fbpx
ಸಮಾಚಾರ

ಅಯೋಧ್ಯೆಯಲ್ಲಿ 100 ಮೀಟರ್‌ ಎತ್ತರದ ರಾಮನ ಬೃಹತ್ ಪ್ರತಿಮೆ ಸ್ಥಾಪನೆ: 330 ಕೋಟಿ ವೆಚ್ಚ.

ಅಯೋಧ್ಯೆಯಲ್ಲಿ 100 ಮೀಟರ್‌ ಎತ್ತರದ ರಾಮನ ಬೃಹತ್ ಪ್ರತಿಮೆ ಸ್ಥಾಪನೆ: 330 ಕೋಟಿ ವೆಚ್ಚ.

 

 

 

 

 

 

ಹಿಂದೂಗಳ ಆರಾಧ್ಯದೈವ ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯ ಸರಯೂ ನದಿಯ ತಡದಲ್ಲಿ 100 ಮೀಟರ್ ಎತ್ತರ ಶ್ರೀರಾಮನ ಬೃಹತ್ ಪ್ರತಿಮೆ ನಿರ್ಮಾಣ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಜಭವನವು ಹೊರಡಿಸಿರುವ ಪ್ರಕಟನೆಯನ್ನು ವರದಿಗಳು ಉಲ್ಲೇಖ ಮಾಡಿವೆ.

 

 

ಶ್ರೀರಾಮನ ಬೃಹತ್ ಪ್ರತಿಮೆ ನಿರ್ಮಾಣ ಮಾಡುವ ಯೋಜನೆಯನ್ನು ಕೈಗೊಂಡಿರುವುದಲ್ಲದೆ ಅಯೋಧ್ಯೆಯಲ್ಲಿ ಈ ವರ್ಷ 1.71 ಲಕ್ಷ ದೀಪಗಳನ್ನು ಬೆಳಗಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ಇನ್ನು ಶ್ರೀರಾಮನ ಪ್ರತಿಮೆ ನಿರ್ಮಾಣ ಯೋಜನೆಯನ್ನು ಉತ್ತರ ಪ್ರದೇಶದ ಸರ್ಕಾರ ಅಂತಿಮಗೊಳಿಸಿದ್ದು, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅನುಮತಿ ಸಿಕ್ಕಿದ ಕೂಡಲೇ ಪ್ರತಿಮೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ..

 

 

 

ಈ ಯೋಜನೆಯ ವೆಚ್ಚ 330 ಕೋಟಿ ರೂಪಾಯಿಯಾಗಲಿದ್ದು, ರಾಜ್ಯದ ಪ್ರಮುಖ ಧಾರ್ಮಿಕ ಪ್ರವಾಸೋದ್ಯಮ ತಾಣ ಆಗಲಿದೆ ಎಂದು ಅವಸ್ತಿ ಹೇಳಿದ್ದಾರೆ… ಇತ್ತೀಚಿಗೆ ಉತ್ತರಪ್ರದೇಶದ ರಾಜ್ಯ ಪ್ರವಾಸೋದ್ಯಮ ಸಚಿವಾಲಯ ತನ್ನ ಪ್ರವಾಸೋದ್ಯಮ ಕೈಪಿಡಿಯಲ್ಲಿ ವಿಶ್ವವಿಖ್ಯಾತ ತಾಜ್ ಮಹಲ್’ನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆಯನ್ನು ಸ್ಫಾಪಿಸುವ ಸರ್ಕಾರದ ನಿರ್ಧಾರ ಹೊಸ ವಿವಾದವನ್ನು ಹುಟ್ಟುಹಾಕುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top