fbpx
ಮನೋರಂಜನೆ

ಬಿಗ್ ಬಾಸ್-5 ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆದ ಸ್ಪರ್ದಿಗಳು ಇವರೇ..?

ಬಿಗ್ ಬಾಸ್-5 ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆದ ಸ್ಪರ್ದಿಗಳು ಇವರೇ..?

 

 

 

 

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಆರಂಭಕ್ಕೆ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ 15 ರಿಂದ ಶೋ ಆರಂಭವಾಗಲಿದ್ದು, 100 ದಿನಗಳ ಕಾಲ ನಡೆಯಲಿದೆ. ‘ಬಿಗ್ ಬಾಸ್’ ಮನೆಯೊಳಗೆ ಎಂದಿನಂತೆ ಸೆಲೆಬ್ರಿಟಿಗಳು ಎಂಟ್ರಿ ಪಡೆಯಲಿದ್ದಾರೆ. ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ.

 

 

ಬಿಗ್ ಬಾಸ್’ ಹಿಂದಿನ 4 ಸೀಸನ್ ಯಶಸ್ವಿಯಾಗಿದ್ದು, 5 ನೇ ಸೀಸನ್ ಕುರಿತಾಗಿ ನಿರೀಕ್ಷೆ ಹೆಚ್ಚಾಗಿದೆ. ಹಿಂದಿನ ನಾಲ್ಕು ಸೀಸನ್ ಗಳಲ್ಲೂ ನಿರೂಪಕರಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಭಾರಿಯೂ ಎಂದಿನಂತೆ ಕಾರ್ಯಕ್ರಮದ ನಿರೂಪಣೆಯನ್ನ ಮಾಡಲಿದ್ದಾರೆ. ಸ್ಪರ್ದಿಗಳು ಯಾರ್ಯಾರು ಎಂಬುದೇ ಈ ಭಾರಿಯೂ ಕೂಡ ಕುತೂಹಲ ಕೆರಳಿಸಿವೆ.

 

 

ಯಾರು ಯಾರು ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ ಅನ್ನೊ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು ಬಿಗ್ ಬಾಸ್-5 ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸ್ಪರ್ಧಿಗಳ ಸಂಭಾವ್ಯರ ಹೆಸರು ಇಲ್ಲಿದೆ. ಹಿರಿಯ ನಟ ಸಿಹಿ ಕಹಿ ಚಂದ್ರು,ನಟಿ ವಿಜಯಲಕ್ಷ್ಮಿ, ಕಿರುತೆರೆ ನಟಿ ವರ್ಷಿಣಿ ಕುಸುಮಾ, ಗಾಯಕಿ ಅನುರಾಧ ಭಟ್, ಕವಿತಾ ಗೌಡ, ಕನ್ನಡ ರ್ಯಾಪರ್ ಚಂದನ್ ಶೆಟ್ಟಿ,ಆರ್.ಜೆ ರಿಯಾಜ್ ಪಾಷಾ, ಹಾಗೂ ರಾಜೇಶ್ ನಟರಂಗ ಭಾಗವಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

 

ಆದರೆ ‘ಬಿಗ್ ಬಾಸ್’ ಸೀಸನ್ 5 ಗೆ ಎಂಟ್ರಿ ಪಡೆಯಲಿರುವ ಜನ ಸಾಮಾನ್ಯ ಯಾರು ಎಂಬ ಗುಟ್ಟನ್ನು ಇನ್ನು ಬಿಟ್ಟುಕೊಟ್ಟಿಲ್ಲ. ಸೀಸನ್ 4ಕ್ಕಿಂತಲೂ ಈ ಬಾರಿಯ ಬಿಗ್ ಬಾಸ್ ಮನೆ ಸಖತ್ ಕಲರ್ ಫುಲ್ ಆಗಿರಲಿದೆಯಂತೆ,, ಈ ಭಾರಿ ಬಿಗ್ ಬಾಸ್ ಕಾರ್ಯಕ್ರಮವು ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರತಿದಿನ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top