fbpx
ಆರೋಗ್ಯ

ಮಗು ಹುಟ್ಟಿದ ಮೇಲೆ ಅಂದ ಕೆಡಿಸೋ ಸ್ಟ್ರೆಚ್ ಮಾರ್ಕ್ಸ್ ಹೋಗಿಸೋಕೆ ಮನೆಮದ್ದುಗಳು ಮಾಡ್ಕೊಂಡು ಅಂದ ಕಾಪಾಡಿಕೊಳ್ಳಿ

ಸ್ಟ್ರೆಚ್ ಮಾರ್ಕ್ಸ್ ಗೆ ಮನೆಯಲ್ಲಿಯೇ ಮಾಡಿ ಪರಿಹಾರ :

ಬಿಳಿ ಅಥವಾ ಗುಲಾಬಿ ಬಣ್ಣದ ವರ್ಣಗಳು ಚರ್ಮದ ಮೇಲೆ ಕಾಣಿಸಿಕೊಳ್ಳುವ ಕ್ರಿಯೆಗೆ ಸ್ಟ್ರೆಚ್ ಮಾರ್ಕ್ಸ್ ಎಂದು ಕರೆಯುತ್ತಾರೆ.
ಪ್ರಮುಖವಾಗಿ ಕಿಬ್ಬೊಟ್ಟೆಯ ಮೇಲೆ , ತೊಡೆ , ತೊಳುಗಳು , ಪೃಷ್ಠ ಮತ್ತು ಸ್ತನಗಳ ಮೇಲೆ ಕಾಣಿಸಿಕೊಳ್ಳುತ್ತದೆ.

 

 

ಗರ್ಭಧಾರಣೆ ಇದರ ಹಿಂದಿರುವ ಮುಖ್ಯ ಕಾರಣ , ತೂಕದ ಹಠಾತ್ ಏರಿಕೆ ಅಥವಾ ಇಳಿಕೆ , ಅಧಿಕವಾದ ದೇಹದ ಬೆಳವಣಿಗೆ , ಅನುವಂಶಿಕತೆ ಅಂಶಗಳು, ಒತ್ತಡ ಮತ್ತು ಭೌತಿಕ ಸ್ಥಿತಿಯಲ್ಲಿ ಬದಲಾವಣೆ ಇವು ಮುಖ್ಯವಾದ ಕಾರಣಗಳು.


ಚರ್ಮ ಮೂರು ಮುಖ್ಯ ಪದರಗಳನ್ನು ಒಳಗೊಂಡಿರುತ್ತದೆ: ಡೇರ್ಮಿಸ್ (ಹೊರ ಪದರ), ಎಪಿಡರ್ಮಿಸ್ (ಮಧ್ಯಮ ಪದರ) ಮತ್ತು ಹೈಪೊಡೆರ್ಮಿಸ್ (ಆಳವಾದ ಪದರ)

ಮಾಧ್ಯಮ ಪದರ ಹಾಗು ಹೊರ ಪದರದ ನಡುವಿನ ಬೆಸುಗೆ ಕಡಿಮೆಯಾಗಿ ಎಳೆಯಲ್ಪಟ್ಟ ಚರ್ಮವೇ ಸ್ಟ್ರೆಚ್ ಮಾರ್ಕ್ಸ್ .

ತಡೆಯುವುದು ಹೇಗೆ ?

 

ಕಾಫಿ ಪುಡಿ ಮತ್ತು ಲೋಳೆಸರ

 

 

ಒಂದು ಚಮಚ ಕಾಫಿ ಪುಡಿ ಮತ್ತು ಒಂದು ಚಮಚ ಲೋಳೆಸರವನ್ನು ಮಿಶ್ರಣ ಮಾಡಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಿ ಆನಂತರ 20 ನಿಮಿಷಗಳ ಬಳಿಕ

ಲೋಳೆಸರ ಮತ್ತು ಬಾದಾಮಿ ಎಣ್ಣೆ

 

 

ಒಂದು ಚಮಚ ಲೋಳೆಸರ ಅಥವಾ ಅಲೋವೆರಾ ಬಿಳಿ ಭಾಗ , ಒಂದು ಚಮಚ ಬಾದಾಮಿ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ , ನಂತರ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಿ , ಹೀಗೆ ಕೆಲವು ವಾರಗಳು ಮುಂದುವರಿಸಿದರೆ ಸ್ಟ್ರೆಚ್ ಮಾರ್ಕ್ಸ್ ಕಲೆಗಳು ಮಾಯವಾಗುತ್ತದೆ.

ಆಲೂಗಡ್ಡೆ

 

 

ಆಲೂಗಡ್ಡೆಯಲ್ಲಿ ಕ್ಯಾಲ್ಸಿಯಂ , ಪೊಟ್ಯಾಸಿಯಂ ಮೆಗ್ನೀಷಿಯಂ ಹಾಗು ಜಿಂಕ್ ಅಂಶ ಹೇರಳವಾಗಿದ್ದು , ಇದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಉಜ್ಜಿ ಸ್ವಲ್ಪ ಸಮಯದ ನಂತರ ತೊಳೆಯಬೇಕು.

ಸಕ್ಕರೆ ಮತ್ತು ಬಾದಾಮಿ ಎಣ್ಣೆ

 

 

ಒಂದು ಚಮಚ ಸಕ್ಕರೆಗೆ ಬಾದಾಮಿ ಎಣ್ಣೆಯನ್ನು ಬೆರೆಸಿ , ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ ಬಿಡಬೇಕು ಒಂದು ತಿಂಗಳು ಸ್ನಾನಕ್ಕೆ ಹೋಗುವ ಮುನ್ನ ಈ ಕೆಲಸ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ದೂರವಾಗುತ್ತದೆ.

ಸಕ್ಕರೆ ಮತ್ತು ನಿಂಬೆ ರಸ

 

 

ನಿಂಬೆ ರಸವನ್ನು ಒಂದು ಚಮಚ ಸಕ್ಕರೆಗೆ ಬೆರೆಸಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ವೃತ್ತಾಕಾರವಾಗಿ 5 -10 ನಿಮಿಷ ಉಜ್ಜಿ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ,ಬೇಕಾದರೆ ಸೌತೆಕಾಯಿ ರಸವನ್ನು ಸಹ ಸೇರಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top