fbpx
ಸಮಾಚಾರ

ದೀಪಾವಳಿಗೆ ಪಟಾಕಿ ನಿಷೇಧಿಸಿದ ಸುಪ್ರೀಂ ಕೋರ್ಟ್,, ಕೇವಲ ಹಿಂದೂ ಹಬ್ಬ-ಆಚರಣೆಗಳ ಮೇಲೆ ಮಾತ್ರ ನಿಷೇಧ ಏಕೆ…?

ದೀಪಾವಳಿಗೆ ಪಟಾಕಿ ನಿಷೇಧಿಸಿದ ಸುಪ್ರೀಂ ಕೋರ್ಟ್,, ಕೇವಲ ಹಿಂದೂ ಹಬ್ಬ-ಆಚರಣೆಗಳ ಮೇಲೆ ಮಾತ್ರ ನಿಷೇಧ ಏಕೆ…?

 

 

ದೀಪಾವಳಿಗೆ ಕೆಲವು ದಿನಗಳು ಇರುವಾಗಲೇ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಹೌದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡುವುದು ಮತ್ತು ಸಿಡಿಸುವುದರ ಮೇಲೆ ಸುಪ್ರೀಂ ಕೋರ್ಟ್‌ ನಿಷೇಧ ಹೇರಿದೆ..ದೆಹಲಿಯಲ್ಲಿ ಪಟಾಕಿಗಳ ಮಾರಾಟ ಮತ್ತು ದಾಸ್ತಾನನ್ನು 2017 ನವೆಂಬರ್‌ 1ರ ವರೆಗೆ ನಿಷೇಧಿಸಲಾಗಿದೆ.. ಮುಂದೆ ಓದಿ.

 

 

ಈಗಾಗಲೇ ದೆಹಲಿಯಲ್ಲಿ ವಾಯುಮಾಲಿನ್ಯವು ಮಿತಿ ಮೀರಿರುವುದರಿಂದ ವಾಯು ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶವನ್ನಿಟ್ಟುಕೊಂಡು ಮುಂದಿನ ನವೆಂಬರ್ 1ರವರೆಗೆ ಪಟಾಕಿ ಸಿಡಿಸುವುದಕ್ಕೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಹೆಚ್ಚಾಗುವುದರಿಂದ ದೆಹಲಿಯಲ್ಲಿ ವಾಯುಮಾಲೀನ್ಯ ಜಾಸ್ತಿಯಾಗುವ ಸಾಧ್ಯತೆ ಇದೆ ಹಾಗಾಗಿ ಸುಪ್ರೀಂ ಕೋರ್ಟ್ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ…

 

 

ಪಟಾಕಿ ನಿಷೇದಿಸಿರುವುದಕ್ಕೆ ಲೇಖಕ ಚೇತನ್‌ ಭಗತ್‌ ಅಸಮಾಧಾನ ವ್ಯಕ್ತಪಡಿಸಿದ್ದು “ಮಕ್ಕಳಿಗೆ ದೀಪಾವಳಿ ಹಬ್ಬ ಎಂದರೇನೇ ಪಟಾಕಿ-ಸಿಡಿಮದ್ದುಗಳನ್ನ ಸಿಡಿಸುವ ಸಂಭ್ರಮವಾಗಿರುತ್ತದೆ! ಆದರೆ ದೀಪಾವಳಿಗೆ ಪಟಾಕಿನೇ ಇಲ್ಲ ಎಂದ ಮೇಲೆ ಅದು ಹೇಗೆ ದೀಪಾವಳಿ ಹಬ್ಬವಾಗುತ್ತದೆ” ಎಂದು ಟ್ವೀಟ್ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

 

 

“ಯಾವಾಗಲೂ ಏಕೆ ಹಿಂದೂ ಹಬ್ಬಗಳ ಮೇಲೆ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ,,ದೀಪಾವಳಿ ಹಬ್ಬಕ್ಕೆ ಪಟಾಕಿಯನ್ನು ನಿಷೇಸಿರುವ ಸುಪ್ರೀಂ ಕೋರ್ಟ್ ಬಕ್ರೀದ್‌ ಹಬ್ಬಕ್ಕೆ ಕುರಿ ಕಡಿಯುವುದನ್ನು ನಿಷೇಧ ಮಾಡುತ್ತದೆಯೇ? ಕ್ರಿಸ್‌ ಮಸ್‌ ಸಮಯದಲ್ಲಿ ಕ್ರಿಸ್‌ಮಸ್ ಟ್ರೀ ಮಾರಾಟ ಮಾಡುವುದನ್ನು ನಿಷೇಧ ಮಾಡುತ್ತದೆಯೇ?” ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top