fbpx
ಭವಿಷ್ಯ

ವಾರ ಭವಿಷ್ಯ ಅಕ್ಟೋಬರ್ 9 ರಿಂದ ಅಕ್ಟೋಬರ್ 14 ರವರೆಗೆ.

ವಾರ ಭವಿಷ್ಯ ಅಕ್ಟೋಬರ್ 9 ರಿಂದ ಅಕ್ಟೋಬರ್ 14 ರವರೆಗೆ.

ಮೇಷ (Mesha)

 

ನಿಮ್ಮ ಜೀವನದಲ್ಲಿ  ಇದು ಉದ್ಯೋಗದ ಕಾಲ,ಸಮಾಧಾನ ಚಿತ್ತದಿಂದ ಮುಂದುವರಿಯಬೇಕಾದೀತು.ಹಾಗೇ ವೃತ್ತಿರಂಗದಲ್ಲಿ ತುಂಬಾ ವೆಚ್ಚ ಹಾಗೂ ಅನಗತ್ಯ ಕೆಲಸಗಳು ನಡೆದು ನಿಮ್ಮ ಸಮಯ ಮಿತಿಮೀರಿ ವ್ಯಯವಾಗುವುದು.ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗದ ಯೋಗವಿದೆ.ಸದ್ಯದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯ ಅಗತ್ಯವಿದೆ. ಸಾಮಾಜಿಕ ರಂಗದಲ್ಲಿ ಹೊಸಬರೊಂದಿಗೆ ಸಂಪರ್ಕಕ್ಕೆ ಬಂದು ಸಹಾಯ ದೊರೆಯುವುದು.ಖರೀದಿ ಮಾರಾಟದಲ್ಲಿ ಹೆಚ್ಚಿನ ಕಾಳಜಿ ಉತ್ತಮ.

 

ವೃಷಭ (Vrushabh)

ಕಾರ್ಯ ಕ್ಷೇತ್ರದಲ್ಲಿ ಸಾಧಾರಣ ರೀತಿಯ ಬೆಳವಣಿಗೆಗಳು ಕಂಡು ಬಂದರೂ ಕೊಂಚ ಗೊಂದಲಕ್ಕೆ ಕಾರಣವಾಗುವ ಸಮಸ್ಯೆಗಳಿಂದ ಯಾರನ್ನೂ ನಂಬದಂತಹ ಪರಿಸ್ಥಿತಿ ತೋರಿಬರುವುದು.ನಿಮಗೆ ದ್ರೋಹ ಬಗೆಯುವ ಇಲ್ಲವೇ ನಿಮ್ಮಿಂದ ತುಂಬಾ ಖರ್ಚು ಮಾಡಿಸುವ ಚಂಚಲ ವ್ಯಕ್ತಿಗಳ ಸಂಪರ್ಕಗಳ ಬಗ್ಗೆ ಜಾಗ್ರತೆ ಇರಲಿ .ಅಂತೂ ನಿಮಗೆ ಹೆಚ್ಚಿನ ಬಿಡುವು ದೊರೆಯುವುದಿಲ್ಲ.ಪರಿವಾರದಲ್ಲಿ ಸಮಾಧಾನಕರ ವಾತಾವರಣ,ಪರಿಸ್ಥಿತಿಯಲ್ಲಿ ತುಸು ಚೇತರಿಕೆ,ಇದ್ದರೂ ಸಣ್ಣ ಪುಟ್ಟ ತಪ್ಪು ತಿಳುವಳಿಕೆಗಳು ತಲೆ ದೋರಬಹುದು.

 

ಮಿಥುನ (Mithuna)

ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವದಿಂದ ಇಡೀ ವಾರದ ಮೇಲೆ ಪರಿಣಾಮ ಬೀರುವುದು.ಸಾಮಾಜಿಕವಾಗಿ ಸ್ಥಾನ ಮಾನ ಗೌರವ ಹೆಚ್ಚುವುದು.ಆರ್ಥಿಕ ವಿಚಾರದಲ್ಲಿ ಆಗಾಗ ಧನವ್ಯಯ ತೋರಿಬಂದರೂ ವಿವಿಧ ಮೂಲಗಳಿಂದ ಧನಾಗಮನವಿರುತ್ತದೆ .ಬದಲಾವಣೆಯನ್ನು ನೀವು ಅಪೇಕ್ಷಿಸುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ.ದೈವಾನುಗ್ರಹದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ.ಕಾರ್ಯ ಕ್ಷೇತ್ರದಲ್ಲಿ  ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿಕೊಳ್ಳಲು ಯಶಸ್ಸು ನಿಮ್ಮದಾಗಲಿದೆ.

 

ಕರ್ಕ (Karka)

ಗುರುಬಲದ ಜೊತೆಗೆ ದೈವಾನುಗ್ರಹ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ದೃಢನಿರ್ಧಾರದಿಂದ ಮುಂದುವರಿಯಿರಿ.ಪ್ರಯತ್ನ ಬಲಕ್ಕೆ ತಕ್ಕುದಾದ ಪ್ರತಿಫಲ ದೊರಕಲಿದೆ.ಸಾಮಾಜಿಕವಾಗಿ ಮುಂದಾಳತ್ವ, ಸ್ಥಾನಮಾನ,ಗೌರವವನ್ನು ಸಂಪಾದಿಸಲಿದ್ದೀರಿ.ಕೆಲವೊಮ್ಮೆ ಕುಟುಂಬದಲ್ಲಿ ಅನಾರೋಗ್ಯದ ಸಂಭವ ಹೆಚ್ಚು ಇರುವುದರಿಂದ ಆದಷ್ಟು ಕಾಳಜಿಯ ಅಗತ್ಯವಿದೆ.ದೂರ ಪ್ರಯಾಣ ಸಾಧ್ಯತೆ ಇದ್ದು ಕಾರ್ಯದಲ್ಲಿ ಅನುಕೂಲ,ವೃತ್ತಿ ರಂಗದಲ್ಲಿ ಆತುರ ಒಳ್ಳೆಯದಲ್ಲ.

ಸಿಂಹ (Simha)

ದೈವಾನುಗ್ರಹದಿಂದ ಕಾರ್ಯ ಕ್ಷೇತ್ರದಲ್ಲಿ ಹಲವಾರು ತರಹದ ಕೆಲಸ ಕಾರ್ಯಗಳು ನಿಮ್ಮ ಪಾಲಿಗೆ ಬಂದು ನೀವು ಅವುಗಳಿಂದ ಉಲ್ಲಾಸಿತರಾಗುತ್ತೀರಿ.ಹಾಗೆ ಆರ್ಥಿಕವಾಗಿ ಅದೃಷ್ಟವು ನಿಮ್ಮ ಪಾಲಿಗಿದ್ದು ಸದ್ಯದಲ್ಲೇ ಇದರ ಸದುಪಯೋಗವು ನಿಮ್ಮನ್ನು ಸಂತೃಪ್ತಿಗೊಳಿಸಲಿದೆ.ವ್ಯಾಪಾರ, ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು,ಹೊಸ ಉದ್ಯಮಿಗಳಿಗೆ ಅವಕಾಶಗಳು ತೋರಿಬರುತ್ತವೆ. ತಿಂಗಳ ಮಧ್ಯ ಭಾಗದಲ್ಲಿ ಕೌಟುಂಬಿಕ ವಾಗಿ ಹಠಾತ್ ಏರಿಳಿತಗಳಿಂದ ಅಸಮಾಧಾನವಾಗಲಿದೆ.ಮನೆಯಲ್ಲಿ ಮಂಗಳ ಕಾರ್ಯಗಳಿಂದ  ಚಟುವಟಿಕೆ ಕಂಡುಬರುತ್ತದೆ.

 

ಕನ್ಯಾರಾಶಿ (Kanya)

ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವದಿಂದ ಇಡೀ ವಾರದ ಮೇಲೆ ಪರಿಣಾಮ ಬೀರುವುದು.ಸಾಮಾಜಿಕವಾಗಿ ಸ್ಥಾನ ಮಾನ ಗೌರವ ಹೆಚ್ಚುವುದು.ಆರ್ಥಿಕ ವಿಚಾರದಲ್ಲಿ ಆಗಾಗ ಧನವ್ಯಯ ತೋರಿಬಂದರೂ ವಿವಿಧ ಮೂಲಗಳಿಂದ ಧನಾಗಮನವಿರುತ್ತದೆ .ಬದಲಾವಣೆಯನ್ನು ನೀವು ಅಪೇಕ್ಷಿಸುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ.ದೈವಾನುಗ್ರಹದಿಂದ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ.ಕಾರ್ಯ ಕ್ಷೇತ್ರದಲ್ಲಿ  ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿಕೊಳ್ಳಲು ಯಶಸ್ಸು ನಿಮ್ಮದಾಗಲಿದೆ.

 

ತುಲಾ (Tula)

ನಿಮ್ಮ ಅಹಂಗೆ ಪೆಟ್ಟು ಬಿದ್ದಾಗ ಕೆರಳದಿರಿ. ಮನದೊಳಗಿನ ಕೆಚ್ಚು ಬಿಟ್ಟು ಸ್ನೇಹ ಹಸ್ತಕ್ಕೆ ಕೈ ಚಾಚಿರಿ. ಅನಿರೀಕ್ಷಿತ ಬೆಂಬಲ ದೊರಕಲಿದೆ. ಆರ್ಥಿಕ ಸ್ಥಿತಿಯು ವ್ಯವಹಾರಸ್ಥರಿಗೆ ಹೆಚ್ಚಿನ ಆತಂಕ ತಾರದು. ನಿಮ್ಮ ಚಿಂತನೆ ಹಾಗೇ ದೈವದ ವಿಧಿಯ ಯೋಚನೆ ಬೇರೆಯದೇ ಆಗಿರುತ್ತದೆ. ಕ್ರೀಡಾಪಟುಗಳಿಗೆ ಅವಮಾನ ಪ್ರಸಂಗ ತಂದೀತು. ಅವರ ಯೋಚನೆ, ವರ್ತನೆ ಅವರಿಗೇ ನಾಚಿಕೆಯಾಗುವಂತೆ ಮಾಡಿರಿ.

 

ವೃಶ್ಚಿಕ (Vrushchika)

ಯೋಗ್ಯ ವಧು-ವರರಿಗೆ ನಿಶ್ಚಿತಾರ್ಥವಾಗುವ ಸಿಹಿಸುದ್ದಿ ಇದೆ.ಅಪ್ರತ್ಯಕ್ಷವಾದ ಲಾಭ ಸಾಧ್ಯವಾಗುವ ಹಾಗೆ ಶನೈಶ್ವರನ ಅಭಯವಿದೆ. ಉತ್ತಮವಾದ ಆರೋಗ್ಯಕ್ಕೆ ಪಡೆಯಲು ಅವಕಾಶ ಹೇರಳವಾಗಿದೆ. ಮತ್ಸೋದ್ಯ ಮಿಗಳಿಗೆ, ಕೋರ್ಟು ವ್ಯಾಜ್ಯ ಇರುವವರಿಗೆ ತುಸು ಚೇತರಿಕೆ ಹರುಷ ತಂದೀತು.ವಿಶೇಷವಾಗಿ ಪತ್ನಿಯೊಂದಿಗೆ ಸಹಮತವಿರಲಿ.

 

ಧನು ರಾಶಿ (Dhanu)

ವೃತ್ತಿರಂಗದಲ್ಲಿ ಯಾರಲ್ಲೂ ನಿಷ್ಠುರ ಕಟ್ಟಿಕೊಳ್ಳದಿರಿ. ಸತ್ಯ ಮರೆಯದಿರಿ.,ಕಬ್ಬಿಣ ವ್ಯಾಪಾರ ಇತ್ಯಾದಿಗಳಿಂದ ಧನ ಸಂಗ್ರಹವಾಗಲಿದೆ. ಹಿರಿಯರ ಹಳೆಯ ಕಾಲದ ಸಂಘರ್ಷದಿಂದ ನಿಮ್ಮ ಮನಸ್ಸು ಘಾಸಿಗೊಳ್ಳಲಿದೆ. ಮಕ್ಕಳಿಂದ ಹಿತವಿದೆ, ಆರೋಗ್ಯದಲ್ಲಿ ಏರುಪೇರು. ಅನಾವಶ್ಯಕ ವ್ಯವಹಾರಕ್ಕೆ ತಲೆ ಹಾಕದಿರುವುದು ಉತ್ತಮ. ಬಂಧುಗಳ ಆಗಮನದಿಂದ ಸಂತಸ.

 

ಮಕರ (Makara)

ಧನಾಗಮನ ಉಂಟಾದೀತು. ಆರ್ಥಿಕವಾಗಿ ಭಿನ್ನವಾದ ಚೈತನ್ಯ ಉಂಟಾಗಲಿದೆ. ನಿಮ್ಮ ಯೋಚನಾ ಕ್ರಮವೇ ಪರಿವರ್ತನೆಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಿಗೆ ಸತತ ಓದು, ಅಭ್ಯಾಸಬಲ ಸಾಧ್ಯವಾದಲ್ಲಿ ಗೆಲುವಿದೆ. ನೀವು ಸರಕಾರಿ ನೌಕರರಾಗಿದ್ದಲ್ಲಿ ಕೆಲವು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ, ವಿಶೇಷವಾಗಿ ಜೀವನದ ಹಲವಾರು ಕನಸುಗಳನ್ನು ಈಡೇರಿಸಿಕೊಳ್ಳಲು ಇದು ಸೂಕ್ತ ಕಾಲ.

 

ಕುಂಭರಾಶಿ (Kumbha)

ಆರೋಗ್ಯದ ಬಗ್ಗೆ ಉದಾಸೀನತೆ ತೋರದಿರಿ. ಆರ್ಥಿಕ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ಉದಾಸೀನತೆ ತೋರದಿರಿ, ಮಿತ್ರ ವ್ಯವಹಾರಗಳಲ್ಲಿ ಜಾಗ್ರತೆ ಅವಶ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಸಫಲತೆ. ಯಾರಿಗೂ ಸಾಲ ನೀಡದಿರಿ, ಗುರುವಿನ ಅನುಗ್ರಹದಿಂದ ಓದುವ ಮಕ್ಕಳಿಗೆ ಉತ್ತಮ ಫ‌ಲಿತಾಂಶ ಒದಗಿ ಬರುತ್ತದೆ.

 

ಮೀನರಾಶಿ (Meena)

ಹಿರಿಯರ ಸಲಹೆ, ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದಿಂದ ಗಂಡಾಂತರ. ಹಿತ ಶತ್ರುಗಳಿಂದ ಸಮಸ್ಯೆ ಎದುರಿಸಬೇಕಾದೀತು. ಲವಲವಿಕೆ, ಉತ್ಸಾಹಗಳಿಗೆ ಹೆಚ್ಚಿನ ಆತ್ಮವಿಶ್ವಾಸ ಪೂರಕವಾಗಲಿದೆ.ವ್ಯಾಪಾರಿ ವರ್ಗ, ವ್ಯವಹಾರಸ್ಥರಿಗೆ ಹೂಡಿಕೆ ಹಾಗೂ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಕಾಲ, ಗುರುಹಿರಿಯರ, ತಂದೆತಾಯಂದಿರ ಸಹಕಾರ ನಿಮಗಿರುತ್ತದೆ. ಅನಿರೀಕ್ಷಿತ ಸಿಹಿಸುದ್ದಿ ನಿಮಗಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top