fbpx
ದೇವರು

ಕಾರ್ತಿಕ ಮಾಸದಲ್ಲಿ ಈ 7 ಕೆಲಸ ಮಾಡಿದ್ರೆ ಸಾಲದ ಸುಳಿಯಿಂದ ಹೊರಗೆ ಬರಬಹುದು ಅಷ್ಟೇ ಅಲ್ಲದೆ ಧನಲಾಭವಾಗುತ್ತೆ

ಕಾರ್ತಿಕ ಮಾಸದಲ್ಲಿ ಅವಶ್ಯವಾಗಿ ಈ ಏಳು ಕೆಲಸಗಳನ್ನು ಮಾಡಿ ಲಕ್ಷ್ಮೀಯ ಕೃಪೆಯನ್ನು ಪಡೆಯಿರಿ.

ಹಿಂದೂ ಧರ್ಮದಲ್ಲಿ ವ್ರತ ಮತ್ತು ಜಪ ತಪ ಗಳಿಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗಿದೆ.ವ್ರತ ದೇವರ ಪೂಜೆ ಜಪ ತಪ ಮಾಡುವುದರಿಂದ ಎಲ್ಲ ಪಾಪ ಕರ್ಮಗಳಿಂದ ಮುಕ್ತಿ ದೊರೆಯುವುದು.ಇದರ ಜೊತೆಗೆ ಈಶ್ವರನ ಕೃಪೆ ಕೂಡ ಪ್ರಾಪ್ತಿಯಾಗುವುದು. ಧರ್ಮ ಶಾಸ್ತ್ರಗಳ ಅನುಸಾರ ಯಾವ ಮನುಷ್ಯ ಅಥವಾ ವ್ಯಕ್ತಿ ಕಾರ್ತಿಕ ಮಾಸದಲ್ಲಿ ವ್ರತ ಅಥವಾ  ದೇವರ ಪೂಜೆ ,ಜಪ, ತಪಗಳನ್ನು ಮಾಡುತ್ತಾನೋ ಅವರಿಗೆ ಮೋಕ್ಷ ಪ್ರಾಪ್ತಿಯಾಗುವುದು.

 

 

ಧರ್ಮಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ

ಕಾರ್ತಿಕ ಮಾಸದಂತಹ ಮಾಸ ಮತ್ತೊಂದಿಲ್ಲ,

ವೇದಕ್ಕೆ ಸಮಾನವಾದ ಶಾಸ್ತ್ರ ಮತ್ತೊಂದಿಲ್ಲ ,

ಸತ್ಯ ಯುಗಕ್ಕೆ ಸಮಾನವಾದ   ಯುಗವಿಲ್ಲ,

ಗಂಗಾ ಮಾತೆಯ ಪವಿತ್ರವಾದ ತೀರ್ಥಕ್ಕೆ ಸಮನಾದ  ತೀರ್ಥ ಮತ್ತೊಂದಿಲ್ಲ.

 

 

ಕಾರ್ತಿಕ ಮಾಸದಲ್ಲಿ ಕೆಲವು ನಿಯಮಗಳು ಪ್ರಧಾನವೆಂದು ಹೇಳಲಾಗಿದೆ. ಕಾರ್ತಿಕ ಮಾಸದ ಕೆಲವು ನಿಯಮಗಳು ಇವೆ ಇವನ್ನು ಪಾಲಿಸುವುದರಿಂದ ನಿಮಗೆ ಶುಭ ಫಲಗಳು ಪ್ರಾಪ್ತಿಯಾಗುತ್ತವೆ. ನಿಮ್ಮ ಪ್ರತಿಯೊಂದು ಆಸೆಗಳು ಈಡೇರುತ್ತವೆ.

ಕಾರ್ತಿಕ ಮಾಸದ ನಿಯಮಗಳು ಈ ರೀತಿಯಾಗಿವೆ.

ತುಳಸಿ ಪೂಜೆ ಈ ಮಾಸವು ತುಳಸಿ ಪೂಜೆ ಮಾಡುವುದರಿಂದ ಜೊತೆಗೆ ಸೇವನೆ ಮಾಡುವುದರಿಂದ ವಿಶೇಷ ಮಹತ್ವವೂ ಇದೆ ಎಂದು ಹೇಳಲಾಗಿದೆ. ಹಾಗೆ ಪ್ರತಿ ಮಾಸವೂ ತುಳಸಿಯ ಸೇವೆ ಹಾಗೂ ಪೂಜೆಯನ್ನು ಮಾಡಿ ಆರಾಧಿಸುವುದರಿಂದ ಪೂಜಿಸುವುದರಿಂದ ಅದು ಶ್ರೇಯಸ್ಕರ ವೆಂದು ಭಾವಿಸಲಾಗಿದೆ. ಅದರೆ ಕಾರ್ತಿಕ ಮಾಸದಲ್ಲಿ ಮಾಡುವ ತುಳಸಿ ಪೂಜೆಯು ಅತಿ ಹೆಚ್ಚಿನ ಮಹತ್ವವನ್ನು ಪಡೆದಿದೆ

ಭೂಮಿಯ ಮೇಲೆ ಮಲಗುವುದು.

 

 

ಭೂಮಿಯ ಮೇಲೆ ಕಾರ್ತಿಕ ಮಾಸದಲ್ಲಿ ಮಲಗುವುದು ಪ್ರಮುಖವಾದ ಕೆಲಸ ಎಂದು ಹೇಳಲಾಗಿದೆ. ಭೂಮಿಯ ಮೇಲೆ ಮಲಗುವುದರಿಂದ ಮನಸ್ಸಿನಲ್ಲಿ ಸಾತ್ವಿಕತೆಯ ಭಾವನೆ ಬರುವುದು. ಮತ್ತು ಅನ್ಯ ವಿಕಾರತೆಗಳು ಸಹ ಸಮಾಪ್ತಿಯಾಗುತ್ತವೆ.

 ದ್ವಿದಳ ಧಾನ್ಯ ನಿಷೇಧ.

 

 

ಕಾರ್ತಿಕ ಮಾಸದಲ್ಲಿ ದ್ವಿದಳ ಧಾನ್ಯ ಅಂದರೆ ಉದ್ದಿನ ಬೇಳೆ, ಹೆಸರು ಬೇಳೆ, ಕಡ್ಲೆ ಬೇಳೆ, ಬಟಾಣಿ ಇನ್ನೂ ಅನೇಕ ರೀತಿಯ ಧಾನ್ಯಗಳನ್ನು ನಿಷೇಧಿಸಲಾಗಿದೆ ಅಥವಾ ಸೇವಿಸಬಾರದು ಎಂದು ಹೇಳಲಾಗಿದೆ.

 ಒಂದು ದಿನ ಮಾತ್ರ ಎಣ್ಣೆ ಹಚ್ಚುವುದು.

 

 

ಕಾರ್ತಿಕ ಮಾಸದಲ್ಲಿ ಕೇವಲ ಒಂದು ಬಾರಿ  ಅದು ನರಕ ಚತುರ್ದಶಿಯ ದಿನ (ಕಾರ್ತಿಕ ಕೃಷ್ಣ ಚತುರ್ದಶಿ) ಈ ದಿನ ಶರೀರದ ಮೇಲೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಕಾರ್ತಿಕ ಮಾಸದಲ್ಲಿ ಅನ್ಯ ದಿನಗಳಲ್ಲಿ ಎಣ್ಣೆಯನ್ನು ಹಚ್ಚಿಕೊಳ್ಳಬಾರದು.

 ದೀಪದಾನ.

 

 

ಕಾರ್ತಿಕ ಮಾಸದಲ್ಲಿ ಧರ್ಮದ ಅನುಸಾರ ಕಾರ್ತಿಕ ಮಾಸದ ಪ್ರಮುಖವಾದ ಕೆಲಸವೆಂದರೆ ದೀಪದಾನ ಮಾಡುವುದು ಎಂದು ಹೇಳಲಾಗಿದೆ.ಈ ತಿಂಗಳಲ್ಲಿ ನದಿ ಕೆರೆ ಬಾವಿಗಳಲ್ಲಿ ಸಮುದ್ರಗಳಲ್ಲಿ ದೀಪದಾನ ಮಾಡಬೇಕು ಇದನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವುದು.

ಬ್ರಹ್ಮಚರ್ಯ ಪಾಲನೆ.

 

 

ಕಾರ್ತಿಕ ಮಾಸದಲ್ಲಿ ಬ್ರಹ್ಮಚರ್ಯ ಪಾಲನೆ ಮಾಡುವುದು ಅತೀ ಅವಶ್ಯಕವಾಗಿದೆ ಎಂದು ಹೇಳಲಾಗಿದೆ. ಬ್ರಹ್ಮಚರ್ಯ ಪಾಲನೆ ಮಾಡಿಲ್ಲವೆಂದರೆ ಪತಿ ಅಥವಾ ಪತ್ನಿಗೆ ದೋಷ ಪ್ರಾಪ್ತಿಯಾಗುವುದು. ಇದರಿಂದ ಅಶುಭ ಫಲವೂ ಪ್ರಾಪ್ತಿಯಾಗುವುದು ಎಂದು ಹೇಳಲಾಗಿದೆ.

ಸಂಯಮದಿಂದರಿ.

 

 

ಕಾರ್ತಿಕ  ಮಾಸದ  ವ್ರತ ಮಾಡುವವರು ತಪಸ್ವಿಗಳಂತೆ ಸಮಾನ ರೀತಿಯಲ್ಲಿ ವ್ಯವಹಾರ ಮಾಡಬೇಕು. ಅಂದರೆ ಕಡಿಮೆ ಮಾತನಾಡಬೇಕು ಯಾರ ಮನಸ್ಸನ್ನು ನೋಯಿಸಬಾರದು ಅಥವಾ ಜಗಳವಾಡಬಾರದು ಮನಸ್ಸಿನಲ್ಲಿ ತಾಳ್ಮೆ ಇರಲಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top