fbpx
ಭವಿಷ್ಯ

ಅಕ್ಟೋಬರ್ 10: ನಿತ್ಯಭವಿಷ್ಯ ಮತ್ತು ಪಂಚಾಂಗ.

ಮಂಗಳವಾರ, ೧೦ ಅಕ್ಟೋಬರ್ ೨೦೧೭
ಸೂರ್ಯೋದಯ : ೦೬:೧೨
ಸೂರ್ಯಾಸ್ತ : ೧೮:೦೦
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಶ್ವಯುಜ
ಪಕ್ಷ : ಕೃಷ್ಣ ಪಕ್ಷ
ತಿಥಿ : ಪಂಚಮೀ
ನಕ್ಷತ್ರ : ರೋಹಿಣಿ
ಯೋಗ : ವ್ಯತೀಪಾತ
ಅಮೃತಕಾಲ : ೦೯:೧೨ – ೧೦:೪೧

ರಾಹು ಕಾಲ: ೧೫:೦೩ – ೧೬:೩೧
ಗುಳಿಕ ಕಾಲ: ೧೨:೦೬ – ೧೩:೩೪
ಯಮಗಂಡ: ೦೯:೦೯ – ೧೦:೩೮

ಮೇಷ (Mesha)

ಮಾತು ಕೊಡುವುದನ್ನು ನಿಯಂತ್ರಿಸಿ. ಈಗಾಗಲೇ ಇರುವ ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಿ.

ವೃಷಭ (Vrushabh)


ದಣಿವು ಹಾಗೂ ನಿರ್ಜಲೀಕರಣಗಳಿಂದ ದೇಹ ಬಳಲಬಹುದು. ಒಂದು ದಿನದ ಮಟ್ಟಿಗೆ ವಿಶ್ರಾಂತಿ ಕಡ್ಡಾಯ.

ಮಿಥುನ (Mithuna)


ಸಾಲ ಕೊಡಲು ಬರುವ ಮಂದಿಯನ್ನು, ಕೇಳಲು ಬರುವ ಮಂದಿಯನ್ನು ನೀವಿಂದು ನಿರ್ಲಕ್ಷಿಸಲೇಬೇಕು.

ಕರ್ಕ (Karka)


ಮಕ್ಕಳು ಒಳಿತುಗಳನ್ನು ಸಂಪಾದಿಸಿ ಕೊಡುತ್ತಾರೆ. ನೀವು ಕೂಡ ಅವರನ್ನು ಉತ್ಸಾಹದಿಂದ ಹುರುಪುಗೊಳಿಸಿದರೆ ಉತ್ತಮ.

ಸಿಂಹ (Simha)


ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಿಗಳ ಉದ್ಯೋಗದ ಸಮಸ್ಯೆ ಕಂಡು ಬರಲಿದೆ. ನಿಮ್ಮ ತಾಳ್ಮೆಗೆ ಇದು ಸಕಾಲ ವೆನಿಸಲಿದೆ. ಹಲವು ಸಂದರ್ಭಗಳಲ್ಲಿ ತಾಳ್ಮೆಯೇ ಉತ್ತರ ನೀಡಲಿದೆ. ಆಗಾಗ ಅನಾರೋಗ್ಯ ಬಾಧಿಸೀತು.

ಕನ್ಯಾರಾಶಿ (Kanya)


ಕೆಲಸಕಾರ್ಯಗಳಲ್ಲಿ ವಿಘ್ನ ಭಯ ಕಂಡು ಬಂದರೂ ಯಶಸ್ಸು ತೋರಿ ಬರಲಿದೆ. ಸಿಟ್ಟಿನ ನಿರ್ಣಯಗಳಿಂದ ಅನಾವಶ್ಯಕ ತೊಂದರೆ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಇದೆ.

ತುಲಾ (Tula)


ಏಕಾದಶದ ರಾಹುವಿನಿಂದಾಗಿ ಹಾಗೂ ಶನಿಯ ಲಾಭಸ್ಥಾನದಿಂದಾಗಿ ಉನ್ನತಿ ತೋರಿ ಬರಲಿದೆ. ಗುರುವಿನ ವ್ಯಯಸ್ಥಿತಿ ಅನೇಕ ರೀತಿಯ ಖರ್ಚುವೆಚ್ಚಗಳ ಹಾದಿ ತೋರಿಸಿಯಾನು. ಉದ್ಯೋಗಿಗಳಿಗೆ ವೇತನ ಹೆಚ್ಚಳ ತರಲಿದೆ.

ವೃಶ್ಚಿಕ (Vrushchika)


ಮಹಿಳೆಯರಿಗೆ ಉದ್ಯೋಗ ಲಾಭ ವಿರುತ್ತದೆ. ಕೃಷಿಕ ವರ್ಗದವರಿಗೆ ಆದಾಯ ವರ್ಧಿಸಲಿದೆ. ಸಂಧಿ ನೋವು ಮೂಳೆ ಮುರಿತ, ಅವಘಡಗಳಿಗೆ ಕಾರಣವಾದೀತು. ಅಲಸ್ಯ, ಉದಾಸೀನತೆ ವಿದ್ಯಾರ್ಥಿಗಳಿಗೆ ಅವಮಾನ ಪ್ರಸಂಗವಿದೆ.

ಧನು ರಾಶಿ (Dhanu)


ನಿರೀಕ್ಷಿತ ಕೆಲಸಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆಯಲಿವೆ. ದೇವತಾನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಮುಖ್ಯವಾಗಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೋಪ ತಾಪಕ್ಕೆ ಬಲಿಯಾಗದೆ ಸಮಾಧಾನದಿಂದ ವರ್ತಿಸಿರಿ.

ಮಕರ (Makara)


ಅರ್ಧಕ್ಕೆ ನಿಂತ ಕೆಲಸಕಾರ್ಯಗಳು ಚಾಲನೆಗೆ ಬರಲಿವೆ. ಆರ್ಥಿಕವಾಗಿ ಬರಬೇಕಾದ ಹಣವು ಬರುವುದು. ಅಡೆತಡೆಗಳಿದ್ದರೂ ನಿಮ್ಮ ಕೆಲಸಕಾರ್ಯಗಳು ಪರಿಪೂರ್ಣವಾಗಲಿವೆ. ದೃಢ ನಿರ್ಧಾರದಿಂದ ಮುನ್ನುಗ್ಗಿರಿ.

ಕುಂಭರಾಶಿ (Kumbha)


ಸದ್ಯದಲ್ಲೇ ಹಂತ ಹಂತವಾಗಿ, ಸಾಂಸಾರಿಕವಾಗಿರಲಿ, ವೃತ್ತಿ ಕ್ಷೇತ್ರದಲ್ಲಿರಲಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಅದರೂ ದೇಹಾರೋಗ್ಯದ ಬಗ್ಗೆ, ವಾದ, ವಿವಾದಗಳ ಬಗ್ಗೆ ಜಾಗ್ರತೆ ವಹಿಸಿರಿ. ದಿನಾಂತ್ಯ ಶುಭವಿದೆ.

ಮೀನರಾಶಿ (Meena)


ಯೋಗ್ಯ ಸಮಯ ನಿಮ್ಮೆಲ್ಲಾ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದು ಈಗ ಆಗತ್ಯವಿದೆ. ಆರ್ಥಿಕವಾಗಿ ಧನಾಗಮನ ಇದ್ದೇ ಇರುವುದು. ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳುವುದು ಉತ್ತಮ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top