fbpx
ದೇವರು

ಶ್ರೀ ಕೃಷ್ಣನ ವಿರಾಟ ವಿಶ್ವರೂಪ ನೋಡಿದ್ಮೇಲೆ “ಕ್ಷತ್ರಿಯನಾದೋನು ಜನಗಳ ಕಷ್ಟ ದೂರಮಾಡಿ ರಾಜ್ಯವನ್ನಾಳಬೇಕು” ಅಂತ ಯುದ್ಧ ಸಂದೇಶ ಕೊಟ್ಟಳಂತೆ !

ಶ್ರೀ ಕೃಷ್ಣನ ವಿರಾಟ ವಿಶ್ವರೂಪ ದರ್ಶನ.

ಭಗವಂತನಾದ ಶ್ರೀ ಕೃಷ್ಣನ ದೇಹದಿಂದ ಕಾಂತಿಯುತವಾದ ಜ್ವಾಲೆಗಳು ಬರಲಾರಂಭಿಸಿದವು.  ಶ್ರೀ ಕೃಷ್ಣನ ವಿರಾಟ ರೂಪದಲ್ಲಿ ಬ್ರಹ್ಮನು ಕೃಷ್ಣನ ಹಣೆಯಲ್ಲಿ ಕಾಣಿಸಿದನು.ರುದ್ರನಾದ ಶಿವನು ಹೃದಯದಲ್ಲಿ ಗೋಚರಿಸಿದನು.

 

 

ಶ್ರೀ ಕೃಷ್ಣನ ಬುಜಗಳಲ್ಲಿ ಲೋಕಪಾಲರು, ವಸುಗಳು,ಏಕಾದಶ ರುದ್ರರೂ ಕಂಗೊಳಿಸಿದರು. ಆಶ್ವಿನಿ ದೇವತೆಗಳು ಯಕ್ಷರು , ಗಂಧರ್ವರು, ಕಿನ್ನರು, ಕಿಂಪುರುಷರು  ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಂಡರು.

ಶಂಖ, ಚಕ್ರ, ಗಧೆ,ಹಲಾಯುಧಗಳು ಶ್ರೀ ಕೃಷ್ಣನ ವಿವಿಧ ಬಾಹುಗಳಲ್ಲಿ ಕಂಡು ಬಂದವು. ಚಂದ್ರ, ಸೂರ್ಯ, ನಕ್ಷತ್ರಗಳು ತಲೆಯಲ್ಲಿ ಕಂಡು ಬಂದವು.

ಇಂದ್ರಾದಿ ದೇವತೆಗಳು ಶರೀರದ ತುಂಬೆಲ್ಲ ಕಂಡರು.ಕೃಷ್ಣನಿಂದ ಹೊರಟ ತೀಕ್ಷ್ಣ ರಶ್ಮಿಗಳು ಎಲ್ಲರ ಕಣ್ಣುಗಳನ್ನು ಕುಕ್ಕಿದವು.

ದುರ್ಯೋಧನನ ದೂತರು ಕಂಗಾಲಾಗಿ ನಿಂತರು ಕುರುಡನಾದ ದೃತರಾಷ್ಟ್ರನಿಗೂ ಸಹ ಕೃಷ್ಣನ ರೂಪವು ಕಾಣಿಸಿತು.ಗಾಂಧಾರಿಯ ಕಣ್ಣಿಗೆ ಕಟ್ಟಿದ್ದ  ಬಟ್ಟೆಗಳು ಸಹ ಆದಾಗೆ ಅದೆ ಕಳಚಿ ಬಿದ್ದಾಗ ಅವಳು ಕೂಡ  ಕೃಷ್ಣನ ದರ್ಶನ ಮಾಡಿದಳು.

 

 

ಸಭೆಯಲ್ಲಿ ಎಲ್ಲರೂ ಸಹ ಕೃಷ್ಣನನ್ನು ವಂದಿಸಿದರು.ದುರ್ಯೋಧನ ಮುಂತಾದವರು ಅಹಂಕಾರದಿಂದಲೇ ಸುಮ್ಮನಿದ್ದರು.ಶಾಂತವಾಗಿ ಹಿರಿಯರನ್ನು ವಂದಿಸಿ ಋಷಿ ಮುನಿಗಳನ್ನು ಸಹ ವಂದಿಸುತ್ತಾ ಸಾತ್ಯಕಿ ,ಕೃತವರ್ಮರೊಂದಿಗೆ ಸಭೆಯಿಂದ ಹೊರಗೆ ನೆಡೆದರು.

ಸಭಾಭವನದಿಂದ ಬಂದ ಕೃಷ್ಣನು ನೇರವಾಗಿ ವಿದುರನ ಮನೆಗೆ ಬಂದು ಕುಂತಿಯನ್ನು ಕಂಡನು.ಸಭೆಯಲ್ಲಿ ನೆಡೆದ ವಿಷಯವನ್ನು ತಿಳಿಸಿ ದುರ್ಯೋಧನನ ದುಷ್ಟತನದಿಂದಾಗಿ ಎಲ್ಲ ಅನರ್ಥವಾಯಿತು ಎಂದನು.ಅವಳು ನೀನೀಗ ಉಪಪ್ಲವಕ್ಕೆ ಹೋಗಿ ಧರ್ಮರಾಜನಿಗೆ ನನ್ನ ಸಂದೇಶವನ್ನು ತಿಳಿಸು ಎಂದಳು.

 

 

“ ಯುಧಿಷ್ಠಿರ, ನೀನು ಕ್ಷತ್ರಿಯನಾಗಿ ಹುಟ್ಟಿದರೂ ಸಮಾಧಾನವನ್ನೇ ಮುಂದು ಮಾಡಿಕೊಂಡು ಇಲ್ಲಿಯವರೆಗೆ ಬದುಕಿದ್ದಾಯಿತು.ವೀರನಾದವನು ಅನ್ಯಾಯ ಅರಾಜಕತೆಯನ್ನು ಪರಾಕ್ರಮದಿಂದಲೇ ದೂರ ಮಾಡಬೇಕು.ಅರ್ಧ ರಾಜ್ಯದ ಅಧಿಕಾರಿಯಾಗಿ ಐದು ಗ್ರಾಮಗಳನ್ನು ಬೇಡಿದೆ.ಆದರೆ ಈ ರೀತಿ ಹೇಡಿಯಾಗಿ ಯಾರನ್ನೂ ಬೇಡಬಾರದು. ಸ್ವಂತ ಸಾಮರ್ಥ್ಯದಿಂದ ಗಳಿಸಿಕೊಳ್ಳಬೇಕು. ಎಂದು ಮುಕುಂದನ ವ್ಯವಹಾರವನ್ನು ತಿಳಿಸಿದಳು.

ಕುಭೇರನು ಪ್ರೀತಿಯಿಂದ ಇಡೀ  ಭೂಮಂಡಲವನ್ನೇ ಕೊಟ್ಟಾಗ ಮುಚಕುಂದನು ಕುಭೇರನಿಗೆ “ ನಾನು ದಾನವಾಗಿ ಏನನ್ನು ಪಡೆಯಲು ಇಷ್ಟ ಪಡುವುದಿಲ್ಲ.ಬಾಹು ಬಲದಿಂದ ಗೆದ್ದ ರಾಜ್ಯವನ್ನು ಮಾತ್ರವೇ ಅನುಭವಿಸಲು ಇಷ್ಟ ಪಡುತ್ತೇನೆ”. ಎಂದು ಭೂಮಂಡಲದ ಅಧಿಕಾರವನ್ನು ತಿರಸ್ಕರಿಸಿದನು.ಭರತವಂಶದಲ್ಲಿ ಹುಟ್ಟಿದ ನೀನು ಸಹ ಈ ರೀತಿಯೇ ರಾಜ್ಯವನ್ನು ಪಡೆಯಲು ಪ್ರಯತ್ನ ಮಾಡು ಎಂದು ಹೇಳಿ ಕಳುಹಿಸಿದನು.

 

 

ಕ್ಷತ್ರಿಯನು ಇತರ ಪ್ರಜೆಗಳ ದುಃಖವನ್ನು ದೂರಮಾಡಿ ರಾಜ್ಯವನ್ನಾಳಬೇಕು.ಈ ಕಾರಣದಿಂದಾಗಿ ಇಂದು ಯುದ್ಧ ಮಾಡುವುದು. ಅನಿವಾರ್ಯವಾಗಿದೆ ಎಂದು ಕುಂತಿ ಯುದ್ಧಕ್ಕೆ  ಸಂದೇಶ ಕಳಿಸಿದಳು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top