fbpx
ತಿಂಡಿ ತೀರ್ಥ

ಸಂಡೆ ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ

ಸಂಡೆ ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ

ಮಟನ್ ಬಿರಿಯಾನಿ ಮಾಡಲು ಬೇಕಾಗುವ ಸಾಮಾಗ್ರಿಗಳು

*1 ಲವಂಗದ ಎಲೆ  *1 ಚಮಚ ಶುಂಠಿ ಪೇಸ್ಟ್ *ಅರ್ಧ ಕಪ್ ಗೋಡಂಬಿ  *1 ಚಮಚ ಗರಂ ಮಸಾಲ*ತೋರು ಬೆರಳಿನಷ್ಟು ಉದ್ದದ ಚಕ್ಕೆ *ಅರ್ಧ ಕಪ್ ಫ್ರೆಶ್ ಕ್ರೀಮ್  *ಚಿಟಿಕೆಯಷ್ಟು ಕೇಸರಿ *2 ಏಲಕ್ಕಿ *1/4 ಕಪ್‌ ತುಪ್ಪ *4 ಒಣ ಮೆಣಸು 2 ಚಮಚ ಜೀರಿಗೆ *1 ಚಮಚ ಬೆಳ್ಳುಳ್ಳಿ ಪೇಸ್ಟ್‌ *ಅರ್ಧ ಕಪ್‌ ಒಣದ್ರಾಕ್ಷಿ *ಅರ್ಧ ಕಪ್‌ ಹಾಲು

ಮಟನ್ ಬಿರಿಯಾನಿ ಮಾಡುವ ವಿಧಾನ :

1.ಮಟನ್ ಅನ್ನು ಚೆನ್ನಾಗಿ ತೊಳೆದು ನೀರು ಹೋಗಲು ಸೋಸು ಪಾತ್ರೆಯಲ್ಲಿ ಹಾಕಿಡಿ.

2.ನಂತರ ಮಟನ್‌ ಹಾಕಲು ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಕ್ಸ್‌ ಮಾಡಿ 5-6 ಗಂಟೆ ಇಡಿ.

3.ಈಗ ಬಾಸುಮತಿ ಅಕ್ಕಿಯನ್ನು ಅರ್ಧ ಬೇಯಿಸಿ ಬಸಿದು ಒಂದು ತಟ್ಟೆಯಲ್ಲಿ ಹರಡಿ.

4.ಅರ್ಧ ಕಪ್‌ ಬಿಸಿ ಹಾಲಿಗೆ ಕೇಸರಿ ಹಾಕಿ ಇಡಿ. ಈಗ ತುಪ್ಪದಲ್ಲಿ ಗೋಡಂಬಿ ದ್ರಾಕ್ಷಿಯನ್ನು ಫ್ರೈ ಮಾಡಿ ಇಡಿ. ನಂತರ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಇಡಿ. ಇದೇ ಸಮಯದಲ್ಲಿ ಮಟನ್‌ ಅನ್ನು ಫ್ರಿಜ್‌ನಲ್ಲಿ ಇಟ್ಟಿದ್ದರೆ

ಹೊರತೆಗೆದು ಇಡಿ.

5.ಈಗ ದೊಡ್ಡ ಪ್ಯಾನ್‌ಗೆ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಲವಂಗ, ಚಕ್ಕೆ, ಲವಂಗದ ಎಲೆ, ಏಲಕ್ಕಿ ಮತ್ತು ಜೀರಿಗೆ ಹಾಕಿ, ನಂತರ ಒಣ ಮೆಣಸು ಹಾಕಿ, ಮಸಾಲೆ ಮಿಕ್ಸ್ ಮಾಡಿಟ್ಟ ಮಟನ್‌ ಹಾಕಿ , ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ರುಚಿಗೆ ತಕ್ಕ ಉಪ್ಪು ಸೇರಿಸಿ ಪ್ಯಾನ್‌ನ ಬಾಯಿ ಮುಚ್ಚಿ ಬೇಯಿಸಿ.

6.ಮಟನ್‌ ಚೆನ್ನಾಗಿ ಬೆಂದು, ಗ್ರೇವಿಯ ಮೇಲ್ಭಾಗದಲ್ಲಿ ಎಣ್ಣೆ ತುಪ್ಪ ತೇಲುವಂತಾದಾಗ ಅದನ್ನು ಉರಿಯಿಂದ ಇಳಿಸಿ, ಮಟನ್‌ ಅನ್ನು ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ.

7.ಈಗ ಅದೇ ಪಾತ್ರೆಗೆ ಸ್ವಲ್ಪ ಮಟನ್ ಹಾಕಿ ಹರಡಿ, ಅದರ ಮೇಲೆ ಸ್ವಲ್ಪ ಅನ್ನ ಹಾಕಿ ಹರಡಿ, ಸ್ವಲ್ಪ ಕೊತ್ತಂಬರಿ -ಪುದೀನಾ ಸೊಪ್ಪು ಹಾಕಿ ಹೀಗೆ ಅನ್ನ ಹಾಗೂ ಮಟನ್‌ ಅನ್ನು ಪದರ-ಪದರವಾಗಿ ಹಾಕಿ, ಪ್ರತೀಬಾರಿಯೂ ಕೇಸರಿ ಹಾಕಿಟ್ಟ ಹಾಲನ್ನು ಚಿಮುಕಿಸಿ. ನಂತರ ಮೇಲ್ಬಾಗದಲ್ಲಿ ಫ್ರೈ ಮಾಡಿಟ್ಟ ಗೋಡಂಬಿ, ದ್ರಾಕ್ಷಿ, ಈರುಳ್ಳಿ, ಕಸೂರಿ ಮೇತಿ ಪೌಡರ್‌ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 10-12 ನಿಮಿಷ ಬೇಯಿಸಿ. ನಂತರ ಉರಿಯಿಂದ ಇಳಿಸಿ ಮಿಕ್ಸ್‌ ಮಾಡಿ, ಮೊಸರು ಬಜ್ಜಿ ಅಥವಾ ಮಟನ್ ಗ್ರೇವಿ ಜತೆ ಸರ್ವ್‌ ಮಾಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top