ದಾಳಿಂಬೆಯ ತವರೂರು ಇರಾನ್. ೧೭ ನೇ ಶತಮಾನದಲ್ಲಿ ವರಾಹಮಿಹಿರನು ಬರೆದ ಬೃಹತ್ ಸಂಹಿತೆಯಲ್ಲಿ ಇದರ ಉಲ್ಲೇಖವಿದೆ.ದಾಳಿಂಬೆ ಹಣ್ಣಿನ ಔಷಧೀಯ ಗುಣಗಳ ಬಗ್ಗೆ ಚರಕ ಮತ್ತು ಸುಶ್ರುತ ಸಂಹಿತೆಯಲ್ಲಿ ಉಲ್ಲೇಖವಿದೆ.ದಾಳಿಂಬೆಯು ಪೊದೆಯಂತೆ ಬೆಳೆಯುವ ಚಿಕ್ಕಮರ.ಈ ಗಿಡದ ಹಣ್ಣು, ಹಾನಿನ ತಿರುಳು, ಕಾಂಡ, ತೊಗಟೆ ಔಷಧಿಗಾಗಿ ಉಪಯುಕ್ತ.
ಔಷಧೀಯ ಗುಣಗಳು:
೧) ಬಾಯಾರಿಕೆ ತಗ್ಗಿಸಲು ದಾಳಿಂಬೆ ರಸ ಉತ್ತಮ ಪಾನೀಯ.
೨) ಜ್ವರದಿಂದ ಬಳಲುತ್ತಿರುವವರಿಗೆ ದಾಳಿಂಬೆ ರಸ ಮತ್ತು ಸಕ್ಕರೆ ಸೇರಿಸಿ ತಯಾರಿಸಿದ ಪಾನೀಯ ಕುಡಿಯಲು ಕೊಡಬೇಕು.
೩) ಆಮಶಂಕೆ ಮತ್ತು ರಕ್ತಭೇದಿ ಇರುವಾಗ ದಾಳಿಂಬೆ ಸಿಪ್ಪೆಯ ಕಷಾಯವನ್ನು ಕುಡಿಯಬೇಕು.
೪) ಮೂತ್ರ ಕಟ್ಟಿದ್ದಲ್ಲಿ ದಾಳಿಂಬೆಯ ರಸ ಕುಡಿಯಬೇಕು.
೫) ಹೃದ್ರೋಗ, ಜಠರದ ಸಮಸ್ಯೆ , ಕಾಮಾಲೆಯಿಂದ ಬಳಲುವವರಿಗೂ ದಾಳಿಂಬೆ ಸೇವನೆ ಒಳ್ಳೆಯದು.
೬)ಜಂತುಹುಳುವಿರುವಾಗ ಬೇರಿನ ತೊಗಟೆಯ ಕಷಾಯ ಸೇವಿಸಬೇಕು.
೭) ಹೊಟ್ಟೆನೋವು ಮತ್ತು ಹಲ್ಲು ನೋವುಗಳಿದ್ದಾಗ ದಾಳಿಂಬೆ ಹೂವಿನ ರಸ ಕುಡಿಯಬೇಕು.
೮) ಅಜೀರ್ಣದಿಂದ ಬಳಲುವವರು ದಾಳಿಂಬೆ ರಸಕ್ಕೆ ಒಂದು ಚಮಚ ಜೀರಿಗೆ ಪುಡಿ ಸೇರಿಸಿ ಕುಡಿಯಬೇಕು.
೯) ಕೆಮ್ಮು ಇರುವಾಗ ದಾಳಿಂಬೆ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬೇಕು.
೧೦)ಅಲರ್ಜಿಯ ತೊಂದರೆಯಿದ್ದಲ್ಲಿ ದಾಳಿಂಬೆಯನ್ನು ಕಲ್ಲು ಸಕ್ಕರೆಯೊಂದಿಗೆ ಸೇವಿಸಬೇಕು.
೧೧)ಗಂಟಲು ನೋವಿದ್ದಾಗ ಈ ಹಣ್ಣಿನ ತೊಗಟೆಯ ಕಷಾಯದಿಂದ ಬಾಯಿ ಮುಕ್ಕಳಿಸಬೇಕು.
೧೨)ನರಗಳ ತೊಂದರೆಯಿಂದ ಬಳಲುವವರಿಗೂ ದಾಳಿಂಬೆ ಹಣ್ಣು ಒಳ್ಳೆಯದು.
೧೩) ಗಾಯ ಮತ್ತು ವೃಣಗಳಿಗೆ ಬೇರನ್ನು ಅರೆದು ಲೇಪಿಸಬೇಕು.
೧೩) ತಲೆನೋವಿರುವಾಗ ದಾಳಿಂಬೆ ಗಿಡದ ಬೇರನ್ನು ನೀರಿನಲ್ಲಿ ಅರೆದು ಹಣೆಗೆ ಲೇಪಿಸುವುದರಿಂದ ಕಡಿಮೆಯಾಗುತ್ತದೆ.
೧೩) ಮೈ ಮೇಲೆ ಗುಳ್ಳೆಗಳು ಎದ್ದಿರುವಾಗ ದಾಳಿಂಬೆ, ಜೀರಿಗೆ, ಧನಿಯಾಗಳನ್ನು ೨೪ ಗಂಟೆ ನೀರಿನಲ್ಲಿ ನೆನೆಸಿಟ್ಟು ನಂತರ ಬೆಲ್ಲ ಬೆರೆಸಿ ಕುಡಿಯಬೇಕು.
೧೪) ಸುಟ್ಟ ಗಾಯಗಳಿಗೆ ದಾಳಿಂಬೆ ಎಲೆಯನ್ನು ಅರೆದು ಲೇಪಿಸಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
