ತಿಂಡಿ ತೀರ್ಥ

ಶೇಂಗಾ/ಕಡ್ಲೆಕಾಯಿ ಬರ್ಫಿ ಮಾಡುವ ವಿಧಾನ

ಶೇಂಗಾ/ಕಡ್ಲೆಕಾಯಿ ಬರ್ಫಿ ಮಾಡುವ ವಿಧಾನ

ಶೇಂಗಾ ಬರ್ಫಿ ಮಾಡಲು ಬೇಕಾಗುವ ಸಾಮಗ್ರಿಗಳು:

ಒಂದು ಬಟ್ಟಲು ಶೇಂಗಾಬೀಜ

ಒಂದು ಬಟ್ಟಲು ಅಥವಾ ರುಚಿಗೆ -ಬೆಲ್ಲ/ಸಕ್ಕರೆ

ತುಪ್ಪ ಒಂದು ಚಮಚ

ಶೇಂಗಾ ಬರ್ಫಿ ಮಾಡುವ ವಿಧಾನ: ಶೇ೦ಗಾವನ್ನು ಸಣ್ಣ ಉರಿಯಲ್ಲಿ ಗರಿ ಗರಿಯಾಗಿ ಹುರಿದುಕೊಳ್ಳಿ, ಅದು ಬಿಸಿ ಆರಿದಮೇಲೆ ಅದರ ಮೇಲಿನ ತೆಳುವಾದ ಸಿಪ್ಪೆಯನ್ನು ತೆಗೆಯಬೇಕು. ಅರ್ಧ ಶೇ೦ಗಾವನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಒ೦ದು ಸುತ್ತು ತಿರುಗಿಸಿ ಅ೦ದರೆ ಶೇ೦ಗಾ ೨-೩ ಚುರು ಅಗಬೇಕಷ್ಟೆ, ಉಳಿದದ್ದನ್ನು ಹಾಗೆ ಸೇರಿಸಿ.  ದಪ್ಪ ತಳದ ಬಾಣಲೆಗೆ ಸಕ್ಕರೆಯನ್ನು ಹಾಕಿಕೊ೦ಡು ½ ಚಮಚ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಅದು ಕರಗುವವರೆಗೆ ಕೈ ಆಡಿಸುತ್ತಿರಬೇಕು. ಸಕ್ಕರೆ ಪೂರ್ತಿಯಾಗಿ ಕರಗಿದಮೇಲೆ ಅದರ ಪಾಕವು ಹೊ೦ಬಣ್ಣ ಬರುತ್ತದೆ. ನ೦ತರ ಶೇ೦ಗಾವನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಒ೦ದು ನುಣುಪಾದ ಕಲ್ಲಿನ ಮೇಲೆ  ತುಪ್ಪವನ್ನು ಸವರಿ ಈ ಮಿಶ್ರಣವನ್ನು ಅದರ ಮೇಲೆ ಹಾಕಿ ಲಟ್ಟಣಗೆಯಿ೦ದ ಅದನ್ನು ಲಟ್ಟಿಸಿ, ಅದು ಪೂರ್ತಿ ಬಿಸಿ ಆರುವುದರೊಳಗಾಗಿ ಚಾಕುವಿನಿ೦ದ ಹಲ್ವ ಥರ ಕತ್ತರಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top