fbpx
ಉಪಯುಕ್ತ ಮಾಹಿತಿ

ಕುಂತ್ರು ನಿಂತ್ರು ಎಲ್ಲ ಕಡೆ ಕಾರ್ಡ್ ಬಳಸಿ ಹಣದ ವ್ಯವಹಾರ ಮಾಡೋರು ಕಾರ್ಡ್ ಬಗ್ಗೆ ಈ ವಿಷಯಗಳು ತಿಳ್ಕೊಂಡ್ಮೇಲೆ , ಕಾರ್ಡ್ಗಳು ಎಷ್ಟು ನಾಜೂಕಾಗಿವೆ ಅಂತೀರಾ !

ನಾವು ದಿನ ಬ್ಯಾಂಕ್ ಕಾರ್ಡ್ ಗಳಾದ  ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನ ಉಪಯೋಗಿಸ್ತೀರಿ ,ಅದರ ಬಗ್ಗೆ ನಿಮ್ಗ ಎಲ್ಲ ವಿಷಯ ಗೊತ್ತ?

ಬನ್ನಿ ಅದರ ಬಗ್ಗೆ ನಿಮಗೆ ಎಲ್ಲ ಮಾಹಿತಿ ಕೊಡುವುದರ ಜೊತೆ ಅದರ ರಹಸ್ಯದ ಬಗ್ಗೆ ಹೇಳ್ತಿವಿ.

 

 

ನಾವು ದಿನ ಬ್ಯಾಂಕ್ ಕಾರ್ಡ್ ಗಳಾದ  ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನ ಉಪಯೋಗಿಸ್ತೀರಿ.ಏಟಿಎಂ ನಿಂದ ಹಣ ವಿಥ್ ಡ್ರಾ ಮಾಡಕ್ಕೆ,ಯಾವದಾದ್ರು ಬಿಲ್ ಪೆ ಮಾಡಕ್ಕೆ , ಫ್ರೆಂಡ್ಸ್ ಗೆ ಹಣ ವರ್ಗಾವಣೆ ಮಾಡಕ್ಕೆ ಮತ್ತು ಇನ್ನು ಹಲವು ಕಾರಣಗಳಿಗೆ ನಾವು ಬ್ಯಾಂಕ್ ಕಾರ್ಡ್ ಗಳಾದ  ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನ ಉಪಯೋಗಿಸ್ತೀರಿ.

 

ಬನ್ನಿ ಈವಾಗ ಬ್ಯಾಂಕ್ ಕಾರ್ಡ್ ಗಳ ಸೀಕ್ರೆಟ್ಸ್ ಗಳ ಬಗ್ಗೆ ತಿಳಿದುಕೊಳ್ಳಣ .

1.ಕಾರ್ಡ್ ನ ಹಿಂಭಾಗ:

ಕಾರ್ಡ್ ನ ಹಿಂಭಾಗದಲ್ಲಿರುವ  C V C ಮತ್ತು  C V V ಕೋಡ್ ಪಿನ್ ಕೋಡ್ ಗಿಂತ ಮುಖ್ಯವಾದದು ಸೆಕ್ಯೂರಿಟಿ ಗೋಸ್ಕರವಾಗಿ ಈ ಕೋಡ್ಗಳನ್ನ ಮಾಡಲಾಗಿರುತ್ತದೆ

ವೀಸಾ ಕಾರ್ಡ್ ಗಳಾದರೆ C V V ಕೋಡ್ ,ಮಾಸ್ಟರ್ ಕಾರ್ಡ್ ಗಳಾದರೆ C V C ಕೋಡ್ ಗಳನ್ನು ನಾವು ಕಾಣಬಹುದು.

C V ಎಂದರೆ ಕಾರ್ಡ್  ವೆರಿಫಿಕೇಷನ್  ಎಂದರ್ಥ.ಈ ಕೋಡ್ ಕಾರ್ಡನ್ನು ವೆರಿಫೈಯ್ ಮಾಡುತ್ತದೆ.

 

 

ಸಿ ವಿ ವಿ ಕೋಡ್ ನಿಂದ ನಮ್ಮ ಬಳಿ ಕಾರ್ಡ್ ಇಲ್ಲ ವಾದರೂ ಹಣದ ವ್ಯವಹಾರ ಮಾಡಬಹುದು.

 

2. ಡೆಬಿಟ್ ಮತ್ತು ಕ್ರೆಡಿಟ್?

ಬ್ಯಾಂಕ್ ಕಾರ್ಡ್ ಗಳು ಡೆಬಿಟ್ ಅಥವಾ  ಕ್ರೆಡಿಟ್ ಕಾರ್ಡ್ ಆಗಿರುತ್ತದೆ.ಡೆಬಿಟ್ ಕಾರ್ಡ್ ನ ಮೂಲಕ ನಾವು ನಮ್ಮ ಹಣವನ್ನು ಉಪಯೋಗಿಸಿಕೊಳ್ಳಬಹುದು.ಕ್ರೆಡಿಟ್ ಕಾರ್ಡನ್ನು ಡೆಬಿಟ್ ಕಾರ್ಡ್ ನ ಜೊತೆ ಯಲ್ಲಿ ನೀಡಲಾಗುತ್ತದೆ, ಗ್ರಾಹಕರ  ಒಪ್ಪಿಗೆ ಇಲ್ಲದೆ ಕ್ರೆಡಿಟ್ ಕಾರ್ಡ್ ಗಳನ್ನು ವಿತರಿಸುವಂತಿಲ್ಲ.

3. ಬ್ಯಾಂಕ್ ಕಾರ್ಡ್ ಗಳು ಮತ್ತು U V ಕಿರಣ

ಬ್ಯಾಂಕ್ ಕಾರ್ಡ್ಗಳು ಸಾಮಾನ್ಯ ಹಣದ ರೀತಿಯಲ್ಲಿಯೇ ರಕ್ಷಿಸಲಾಗುತ್ತದೆ.

ಉದಾಹರಣೆಗೆ:

ಕಾರ್ಡ್ ಗಳನ್ನ U V ಕಿರಣ ಗಳಲ್ಲಿ ಇಟ್ಟು ನೋಡಿದಾಗ ನಮಗೆ ಒಂದು ವಾಟರ್ ಮಾರ್ಕ್ ಕಾಣುತ್ತದೆ.

 

 

ವೀಸಾ ಕಾರ್ಡ್ ಗಳ ಮೇಲೆ “V” ಎಂಬ ವಾಟರ್ ಮಾರ್ಕ್ ,ಮಾಸ್ಟರ್ ಕಾರ್ಡ್ ಗಳ ಮೇಲೆ “M” ಮತ್ತು  “C” ವಾಟರ್ ಮಾರ್ಕ್ ಮತ್ತು ಅಮೆರಿಕನ್ ಎಕ್ಸ್ಪ್ರೆಸ್ ಕಾರ್ಡ್ ಗಳ ಮೇಲೆ ಹದ್ದಿನ ಚಿಹ್ನೆ ವಾಟರ್ಮಾರ್ಕ್ ಗಳನ್ನ ನಾವು ನೋಡಬಹುದು.

4.ನಿಮ್ಮ ಬ್ಯಾಂಕ್ ಕಾರ್ಡ್ ಗಳ ಮೇಲೆ ಇರುವ ಸಂಖ್ಯೆ ಗಳ ಬಗ್ಗೆ ತಿಳಿದುಕೊಳ್ಳಿ:

ಎಲ್ಲ ಬ್ಯಾಂಕ್ ಕಾರ್ಡ್ ಗಳ ಮೇಲೆ ನೀವು 16 ಸಂಖ್ಯೆಗಳನ್ನ ನೋಡಬಹುದು.

ಆ 16 ಸಂಖ್ಯೆ ಯಲ್ಲಿ ಮೊದಲನೇ ಸಂಖ್ಯೆ ಯನ್ನು ಸಿಸ್ಟಮ್ ನಂಬರ್ ಎಂದು ಕರೆಯುತ್ತಾರೆ.(ವೀಸಾ ಕಾರ್ಡ್ ಆದರೆ ಸಂಖ್ಯೆ 5 ರಿಂದ ಶುರುವಾಗುತ್ತದೆ ,ಮಾಸ್ಟರ್ ಕಾರ್ಡ್ ಆದರೆ ಸಂಖ್ಯೆ 5 ರಿಂದ ಶುರುವಾಗುತ್ತದೆ),ನಂತರದ 5 ಸಂಖ್ಯೆ ಬ್ಯಾಂಕ್ ನಂಬರನ್ನು ಸೂಚಿಸುತ್ತದೆ.ಈ 5 ಸಂಖ್ಯೆ ಬ್ಯಾಂಕ್ ನಂಬರ್ ನ ಸಹಾಯದಿಂದ ನಮ್ಮ ಬ್ಯಾಂಕ್ ಖಾತೆಯ ಪೂರ್ಣ ಮಾಹಿತಿ ಯನ್ನು ಪಡೆದುಕೊಳ್ಳಬಹುದು.

 

 

ನಂತರದ  9 ಸಂಖ್ಯೆ ಅಕೌಂಟ್ ನಂಬರನ್ನು ಸೂಚಿಸುತ್ತದೆ,ಈ ಸಂಖ್ಯೆ ಬ್ಯಾಂಕ್ ನವರಿಗೆ ಬಹಳ ಉಪಯೋಗಕಾರಿ,ಈ ಸಂಖ್ಯೆ ಇಂದ ಅವರು ಕಾರ್ಡ್ ನ ಓನರ್ ಅನ್ನು ಪತ್ತೆ ಹಚ್ಚಬಹುದು.

ಕೊನೆಗೆ ಉಳಿದ ಒಂದು ಸಂಖ್ಯೆ ಯನ್ನು ಚೆಕ್ ಡಿಜಿಟ್ ಎಂದು ಕರೆಯುತ್ತಾರೆ.

 

ಜಾಗರೂಕ ಕ್ರಮ:

1.ಇಂಟರ್ನೆಟ್ ನ ಮೂಲಕ ಯಾವುದಾದರು ಬ್ಯಾಂಕ್ ವ್ಯವಹಾರ ಅಥವಾ ಏನಾದರೂ ಕೊಳ್ಳುವಾಗ ಜಾಗರೂಕರಾಗಿರಿ.ಯಾವಾಗಲೂ ವೆಬ್ಸೈಟ್ಗಳಲ್ಲಿ ವ್ಯವಹಾರದ ಸಂಧರ್ಭ ದಲ್ಲಿ http ಫೋಟೋಕಾಲ್ ಅನ್ನು ಉಪಯೋಗಿಸಿ ಈ ಫೋಟೋಕಾಲ್ ನಿಮ್ಮ ಮಾಹಿತಿ ಹೊರ ಹೋಗದಂತೆ ತಡೆಯುತ್ತದೆ.

 

 

2.ನಿಮ್ಮ ಪಿನ್ ಮತ್ತು ಸಿ ವಿ ವಿ ಕೋಡ್ ಅನ್ನು ಯಾರ ಬಳಿಯು ಹೇಳಿಕೊಳ್ಳಬೇಡಿ

3.ಏಟಿಎಂ ಗಳಲ್ಲಿ ಹಣ ವಿತ್ಡ್ರಾ ಮಾಡುವಾಗ ಎಚ್ಚರವಾಗಿರಿ.

4.ನಿಮ್ಮ ಏಟಿಎಂ ಕಾರ್ಡ್ ಗಳನ್ನು ಕಳೆದುಕೊಂಡಾಗ ಮೊದಲು ಕಾರ್ಡ್ ಅನ್ನು ಬ್ಲಾಕ್ ಮಾಡಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top