fbpx
ಸಣ್ಣ ಕಥೆ

‘ಫೇಸ್ ಬುಕ್’ ಕಟ್ಟಿದವನ ಇಂಟ್ರೆಸ್ಟಿಂಗ್ ‘ಲವ್ ಸ್ಟೋರಿ’ ಹೇಗೆ ಅವನ ಬದುಕು ಬದಲಾಯಿಸಿತು ಕೇಳಿ ಆಶ್ಚರ್ಯ ಪಡ್ತಿರಾ !

‘ಫೇಸ್ ಬುಕ್’ ಕಟ್ಟಿದವನ ಇಂಟ್ರೆಸ್ಟಿಂಗ್ ‘ಲವ್ ಸ್ಟೋರಿ’ ಹೇಗೆ ಅವನ ಬದುಕು ಬದಲಾಯಿಸಿತು ಕೇಳಿ ಆಶ್ಚರ್ಯ ಪಡ್ತಿರಾ !

 

ಸಾಮಾಜಿಕ ಜಾಲತಾಣಗಳ ರಾಜನೆಂದೇ ಎನಿಸಿಕೊಂಡಿರುವ ‘ಫೇಸ್ಬುಕ್’ ನ ಸಂಸ್ಥಾಪಕ ‘ಮಾರ್ಕ್ ಜ್ಯೂಕರ್ಬರ್ಗ್ ‘ ಅತ್ಯಂತ ಚಿಕ್ಕ ವಯಸ್ಸಿನ ಸ್ವಯಂ-ನಿರ್ಮಿತ ಶತಕೋಟ್ಯಾಧಿಪತಿಗಳಲ್ಲಿ ಒಬ್ಬರಾಗಿದ್ದಾರೆ ಮತ್ತು ಉದ್ಯಮದಲ್ಲಿ ತೀಕ್ಷ್ಣವಾದ ಮನಸ್ಸಿನ ವ್ಯಕ್ತಿ ಆದರೆ ಈ ಕೀರ್ತಿ ಯಶಸ್ಸಿನ ಹಿಂದೆ ಒಬ್ಬ ಮಹಿಳೆಯ ಪಾತ್ರವಿದೆ ಎಂಬುದು ಎಷ್ಟೋ ಜನರಿಗೆ ಗೊತ್ತಿಲ್ಲ.

 

 

ಬನ್ನಿ ಇಂದು ನಾವೊಂದು ಪ್ರೀತಿ ಪ್ರಣಯ ಕಥೆ ಮತ್ತು ಆ ಕಥೆ ಸಾಧನೆಗೆ ಹೇಗೆ ಸ್ಫೂರ್ತಿಯಾಯಿತು ಎಂದು ತಿಳಿಯೋಣ

 

ಮಾರ್ಕ್ ಜ್ಯೂಕರ್ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ನ ಸುಂದರ ಪ್ರೀತಿಯ ಕಥೆ ಇಲ್ಲಿದೆ ಮುಂದೆ ಓದಿ

ಇಂಟರ್ನೆಟ್ನಲ್ಲಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿರುವ ಅತ್ಯಂತ ಪ್ರಭಾವಿ ಮಾರ್ಕ್ ಜ್ಯೂಕರ್ಬರ್ಗ್ ಇವರಿಬ್ಬರ ಭೇಟಿಯಾಗಿದ್ದು ಟಾಯ್ಲೆಟ್ ಕ್ಯೂ ನಲ್ಲಿ ನಿಂತಿರುವಾಗ
ಹಾಗೆ ಕಣ್ಣುಗಳು ಕಲೆತವು , ಇಬ್ಬರು ಪರಸ್ಪರ ಇಷ್ಟ ಪಟ್ಟರು , ಹಾಗೆಯೇ ತಾವು ಓದುತ್ತಿದ್ದ ‘ಹಾರ್ವರ್ಡ್’ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗಳಲ್ಲಿ ಡೇಟ್ ಮಾಡಲು ಶುರು ಹಚ್ಚಿದರು .

ಬಹಳ ತುಂಟನಾಗಿದ್ದ ಮಾರ್ಕ್ ಮೊದಲಿಗೆ ಫೇಸ್ಬುಕ್ ಅನ್ನು ತನ್ನ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಒಳಗೆ ಮಾತ್ರ ಸೀಮಿತವಾಗಿರಿಸಿದ್ದ , ಅದರಲ್ಲಿ ತಮ್ಮ ಕ್ಯಾಂಪಸ್ ನ ವಿದ್ಯಾರ್ಥಿಗಳು ಮಾತ್ರ ಇದ್ದರು , ಕೆಲವು ಪೋಸ್ಟ್ಗಳ್ಲನ್ನು ಮಾಡಲು ಮೊದಲು ಶುರು ಮಾಡಿದ್ದರು ಅದೇನೆಂದರೆ ನಿಮ್ಮ ಕ್ಲಾಸ್ ಮೇಟ್ ಗಳಲ್ಲಿ ಅತಿ ಸುಂದರಿ ಯಾರು ?
ಯಾರು ಸೆಕ್ಸಿ ಫಿಗರ್ ಹೊಂದಿದ್ದಾರೆ ? ಯಾರಿಗೆ ಇವಳ ಮೇಲೆ ಕ್ರಶ್ ಆಗಿದೆ ? ಈ ರೀತಿ ಪೋಲ್ ಗಳನ್ನೂ ಶುರು ಮಾಡಿದ್ದರು .

 

 

ಈ ಪೋಲ್ ಗಳು ಆ ಕಾಲಕ್ಕೆ ಭಾರಿ ಹಿಟ್ ಆದವು , ನಂತ್ರದ ದಿನಗಳಲ್ಲಿ ಫೇಸ್ಬುಕ್ ಭಾರಿ ಜನಮನ್ನಣೆ ಪಡೆಯುತ್ತಾ ಹೋಯಿತು , ಕಾಲೇಜ್ ನ ಹೊರಗೂ ಸುದ್ದಿ ಮಾಡಲು ಶುರು ಮಾಡಿತ್ತು , ಮಾರ್ಕ್ ಗೆ ಆಗ ಅರ್ಥವಾದ ಸತ್ಯವೆಂದರೆ , ಜನರಿಗೆ ಇನ್ನೊಬ್ಬರ ಬಗ್ಗೆ ತಿಳಿದುಕೊಳ್ಳುವ ಆಸೆ ಬಹಳಷ್ಟಿದೆ , ಹಾಗೆಯೇ ತಮ್ಮ ಬಗ್ಗೆ ತಿಳಿಸುವ ಆಸೆ ಕೂಡ ಇದೆ , ಇದನ್ನೇ ದೊಡ್ಡ ಮಟ್ಟದಲ್ಲಿ ಮಾಡಿ ಫೇಮಸ್ ಮಾಡಬೇಕು ಎಂದು ಭಾವಿಸಿ , ಜೀವನದ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರು ಅದೇನೆಂದರೆ ಓದನ್ನು ಅರ್ಧದಲ್ಲಿ ಬಿಟ್ಟು ಕಂಪನಿ ಶುರು ಮಾಡುವುದು , ಆಗ ಫೇಸ್ಬುಕ್ ಹಂತ ಹಂತವಾಗಿ ಬೆಳೆಯುತ್ತಾ ಹೋಯಿತು .

ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ಹೋದ ಮಾರ್ಕ್ ನ ಹಿಂದೆ ಬೆನ್ನ ನೆರಳಾಗಿ ನಿಂತವಳು ಅವನ ಪ್ರೇಯಸಿ

 

 

ಪೀಡಿಯಾಟ್ರಿಕ್ಸ್ನಲ್ಲಿ ಪರಿಣತಿ ಹೊಂದಿದ ಪ್ರಿಸ್ಸಿಲಾ, ಜುಕರ್ಬರ್ಗ್ನನ್ನು ಫೇಸ್ಬುಕ್ನಲ್ಲಿ ಅಂಗ ದಾನವನ್ನು ಉತ್ತೇಜಿಸಲು ಪ್ರೇರೇಪಿಸಿದಳು , ಅವರ ಪ್ರೀತಿಯು ಎಷ್ಟು ಬಲವಾದದ್ದು ಎಂದರೆ ಮಾರ್ಕ್ ಕಂಪನಿ ಕಟ್ಟುವ ಸಲುವಾಗಿ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡಾಗ ಪ್ರಿಸ್ಸಿಲ್ಲಾ ಕೂಡಾ ಸ್ಥಳಾಂತರಗೊಂಡು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿಕೊಂಡಳು.

 

ಪ್ರಿಸ್ಸಿಲಾ ತನ್ನ ಮೆಡಿಕಲ್ ಕೋರ್ಸ್ ಮುಗಿಸಿದಳು 2012 ರಲ್ಲಿ ಈ ಅದ್ಭುತ ಪ್ರೇಮ ಕಥೆ ಮತ್ತೊಂದು ತಿರುವು ಪಡೆದಿತ್ತು , ಪ್ರಿಸ್ಸಿಲಾ ಗ್ರಾಜುಯೇಷನ್ ಪಾರ್ಟಿ ಎಂದು ಹೇಳಿ 100 ಅತಿಥಿಗಳು ಹಾಗು ಸ್ನೇಹಿತರನ್ನು ಮಾರ್ಕ್ ಆಹ್ವಾನಿಸಿದರು ಆದರೆ ಆಶ್ಚರ್ಯ ಎಂಬಂತೆ ಅಂದೇ ತಮ್ಮ ಮದುವೆ ಎಂದು ಘೋಷಣೆ ಮಾಡಿ ಮದುವೆಯ ಉಂಗುರವನ್ನು ತೊಡಿಸಿ ಮದುವೆಯಾದರು.

 

 

‘ಕೆಲಸ ಕಾರ್ಯ ಇಲ್ಲದೆ ಓಡಿದಾಡಿಕೊಂಡಿದ್ದ ನನಗೆ ಜವಾಬ್ದಾರಿ ಕಲಿಸಿ ಮನುಷ್ಯನನ್ನಾಗಿ ಮಾಡಿದ್ದವಳು ಪ್ರಿಸ್ಸಿಲಾ’ ಎಂದು ಎಷ್ಟೋ ಭಾರಿ ಮಾರ್ಕ್ ಹೇಳಿಕೊಂಡಿದ್ದಾರೆ .

 

 

ಈಗ ಈ ದಂಪತಿಗಳು ಇಬ್ಬರು ಮಕ್ಕಳ ಪೋಷಕರು , ಈ ಸುಂದರ ಜೋಡಿಗೆ ನೀವು ‘ಆಲ್ ದಿ ಬೆಸ್ಟ್’ ಹೇಳಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top