fbpx
ಆರೋಗ್ಯ

ದೇಹದ ಈ ಭಾಗವನ್ನು ಒತ್ತಿಕೊಂಡರೆ ಏನ್ ಪ್ರಯೋಜನ ಪಡ್ಕೋಬೋದು ಗೊತ್ತಾ?

ದೇಹದ ಈ ಭಾಗವನ್ನು ಒತ್ತಿಕೊಂಡರೆ ಏನ್ ಪ್ರಯೋಜನ ಪಡ್ಕೋಬೋದು ಗೊತ್ತಾ?

 

 

 

 

ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈನಲ್ಲೇ ಇರುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ..ಪ್ರತಿನಿತ್ಯ ಒಂದು ನಿರ್ದಿಷ್ಟ ರೀತಿಯಲ್ಲಿ ಎದೆಯ ಕೆಳಭಾಗದ ಮೂಳೆಯನ್ನು ಒತ್ತಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗೆ ಮಾಡೋದ್ರಿಂದ ಯಾವ ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳ್ಕೊಬೇಕಂದ್ರೆ ಮುಂದೆ ಓದಿ.

 

 

ನಿಮ್ಮ ಬೆರಳುಗಳ ಸಹಾಯದಿಂದ ಎದೆಯ ಮೂಳೆಯ ಕೆಳಗಿನ ಭಾಗವನ್ನು ಇಪ್ಪತ್ತರಿಂದ ಮೂವತ್ತು ಸೆಕೆಂಡುಗಳ ವರೆಗೆ ಒತ್ತಿಕೊಳ್ಳಬೇಕು. ಹೀಗೆ ಹತ್ತು ಬಾರಿ ಮಾಡುವುದರಿಂದ ಕೆಲವು ಪ್ರಯೋಜನಗಳನ್ನು ಪಡ್ಕೊಳ್ಳಬಹುದು.

1.ಒತ್ತಡವು ಕಡಿಮಯಾಗುತ್ತದೆ:

 


ಎದೆಯ ಕೆಳ ಮೂಳೆಯ ಭಾಗವನ್ನು ಒತ್ತಿಕೊಳ್ಳುವುದರ ಮೂಲಕ ನಿಮ್ಮ ಏಕಾಗ್ರತಾ ಶಕ್ತಿ ಹೆಚ್ಚಾಗುವುದರಿಂದ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.ಹೀಗೆ ಮಾಡೋದ್ರಿಂದ ನಿಮ್ ಮನಸಿಗೆ ನೆಮ್ಮದಿಯ ಭಾವನೆ ನೀಡುತ್ತದೆ.

2.ಖಿನ್ನತೆಯ ಶಮನ:

 

ಎದೆಯ ಮೂಳೆಯ ಕೆಳ ಭಾಗವನ್ನು ಒತ್ತಿಕೊಳ್ಳುವುದರಿಂದ ಒತ್ತಡ ಮತ್ತು ನಿದ್ರಾಹೀನತೆಯ ಪರಿಣಾಮದಿಂದ ಎದುರಾಗಿರುವ ಖಿನ್ನತೆ ಮತ್ತು ಆತಂಕದ ಸಮಸ್ಯೆಗಳನ್ನು ಸುಧಾರಿಸಿ ಶಮನಗೊಳಿಸಬಹುದಾಗಿದೆ.

3.ಉತ್ತಮವಾದ ರಕ್ತಪರಿಚಲನೆ:

 


ಎದೆಯ ಮೂಳೆಯ ಕೆಳ ಅಕ್ಯೂಪ್ರೆಶರ್ ಭಾಗವನ್ನು ಒತ್ತಿಕೊಳ್ಳುವುದರಿಂದ ದೇಹದ ನರ ಮಂಡಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.ಇದರಿಂದ ದೇಹದಲ್ಲಿ ರಕ್ತಪರಿಚಲನೆಯು ಉತ್ತಮ ರೀತಿಯಲ್ಲಿ ನಡೆಯಲು ಸಹಕಾರಿಯಾಗಿದೆ.

4.ನೋವಿನ ನಿವಾರಣೆ:

ಎದೆಯ ಮೂಳೆಯ ಕೆಳ ಅಕ್ಯೂಪ್ರೆಶರ್ ಭಾಗವನ್ನು ಒತ್ತಿಕೊಳ್ಳುವುದರಿಂದ ನರ/ಸ್ನಾಯು ಸೆಳೆತ ಸಮಸ್ಯೆಗಳಿಗೆ ಪರಿಣಾಮವಾಗಿ ಕೆಲಸ ಮಾಡುತ್ತವೆ. ಹಸ್ತ ಮತ್ತು ಪಾದದ ಮೇಲೆ ನರಮಂಡಲದ ಮೂಲ ನರಗಳು ಇರುವುದರಿಂದ ಬಹುಬೇಗ ನೋವು ನಿವಾರಣೆಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top