದ್ದವರು ಇಂದು ಪೊಲೀಸ್ ಅಧಿಕಾರಿ

 

 

ಇವರ ಹೆಸರು ಪದ್ಮಶೀಲ ತಿರ್ಪುಡೆ ಈಗ ಇವ್ರ ವೃತ್ತಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದರೆ ಇವರ ಹಿಂದಿನ ಕಥೆ ಕೇಳಿ ಕಣ್ಣು ತೇವ ಆಗೋದಂತು ಖಂಡಿತ ನಿಜ

ಪದ್ಮಶೀಲ ತಿರ್ಪುಡೆ ಮೂಲತಃ ಮಹಾರಾಷ್ಟ್ರದವರು , ಆಕೆಯ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿ ಇರಲಿಲ್ಲ ತಾನು ಚೆನ್ನಾಗಿಯೇ ಓದುತ್ತಿದ್ದರು ಸಹ ಆಕೆಯ ಬಡತನ ಮುಂದೆ ಓದಲು ಆಕೆಗೆ ಅವಕಾಶ ಮಾಡಿಕೊಡಲಿಲ್ಲ , ಆಕೆಗೆ ತೀರಾ ಸಣ್ಣ ವಯಸ್ಸಿಗೆ ಮದುವೆಯಾಗಿ ಹೋಗಿತ್ತು ಒಲ್ಲದ ಮನಸ್ಸಿನಲ್ಲಿ ತನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿ ಮದುವೆಯಾದಳು , ಆದರೂ ಕೈ ಹಿಡಿದವನು ಬಡತನದಲ್ಲಿಯೂ ಹೊಟ್ಟೆ ಬಟ್ಟೆಗೆ ಕಡಿಮೆಯಾದರೂ ಆ ಕುಟುಂಬದಲ್ಲಿ ಪ್ರೀತಿಗೆ ನೆಮ್ಮದಿಗೆ ಯಾವುದೇ ಕೊರತೆ ಇರಲಿಲ್ಲ .

 

 

ತುಂಬಾ ಕಷ್ಟದ ದಿನಗಳು ಆ ಕಷ್ಟದಲ್ಲಿಯೂ ಆಕೆಯ ಮಡಿಲಿಗೆ ಹಸುಗೂಸನ್ನು ಕರುಣಿಸಿದ ದೈವ , ತನಗೆ ಹೊಟ್ಟೆಗೆ ಹಿಟ್ಟಿಲ್ಲ ,ನೆಟ್ಟಗೆ ಸೂರಿಲ್ಲ , ಮಗುವನ್ನು ಸಾಕಲೇ ಬೇಕಾದ ಅನಿವಾರ್ಯತೆ ಹೀಗಿರುವಾಗ ಆಕೆ ಕಲ್ಲಿನಿಂದ ಮಾಡಿದ ರುಬ್ಬುವ ಕಲ್ಲಿನ ಯಂತ್ರವನ್ನು ತನ್ನ ತಲೆ ಮೇಲೆ ಹೊತ್ತುಕೊಂಡು ಸಣ್ಣ ಕೈಗೂಸನ್ನು ಕಂಕುಳಲ್ಲಿ ಹಾಕಿಕೊಂಡು
ಪುಟ್ಟ ಕಂದನನ್ನು ಬಿಸಿಲಲ್ಲಿ ತನ್ನ ಜೊತೆ ಬೀದಿ ಬೀದಿ ಸುತ್ತಿ ರುಬ್ಬುವ ಕಲ್ಲಿನ ಯಂತ್ರ ಮಾರಾಟ ಮಾಡುವ ವ್ಯಾಪಾರಕ್ಕೆ ಹೋಗುತ್ತಿದ್ದರು .

ಹೊರಗೆ ಕೆಲಸ ಕಂಕುಳಲ್ಲಿನ ಮಗು ಅಷ್ಟು ಸಾಲದು ಎಂಬಂತೆ ಮನೆಯಲ್ಲಿದ್ದ ವಯಸ್ಸಾದ ಅಜ್ಜಿ , ಮನೆಯ ಕೆಲಸ ಮಾಡುವುದಕ್ಕೆ ಸಮಯ ಸಾಕಾಗುತ್ತಿರಲಿಲ್ಲ ಇನ್ನೆಲ್ಲಿ ಓದುವುದು ಬರೆಯುವುದು , ಹೀಗಿರುವಾಗ ಆಕೆಯ ಗಂಡನಿಗೆ ಒಮ್ಮೆ ಆಲೋಚನೆ ಒಂದು ಹೊಳೆದಿತ್ತು .

 

ತಾವು ವಾಸಿಸುತ್ತಿದ್ದ ಸ್ಥಳದಲ್ಲಿದ್ದ ಕೆಲವರು ಅವರ ಕುಟುಂಬವನ್ನು ಕೀಳಾಗಿ ನೋಡುತ್ತಿದ್ದರು ಹೇಗಾದರೂ ಮಾಡಿ ಇವರ ಮುಂದೆ ಉನ್ನತ ಸ್ಥಾನದಲ್ಲಿ ನಿಲ್ಲಬೇಕು ಎಂದು ಮನಸ್ಸು ಮಾಡಿ
ತಮ್ಮ ಹೆಂಡತಿಗೆ ‘ನೀನು ಬುದ್ದಿವಂತೆ ಈ ಕೆಲಸ ನಮಗೆ ಯಾವುದೇ ಗೌರವ ಮಾನ್ಯತೆ ಕೊಡುವುದಿಲ್ಲ , ನೀನು ಓದನ್ನು ಮುಂದುವರಿಸಿ ನಾನು ಮನೆಯನ್ನು ನಿಭಾಯಿಸುತ್ತೇನೆ , ಒಂದ್ ದಿನ ದೊಡ್ಡ ಆಫೀಸರ್ ಆಗು’ ಎಂದು ಹೇಳುತ್ತಾರೆ , ಇದರಿಂದ ಸ್ಪೂರ್ತಿಗೊಂಡ ಪದ್ಮಶೀಲ ತಿರ್ಪುಡೆ ತಮ್ಮ ಓದನ್ನು ಮತ್ತೆ ಮುಂದುವರಿಸಿ ಪೊಲೀಸ್ ಪರೀಕ್ಷೆಯಲ್ಲಿ ಪಾಸ್ ಆಗಿ  ಈಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ .

 

 

ಇದಕ್ಕೆ ಅಲ್ಲವೇ ಹೇಳುವುದು ಆಗುವುದೆಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ ಅಂತ !

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top