fbpx
ಮನೋರಂಜನೆ

ವೈರಲ್ ಆದ ವಿಡಿಯೋ ಬಗ್ಗೆ “ಬಿಗ್ ಬಾಸ್” ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು..?

ವೈರಲ್ ಆದ ವಿಡಿಯೋ ಬಗ್ಗೆ “ಬಿಗ್ ಬಾಸ್” ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಹೇಳಿದ್ದೇನು..?

 

ಬಿಗ್ ಬಾಸ್ ಕಾರ್ಯಕ್ರಮದ ನಿರ್ದೇಶಕ ಮತ್ತು  ಕಲರ್ಸ್ ಕನ್ನಡ ಚಾನೆಲ್ ನ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಫೇಸಬುಕ್ ನಲ್ಲಿ ಪೋಸ್ಟ್ ವೊಂದನ್ನ ಮಾಡಿದ್ದಾರೆ..ತಾವು ಮಾಡಿರುವ ಪೋಸ್ಟ್ ನಲ್ಲಿ ಇತ್ತೀಚಿಗೆ ವೈರಲ್ ಹಾಗಿದ್ದ ವಿಡಿಯೋ ಬಗ್ಗೆ ಹೇಳಿಕೊಂಡಿದ್ದಾರೆ.. ಅಷ್ಟಕ್ಕೂ ವೈರಲ್ ಆದ ವಿಡಿಯೊ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಹೇಳಿರೋದೇನು..? ಮುಂದೆ ಓದಿ..

 

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಒಂದು ಹೊಸ ರಿಯಾಲಿಟಿ ಶೋ ಮಾಡುತ್ತಿರುವ ವಿಚಾರ ನಿಮ್ಮೆಲರಿಗೂ ಗೊತ್ತಿರುವ ವಿಚಾರ..ಆದರೆ ಪುನೀತ್ ನಡೆಸಿಕೊಡಲಿರುವ “ಹೊಸ ಷೋ ಬಗ್ಗೆ ಬೆಸೆದ ಬಂಧಗಳನ್ನು ಗಟ್ಟಿ ಮಾಡುವ ಹೊಸ ಶೋ” ಎಂಬ ಸಾಲಿನೊಂದಿಗೆ ಮಾಡಿದ್ದ ಪ್ರೊಮೊ ವಿಡಿಯೋ ವನ್ನು ಹೊರತುಪಡಿಸಿ ಕಾರ್ಯಕ್ರಮದ ಬಗ್ಗೆ ಇನ್ಯಾವುದೇ ಗುಟ್ಟು ಬಿಟ್ಟುಕೊಡದೆ ಸಸ್ಪೆನ್ಸ್ ಮಾಡುತ್ತಿರುವ ಕಲರ್ಸ್ ಕನ್ನಡ ತಂಡವು ಕಲಾವಿದರಿಗೂ ಗೊತ್ತಾಗದ ಹಾಗೆ ಎರಡನೇ ಪ್ರೊಮೊ ಶೂಟಿಂಗ್ ಕೂಡ ಮಾಡಲಾಗಿತ್ತು.

 

 

ಇಲ್ಲಿ ಇಂಟರೆಸ್ಟಿಂಗ್ ವಿಷಯವೇನೆಂದರೆ ಕಲಾವಿದರಿಗೂ ಗೊತ್ತಾಗದ ಹಾಗೆ ಶೂಟ್ ಮಾಡಿದ್ದ ಪ್ರೊಮೊವನ್ನು ಫೇಸ್ಬುಕ್ ನಲ್ಲಿ ಕಲರ್ಸ್ ಕನ್ನಡ ಫೇಸ್ ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ತುಂಬಾ ವೈರಲ್ ಆಗಿತ್ತು,,ಆದರೆ ಅಪ್ಲೋಡ್ ಮಾಡಿರುವ ವಿಷಯ ಸ್ವತಃ ಕಲರ್ಸ್ ಕನ್ನಡ ಚಾನೆಲ್ ನ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ತಿಳಿಯದ ಹಾಗೆಯೇ ಅಪ್ಲೋಡ್ ಮಾಡಲಾಗಿದೆಯಂತೆ.ಹಾಗಂತ ಸ್ವತಃ ಪರಮೇಶ್ವರ್ ಗುಂಡ್ಕಲ್ ಅವರೇ ಹೇಳಿಕೊಂಡಿದ್ದಾರೆ..

 

 

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಪರಮ್ “ಕುತೂಹಲಕಾರಿಯಾಗಿ, ಈ ವೀಡಿಯೊವನ್ನೂ ಕೂಡ ಗಮನಕ್ಕೆ ಬಾರದೆ ಅಪ್ಲೋಡ್ ಮಾಡಲ್ಪಟ್ಟಿದೆ. ಆದರೆ ನಾನು ಮೊಕದ್ದಮೆ ಹೂಡುವುದಿಲ್ಲ ..”ಎಂದು ಪೋಸ್ಟ್ ಮಾಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top