ದೇವರು

ಈ ಲಕ್ಷ್ಮೀ ಮಂತ್ರವನ್ನು ಬರೆದು ಈ ತರ ಪೂಜೆ ಮಾಡಿದ್ರೆ ಯಶಸ್ಸು ಸಿಗುತ್ತೆ ಅಷ್ಟೇ ಅಲ್ಲ ಹಣ ಕಾಸಿನ ಸಮಸ್ಯೆ ದೂರ ಆಗುತ್ತೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈ ಲಕ್ಷ್ಮೀ ಮಂತ್ರವನ್ನು ಬರೆದು ಪೂಜೆ ಮಾಡಿದರೆ ಯಶಸ್ಸು ಸಿಗುವುದು .

ನಮ್ಮ ಹಿಂದೂ ಧರ್ಮವು ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳಿಂದ ಪ್ರಭಾವಿತ ವಾಗಿರುತ್ತದೆ.ವಾಸ್ತು ದೋಷ, ಜಾತಕದಲ್ಲಿ ದೋಷವಿದ್ದರೆ, ನಾವು ಅಂದುಕೊಂಡ ಕೆಲಸ ಆಗದೇ ಇರುವುದು , ಅನಾರೋಗ್ಯ ಸಮಸ್ಯೆ ಧನವೃದ್ಧಿ ಕಡಿಮೆಯಾಗುವುದು.ಮನೆಯಲ್ಲಿ ಅಶಾಂತಿ ಇರುವುದು ಇಂತಹ ಸಮಸ್ಯೆಗಳು ಬರುತ್ತಾ ಇರುತ್ತವೆ. ಈ ದೋಷದ ಪ್ರಭಾವಗಳನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಕೊಂಡು ಧನಪ್ರಾಪ್ತಿ ಸಿಗಬೇಕೆಂದರೆ ಏನು ಮಾಡಬೇಕು ಎಂದು ಈಗ ನಾವು ತಿಳಿಯೋಣ ….

 

 

ಮೊದಲಿಗೆ 5 ಕಾಗದಗಳನ್ನು ತೆಗೆದುಕೊಳ್ಳಬೇಕು. ನಂತರ ಅದರಲ್ಲಿ ಈ ಮಂತ್ರವನ್ನು ನೂರಾ ಎಂಟು ಬಾರಿ ಬರೆಯಬೇಕು .ಆ ಮಂತ್ರ ಹೀಗಿದೆ “ಓಂ ಶ್ರೀ ಮಹಾಲಕ್ಷ್ಮೀ ನಮಃ” ಎಂಬ ಈ ಮಂತ್ರವನ್ನು ನೂರಾ ಎಂಟು ಬಾರಿ ಐದು ಕಾಗದದಲ್ಲೂ ಬರೆಯಬೇಕು .

ಈ ಮಂತ್ರವನ್ನು ಸೋಮವಾರ,ಗುರುವಾರ ಮತ್ತು ಶುಕ್ರವಾರದ ದಿನಗಳಲ್ಲಿ ಮಾತ್ರ ಬರೆಯಬೇಕು ಮೊದಲು ಸ್ನಾನ ಮಾಡಿ ಪೂಜಾ ಕೋಣೆಯಲ್ಲಿ ಮೊದಲು ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿ. ನಂತರ ಈ ಮಂತ್ರವನ್ನು ನೂರಾ ಎಂಟು ಬಾರಿ ಐದು ಕಾಗದಗಳಲ್ಲಿ ಬರೆಯಲು ಪ್ರಾರಂಭಿಸಿ.

 

 

ನಂತರ ಈ 5 ಕಾಗದಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಸ್ವಲ್ಪ ಅದರ ಮೇಲೆ ಸ್ವಲ್ಪ  ಅಕ್ಷತೆ , ಅರಿಶಿನ, ಕುಂಕುಮವನ್ನು  ಈ ಐದು ಕಾಗದದ ಮೇಲೆ ಇಟ್ಟು ಮಡಚಿ ಇಡಬೇಕು.

ಒಂದು ಕಾಗದವನ್ನು ದೇವರ ಮನೆಯಲ್ಲಿ ಇಡಬೇಕು.

ಎರಡನೆಯ ಕಾಗದವನ್ನು ನಗದು ಅಂದರೆ ಹಣ ಇಡುವ ಸ್ಥಳದಲ್ಲಿ ಇಡಬೇಕು.

ಮೂರನೆಯ ಕಾಗದವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.

 

 

ನಾಲ್ಕನೆಯ ಕಾಗದವನ್ನು ವ್ಯಾಪಾರದಲ್ಲಿ ಅಥವಾ ಉದ್ಯೋಗ ಮಾಡುವ ಸ್ಥಳದಲ್ಲಿ ಇಡಬೇಕು.

ಐದನೆಯ ಕಾಗದವನ್ನು ಮನೆಯಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಇಡಬೇಕು.

ಹೀಗೆ ಮಾಡುವುದರಿಂದ ನಾವು ಅಂದುಕೊಂಡ ಕೆಲಸ ಸರಾಗವಾಗಿ ನೆರವೇರುವುದು. ಕೆಲಸದಲ್ಲಿ ದಿಗ್ವಿಜಯ ಆಗುವುದು.  ಜೀವನದಲ್ಲಿ ಸಂತೋಷ ಸುಖವನ್ನು ಕಾಣಬಹುದು.ಆರ್ಥಿಕ ಸಮಸ್ಯೆಗಳಿದ್ದರೆ ಅವು ದೂರವಾಗುತ್ತವೆ. ಶತ್ರುಗಳು ಮಿತ್ರರಾಗುವರು. ವಾಸ್ತು ದೋಷಗಳು ಸಹ ದೂರವಾಗುತ್ತವೆ.

 

 

ಆದ್ದರಿಂದ ಈ ಚಿಕ್ಕ ಕೆಲಸವನ್ನು   ನಾವು ಭಕ್ತಿ ಶ್ರದ್ಧೆಯಿಂದ ನಂಬಿಕೆಯಿಂದ ಮಾಡಿದರೆ ಎಲ್ಲ ಒಳ್ಳೆಯದೇ ಆಗುತ್ತದೆ ಲಕ್ಷ್ಮಿಯ ಕೃಪಾಕಟಾಕ್ಷ ಸದಾ ನಮ್ಮ ಮೇಲೆ ಇರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top