fbpx
ಭವಿಷ್ಯ

8 ಅಕ್ಟೋಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಭಾನುವಾರ, ೦೮ ಅಕ್ಟೋಬರ್ ೨೦೧೭
ಸೂರ್ಯೋದಯ : ೦೬:೧೨
ಸೂರ್ಯಾಸ್ತ : ೧೮:೦೧
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಶ್ವಯುಜ
ಪಕ್ಷ : ಕೃಷ್ಣ ಪಕ್ಷ
ತಿಥಿ : ತದಿಗೆ
ನಕ್ಷತ್ರ : ಭರಣಿ
ಯೋಗ : ವಜ್ರ
ಅಮೃತಕಾಲ : ೧೧:೩೩ – ೧೩:೦೧

ರಾಹು ಕಾಲ: ೧೬:೩೨ – ೧೮:೦೧
ಗುಳಿಕ ಕಾಲ: ೧೫:೦೪ – ೧೬:೩೨
ಯಮಗಂಡ: ೧೨:೦೭ – ೧೩:೩೫

 

ಮೇಷ (Mesha)

ಅನಿರೀಕ್ಷಿತವಾಗಿ ಶುಭವಾರ್ತೆ ಸಂತಸ ಗೊಳಿಸಲಿದೆ. ಮನೆಯಲ್ಲಿ ಹಂತ ಹಂತವಾಗಿ ಶಾಂತಿ ನೆಮ್ಮದಿ ಅನುಭವಕ್ಕೆ ಬರುತ್ತದೆ. ಆರ್ಥಿಕವಾಗಿ ಅಧಿಕ ರೂಪದಲ್ಲಿ ಖರ್ಚುವೆಚ್ಚಗಳು ಬರುತ್ತವೆ.

 

ವೃಷಭ (Vrushabh)


ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಗಮನ ಹರಿಸಿರಿ. ಆಗಾಗ ಆರೋಗ್ಯದಲ್ಲಿ ಅಲರ್ಜಿ ಸಮಸ್ಯೆ ಕಂಡು ಬರುವುದು. ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಉದಾಸೀನತೆ ತೋರಿ ಬರುತ್ತದೆ.

 

ಮಿಥುನ (Mithuna)


ರಾಜಕೀಯ ಕ್ಷೇತ್ರದವರಿಗೆ ಹೆಚ್ಚಿನ ಸ್ಥಾನಮಾನಗಳ ಅವಕಾಶ ವಿರುವುದು. ಕೃಷಿ, ಬೇಸಾಯಗಾರರಿಗೆ ಉತ್ತಮ ಅಭಿವೃದ್ಧಿ ಇರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ತೋರಿ ಬರುತ್ತದೆ.

 

ಕರ್ಕ (Karka)


ನಿಮ್ಮ ಯೋಚನಾಕ್ರಮಕ್ಕೆ ಪರಿವರ್ತನೆ ತೋರಿ ಬಂದೀತು. ಸರಕಾರಿ ನೌಕರ ವರ್ಗಕ್ಕೆ ಮುಂಭಡ್ತಿ ಯೋಗವಿದೆ. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಇದು ಸರಿಯಾದ ಸಮಯ. ದಿನಾಂತ್ಯ ಶುಭ.

ಸಿಂಹ (Simha)

ಅನಾವಶ್ಯಕವಾಗಿ ತಪ್ಪು ಅಭಿಪ್ರಾಯದಿಂದ ಕಲಹಕ್ಕೆ ಕಾರಣರಾಗದಿರಿ. ನಿಮ್ಮ ಪ್ರಯತ್ನಬಲಕ್ಕೆ ನಿಶ್ಚಿತವಾದ ಫ‌ಲ ಇದ್ದೇ ಇರುತ್ತದೆ. ಹಂತ ಹಂತವಾಗಿ ಮನೆಯಲ್ಲಿ ಶಾಂತಿ, ಸಮಾಧಾನಗಳು ನೆಲೆಸಲಿವೆ.

 

ಕನ್ಯಾರಾಶಿ (Kanya)


ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಅಧಿಕಾರಿ ವರ್ಗದವರಿಗೆ ಉದ್ಯೋಗದ ಬದಲಾವಣೆ ಸಂತಸ ತಂದೀತು. ಮುಖ್ಯವಾಗಿ ಸಾಂಸಾರಿಕವಾಗಿ, ಕೌಟುಂಬಿಕವಾಗಿ ಸಂಯಮವು ಅಗತ್ಯವಿದೆ.

 

ತುಲಾ (Tula)

ವೃತ್ತಿರಂಗದಲ್ಲಿ ಗುರುಬಲ ನಿಮ್ಮನ್ನು ಮೇಲೆತ್ತಲಿದೆ. ಆರ್ಥಿಕವಾಗಿ ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಹಿರಿಯರಿಗೆ ತೀರ್ಥಯಾತ್ರೆಯ ಯೋಗವಿದೆ. ಅತಿಥಿಗಳ ಆಗಮನವಿದೆ.

 

ವೃಶ್ಚಿಕ (Vrushchika)


ಬಾಳ ಸಂಗಾತಿಯ ಹುಡುಕಾಟಕ್ಕಾಗಿ ವಿಶೇಷ ಪರಿಶ್ರಮ ಅಗತ್ಯವಿದೆ. ಮಕ್ಕಳ ಚಟುವಟಿಕೆಗಳಿಗೆ ಉತ್ತೇಜನ ನೀಡಿರಿ. ಆಧ್ಯಾತ್ಮಿಕ ಪ್ರವೃತ್ತಿಯಲ್ಲಿ ಆಸಕ್ತಿ ತೋರಿ ಬರಲಿದೆ. ಆರ್ಥಿಕವಾಗಿ ಹಿಡಿತವನ್ನು ಬಿಗಿಗೊಳಿಸಿರಿ.

 

ಧನು ರಾಶಿ (Dhanu)


ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ವಿದ್ಯಾರ್ಥಿಗಳಿಗೆ ವಿದ್ಯಾಪ್ರಯತ್ನವು ಫ‌ಲ ನೀಡಲಿದೆ. ಪತ್ರಿಕೋದ್ಯಮದಲ್ಲಿ ಸೂಕ್ತ ಗೌರವಾದರಗಳು ಸಿಗಲಿವೆ. ಸಂಚಾರದಲ್ಲಿ ಜಾಗ್ರತೆ ವಹಿಸುವುದು ಮುಖ್ಯ.

 

ಮಕರ (Makara)


ನೀಡಿದ ಕೆಲಸಕಾರ್ಯಗಳನ್ನು ಧೈರ್ಯದಲ್ಲಿ ಮುಂದುವರಿಸಿರಿ. ವಿವಾಹಪೇಕ್ಷಿಗಳಿಗೆ ಕಂಕಣ ಭಾಗ್ಯವು ಇದೆ. ಓದುವ ಮಕ್ಕಳಿಗೆ ಉತ್ತಮ ಫ‌ಲಿತಾಂಶವಿದೆ. ಏಕಾದಶದ ರಾಹು ಲಾಭಕರನಾದಾನು.

 

ಕುಂಭರಾಶಿ (Kumbha)


ಎಲ್ಲಾ ವಿಚಾರದಲ್ಲಿ ಅಡೆತಡೆಗಳೆ ತೋರಿ ಬರುತ್ತವೆ. ಸಾಂಸಾರಿಕವಾಗಿ ಹೆಚ್ಚಿನ ಹೊಂದಾಣಿಕೆ ಆತೀ ಅಗತ್ಯವಿದೆ. ವೃತ್ತಿರಂಗದಲ್ಲಿ ಕ್ಲೇಶ ತೋರಿ ಬಂದೀತು. ಕೋರ್ಟು ವ್ಯವಹಾರದಲ್ಲಿ ಆಧಿಕ ಖರ್ಚು ತರುತ್ತದೆ.

 

ಮೀನರಾಶಿ (Meena)


ರಾಜಕೀಯ ವರ್ಗದವರಿಗೆ ಉತ್ತಮ ಅವಕಾಶಗಳು ದೊರಕಿದರೂ ಅವಕಾಶಗಳಿರುತ್ತವೆ. ಆರ್ಥಿಕಗಳಿಕೆ ಉತ್ತಮವಿದ್ದರೂ ಹೆಚ್ಚಿನ ಜಾಗ್ರತೆ ವಹಿಸಿರಿ. ಶುಭಮಂಗಲ ಕಾರ್ಯಕ್ಕೆ ಅಡಚಣೆ ಇರುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top