fbpx
ಸಮಾಚಾರ

“ನಾನು ಕಾರಣವಲ್ಲದಿದ್ದರೂ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ” – ಪ್ರಕಾಶ್ ರೈ

“ನಾನು ಕಾರಣವಲ್ಲದಿದ್ದರೂ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ”–ಪ್ರಕಾಶ್ ರೈ.

 

 

ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ಕೊಟ್ಟಿದ್ದ ಬಹುಭಾಷಾ ನಟ ಪ್ರಕಾಶ್ ರೈ ಅವರು ಕ್ಷಮೆ ಕೋರಿದ್ದಾರೆ…ಗೌರಿ ಲಂಕೇಶ್ ಹತ್ಯೆಯನ್ನು ಸಾಮಾಜಿಕ ತಾಣದಲ್ಲಿ ನೀಚವಾಗಿ ಸಂಭ್ರಮಿಸುತ್ತಿರುವವರನ್ನು ಪ್ರಧಾನಿ ಮೋದಿ ಫಾಲೋ ಮಾಡುತ್ತಿದ್ದಾರೆ ಎಂದು ಅಸಮಾಧಾನ ಪ್ರಕಾಶ್ ರೈ ವ್ಯಕ್ತಪಡಿಸಿದ್ದರು.. ಇದರಿಂದ ಕೋಪಗೊಂಡಿರುವ ಮೋದಿ ಹಾಗೂ ಬಿಜೆಪಿ ಬೆಂಬಲಿಗರು ಪ್ರಕಾಶ್ ರೈ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಮುಂದೆ ಓದಿ.

 

 

ಇಂದು ಉಡುಪಿಯಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ರೈ “ನಾನು ಕಾರಣವಾಗಿಲ್ಲದಿದ್ದರೂ ಯಾರಿಗಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿಬಿಡಿ, ನಾನು ಯಾರನ್ನೂ ಅವಹೇಳನ ಮಾಡಿಲ್ಲ,,ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳಿದ್ದಾರೆ.

 

 

ಕೆಲವು ವಿರೋಧಗಳ ನಡುವೆಯೂ ಇಲ್ಲಿ ಅನೇಕರು ಅಪ್ಪಿಕೊಂಡು ಸ್ವಾಗತಿಸಿದ್ದಾರೆ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ನನಗೆ ಬಹಳ ಹೆಮ್ಮೆಯಿದೆ. ಗೋಮಾಂಸ ತಿನ್ನುವವರು ತಿನ್ತಾರೆ, ಅದಕ್ಕೆ ಅಡ್ಡಿ ಮಾಡಬೇಡಿ,ಎಂದು ಕಾರಂತರು ಹೇಳುತ್ತಿದ್ದರು ಆದರೆ ಅವರ ನಿಷ್ಠುರವಾದ ಮಾತುಗಳು ಕೆಲವು ವ್ಯಕ್ತಿಗಳಿಗೆ ಇಷ್ಟವಾಗುತ್ತಿರಲಿಲ್ಲ.. ಮಾತಿಗೆ ಮಾತು ಉತ್ತರವಾಗಬೇಕು, ಆದರೆ ಒಬ್ಬರ ವಾದವನ್ನು ಮುಚ್ಚುಹಾಕಲು ಅವರನ್ನು ಕೊಲೆಮಾಡುವ ನೀಚ ಸಮಾಜ ನಮ್ಮ ಮಧ್ಯೆಯೇ ಸೃಷ್ಟಿಯಾಗಿರುವುದು ವಿಪರ್ಯಾಸ. ಇದು ಬಹಳ ಅಪಾಯಕಾರಿ..

 

 

ಒಬ್ಬರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಕೆಲಸ ಮಾಡಿದರೆ ಅದು ಹತ್ತಿಕ್ಕಲು ಪ್ರಯತ್ನ ಪಡುವವರ ಸೋಲಿನ ಭಾವನೆ,, ನಾನೂ ಕೂಡ ಕಾರಂತಜ್ಜನ ಹಾಗೆ ಒಮ್ಮೆ ಆಡಿದ ಮಾತನ್ನು ಎಂದು ವಾಪಸ್ಸು ತೆಗೆದುಕೊಳ್ಳುವುದಿಲ್ಲ,, ನನ್ನ ಜೀವನ ನೋಡಿದವರಿಗೆ ನಾನೇನು ಅಂತ ಗೊತ್ತು ಎಂದು ಪ್ರಕಾಶ್​ ರೈ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top