fbpx
ಸಣ್ಣ ಕಥೆ

ಮನುಷ್ಯ ಬದುಕೋವಾಗ ಸ್ಥಾನ,ಮಾನ,ವೈಭವಗಳು ಮುಖ್ಯ ಅಲ್ಲ ಅವ್ನು ಮಾಡೋ ‘ಕರ್ಮ’ ಮುಖ್ಯ , ಓದಿ ಇದು ಯಮಧರ್ಮ ರಾಯ ಹೇಳ್ಕೊಟ್ಟ ಪಾಠ

ಈ ಜಗತ್ತಿನಲ್ಲಿ ಜನಿಸಿದ ಮಾನವನು ಅನೇಕ ತರದ  ವೃತ್ತಿ, ಕಸುಬು ಉದ್ಯೋಗಗಳನ್ನು ಮಾಡುತ್ತಾನೆ. ಇಂತಹ ಉದ್ಯೋಗಗಳ ಪೈಕಿ ಕೆಲವರು ಮೇಲ್ಮಟ್ಟದವು  ಎಂದು ಗೌರವ ಪಡೆದರೆ,ಕೆಲವು ಕೆಳಮಟ್ಟದವು  ಎಂಬ ಕಾರಣಕ್ಕಾಗಿ ಗೌರವವನ್ನು ಪಡೆಯುವುದಿಲ್ಲ. ಆದರೆ ಮಾನವನು ಮಾಡುವ ಕಾರ್ಯಗಳಲ್ಲಿ ಮೇಲು ಕೀಳು ಎಂಬ ಭಾವವಿಲ್ಲದೆ ಸರ್ವರೂ ವೃತ್ತಿ ಗೌರವದಿಂದ ತಮ್ಮ ತಮ್ಮ ಕರ್ತವ್ಯಗಳನ್ನು ಪಾಲಿಸಬೇಕು ಎಂಬ ಸಂದೇಶವನ್ನು ನೀಡುವ ಹೃದಯ ಪ್ರಸಂಗವು ಇಲ್ಲಿದೆ.

 

 

ಒಂದು ಹಳ್ಳಿಯಲ್ಲಿ ಒಬ್ಬ ಜಮೀನ್ದಾರ ಮತ್ತು ಅವನ ನೌಕರ ಇಬ್ಬರು ಜತೆ ಜತೆಯಾಗಿಯೇ ತೀರಿಕೊಂಡರು.ಇಬ್ಬರೂ ಯಮಲೋಕಕ್ಕೆ ತಲುಪಿದಾಗ ಯಮಧರ್ಮರಾಜನು ಜಮೀನ್ದಾರನೊಡನೆ,ನಾಳೆಯಿಂದ ನೀವು ನೌಕರನ ಕೆಲಸ ಮಾಡಬೇಕು. ನೌಕರ ಕೆಲಸವಿಲ್ಲದೇ ಆರಾಮವಾಗಿರಲಿ ಎಂದಾಗ ಒಪ್ಪಿಕೊಂಡರೂ, ಜಮೀನ್ದಾರನಿಗೆ ತಲೆ ಬಿಸಿಯಾಯಿತು.ಆತ “ ಹೇ ಧರ್ಮರಾಜ ನನಗೇಕೆ ಇಂಥ ಶಿಕ್ಷೆ ? ನಾನು ಪ್ರತಿನಿತ್ಯ ದೇವರ ಪೂಜೆ ಮತ್ತು  ಮೊದಲಾದ ಕರ್ತವ್ಯಗಳನ್ನು ಮಾಡುತ್ತಿದ್ದೇನೆ,” ಎಂದು ಹೇಳಿದ.

 

 

ಯಮಧರ್ಮರಾಜನು ನೌಕರನೊಡನೆ “ ನೀನೇನು ಮಾಡುತ್ತಿದ್ದೆ ?”  ಎಂದು ಕೇಳಿದಾಗ ಆತ, “ಸ್ವಾಮಿ, ನಾನೋ ಬಡ ನೌಕರ ದಿನವಿಡೀ ದಣಿಗಳ ಗದ್ದೆಯಲ್ಲಿ ದುಡಿದು,ದೊರೆತ ಮಜೂರಿಯಲ್ಲಿ ಬದುಕುತ್ತಿದ್ದೆ. ಪುರುಸೊತ್ತು ದೊರೆತಾಗ ದೇವರ ಸ್ಮರಣೆ ಮಾಡಿದೆ. ಸ್ವಂತಕ್ಕೆ ಏನು ಬೇಡಲಿಲ್ಲ ಬಡತನದಿಂದಾಗಿ ದೇವರಿಗೆ  ಆರತಿ ಮಾಡಲಿಲ್ಲ ಮನೆಯಲ್ಲಿ ಎಣ್ಣೆಯಿದ್ದಾಗ  ದೀಪ ಉರಿಸಿ ದಾರಿಹೋಕರಿಗೆ  ಬೆಳಕು ನೀಡುತ್ತೇನೆ” ಎಂದು ಹೇಳಿದ. ಆಗ ಧರ್ಮರಾಜನು ಜಮೀನ್ದಾರನೊಡನೆ,  “ಈ ನೌಕರನ ಕರ್ಮ ಪ್ರಜ್ಞೆ ಗಮನಿಸಿದೆಯೋ ?   ಭಗವಂತ ಧನ ಸಂಪತ್ತಿನಿಂದಲ್ಲ. ಪ್ರಾಮಾಣಿಕ ಕರ್ಮ ನಿಷ್ಠೆಯನ್ನು ಕಲಿಯಲೆಂದೇ  ನಿನ್ನನ್ನು ನೌಕರನಾಗಿ ಮಾಡಿದ” ಎಂದು ಹೇಳಿದ. ಇದನ್ನು ಕೇಳಿದ ಜಮೀನ್ದಾರನ ವಿವೇಕದ ಕಂಗಳು ತೆರೆದುಕೊಂಡವು.

 

 

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಸ್ಥಾನ,ಮಾನ,ವೈಭವಗಳು ಮುಖ್ಯವಲ್ಲ.ಆತ ಮಾಡುವ ಕರ್ಮದ ಫಲ ಮುಖ್ಯ.ಒಬ್ಬ ವ್ಯಕ್ತಿಯು ಮಾಡುವ ಕರ್ಮಗಳಿಂದಾಗಿ ಯಾರ ಮೇಲೆ ಎಂಥ ಫಲ ಬೀರುತ್ತದೆ ?  ಎಂಬುದು ಬಹು ಮುಖ್ಯವಾಗಿ ಅರ್ಥ ಮಾಡಿಕೊಂಡಾಗ ನಮ್ಮ ಜೀವನ ಸಾರ್ಥಕ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top