ಶ್ರುತಿಹಾಸನ್ ಕನ್ನಡಿಗರ ಕಾಲಿನ ಧೂಳಿಗೆ ಸಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ಜಗ್ಗೇಶ್..!ಯಾಕೆ ಗೊತ್ತಾ..?
ನಟ ಕಮಲ್ ಹಾಸನ್ ಅವರ ಹಿರಿಯ ಪುತ್ರಿ ಮತ್ತು ಸೌತ್ ಇಂಡಿಯಾದ ಟಾಪ್ ಹೀರೋಯಿನ್ ಆದ ಶ್ರುತಿಹಾಸನ್ ಮೇಲೆ ನಟ ಜಗ್ಗೇಶ್ ಕಿಡಿಕಾರಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಅವರು ನಟಿ ಶ್ರುತಿಹಾಸನ್ ಮೇಲೆ ತಿರುಗಿಬಿದ್ದಿರೋದ್ಯಾಕೆ ಗೊತ್ತಾ? ಮುಂದೆ ಓದಿ.
ಕಳೆದ ಎರಡು ಮೂರು ದಿನಗಳಿಂದ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರಲಿರುವ “ಪೊಗರು” ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ರವರಿಗೆ ನಾಯಕಿಯಾಗಿ ಸೌತ್ ಇಂಡಿಯಾದ ಟಾಪ್ ಹೀರೋಯಿನ್ ಆದ ಶ್ರುತಿಹಾಸನ್ ನಟಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಈ ಸುದ್ದಿಗೆ ನಟಿ ಶ್ರುತಿಹಾಸನ್ ಸದ್ಯಕ್ಕೆ ನಾನು ಯಾವುದೇ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಯೋಜನೆಯಲ್ಲಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತಿದ್ದೇನೆ ಅಲ್ಲದೆ ಈ ಬಗ್ಗೆ ಯಾರೊಬ್ಬರ ಜೊತೆಯೂ ಕೂಡ ಮಾತುಕತೆ ನಡೆಸಿಲ್ಲ ಇವೆಲ್ಲ ಕೇವಲ ವದಂತಿಗಳು” ಎಂದು ಶ್ರುತಿ ಹಾಸನ್ ಟ್ವೀಟ್ ಮಾಡುವ ಮೂಲಕ ಸದ್ಯಕ್ಕೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಯೋಜನೆಯಿಲ್ಲಎಂದು ಹೇಳಿದ್ದರು.
ಶ್ರುತಿಹಾಸನ್ ಅವರು ಕನ್ನಡದಲ್ಲಿ ನಟಿಸುವುದಿಲ್ಲ ಎಂದು ಹೇಳಿರುವುದರಿಂದ ಕೋಪಗೊಂಡಿರುವ ಕನ್ನಡ ಚಿತ್ರಾಭಿಮಾನಿಗಳು ಶ್ರುತಿಹಾಸನ್ ವಿರುದ್ಧ ಕಿಡಿಕಾರಿದ್ದರು ಅಂತಯೇ ನಟ ಜಗ್ಗೇಶ್ ಕೂಡ ಶ್ರುತಿಹಾಸನ್ ರವರ ಈ ನಡೆಗೆ “ಕರ್ನಾಟಕದ ಕಾಲೇಜು ಹೆಣ್ಣುಮಕ್ಕಳ ರೂಪದ ಮುಂದೆ ಇವರೆಲ್ಲಾ ಕಾಲುಧೂಳು! ಬಣ್ಣ ತೆಗೆದು ಬಂದರೆ ನಮ್ಮಯುವಕರು ಮೈಲಿದೂರ ಓಡುತ್ತಾರೆ! ಕನ್ನಡಿಗರ ದುಡ್ಡುಬೇಕು ಕನ್ನಡ ಚಿತ್ರ ಬೇಡ್ವಂತೆ!”
“ನಮ್ಮ ಕನ್ನಡದಲ್ಲಿ ನಾಯಕಿಯರಿಗೆ ಕೊರತೆಯೇ! ಇಂಥ ಮಾತು ಕೇಳಿ ಇವರ ಮನೆ ಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಬಿಕ್ಷುಕರೆ! ನಮ್ಮವರಿಗೆ ಇನ್ನು ಬುಧ್ಧಿಬಂದಿಲ್ಲಾ! ಧೌರ್ಭಾಗ್ಯ.” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಕಾಲೇಜು ಹೆಣ್ಣುಮಕ್ಕಳ ರೂಪದಮುಂದೆ ಇವರೆಲ್ಲಾ ಕಾಲುಧೂಳು!ಬಣ್ಣತೆಗೆದುಬಂದರೆ ನಮ್ಮಯುವಕರು ಮೈಲಿದೂರಓಡುತ್ತಾರೆ!ಕನ್ನಡಿಗರ ದುಡ್ಡುಬೇಕು ಕನ್ನಡಚಿತ್ರಬೇಡ್ವಂತೆ! https://t.co/uzpxBKFUBX
— ನವರಸನಾಯಕ ಜಗ್ಗೇಶ್ (@Jaggesh2) October 7, 2017
ನಮ್ಮ ಕನ್ನಡದಲ್ಲಿ ನಾಯಕಿಯರಿಗೆ ಕೊರತೆಯೇ!ಇಂಥ ಮಾತು ಕೇಳಿ ಇವರ ಮನೆಮುಂದೆ ನಿಲ್ಲಲು ಕನ್ನಡ ನಿರ್ಮಾಪಕರು ಬಿಕ್ಷುಕರೆ!ನಮ್ಮವರಿಗೆ ಇನ್ನು ಬುಧ್ಧಿಬಂದಿಲ್ಲಾ!ಧೌರ್ಭಾಗ್ಯ. https://t.co/uzpxBKFUBX
— ನವರಸನಾಯಕ ಜಗ್ಗೇಶ್ (@Jaggesh2) October 7, 2017
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
