fbpx
ಕನ್ನಡ

ಆಸ್ಟ್ರೇಲಿಯಾದ ಸರ್ಕಾರಿ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಕನ್ನಡ ಬೋಧನೆ..!

ಆಸ್ಟ್ರೇಲಿಯಾದ ಸರ್ಕಾರಿ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಕನ್ನಡ ಬೋಧನೆ..!

 

 

ಕರ್ನಾಟಕದ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ಕುರಿತು ಅನೇಕ ಚರ್ಚೆಗಳು ನಡೆಯುತ್ತಿವೆ ಹೀಗಿರುವಾಗ ಆಸ್ಟ್ರೇಲಿಯಾದ ಮೆಲ್ಬೋರ್ನ್ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯನ್ನೂ ಕಲಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

 

 

ಮೆಲ್ಬೋರ್ನ್‌ನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು 12ನೇ ತರಗತಿಯ ತಮ್ಮ ಮುಖ್ಯ ಪರೀಕ್ಷೆಯಲ್ಲಿ ಕನ್ನಡವನ್ನು ಎರಡನೇ ಭಾಷಾ ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಆಸ್ಟ್ರೇಲಿಯಾದ ವಿಕ್ಟೋರಿಯಾ ಸರಕಾರ ತಿಳಿಸಿದೆ..ಈ ಮೂಲಕ ಮೊದಲ ಬಾರಿಗೆ, ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಸರ್ಕಾರ ನಡೆಸುತ್ತಿದ್ದ ಶಾಲೆಗಳು ಕನ್ನಡ ಭಾಷೆಯನ್ನೂ ಬೋಧನೆ ಮಾಡಲಿವೆ.

 

 

 

ಮೆಲ್ಬೋರ್ನ್‌ನ ಕನ್ನಡ ಸಂಘವು ಸರಕಾರಿ ಶಾಲೆಗಳಲ್ಲಿ ಕನ್ನಡವನ್ನು ಐಚ್ಛಿಕ ಭಾಷೆಯನ್ನಾಗಿ ಭೋದಿಸಬೇಕೆಂದು ವಿಕ್ಟೋರಿಯಾ ಸ್ಕೂಲ್ ಆಫ್ ಲ್ಯಾಂಗ್ವೆಜ್‌ಸ್ ಗೆ ಮನವಿ ಮಾಡಿತ್ತು. ಮೆಲ್ಬೋರ್ನ್‌ನ ಕನ್ನಡ ಸಂಘದ ಮನವಿಯನ್ನು ಪುರಸ್ಕರಿಸಿರುವ ವಿಕ್ಟೋರಿಯಾ ಸರ್ಕಾರ, ಆಸ್ಟ್ರೇಲಿಯಾದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯನ್ನೂ ಕಲಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

 

 

ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಕನ್ನಡಿಗರು ಇರುವುದರಿಂದ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಬೋಧಿಸುವ ಯೋಜನೆ ಜಾರಿಯಾಗಲಿದೆ. ಆಸ್ಟ್ರೇಲಿಯಾದಲ್ಲಿನ ಇಂಡಿಯನ್ ಅಸೋಸಿಯೇಷನ್ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ರೀತಿ ತೆಲುಗು ಭಾಷೆಯನ್ನು ಸಹ ತರಲು ಪ್ರಯತ್ನಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Narayan says:

Nice to hear

To Top