fbpx
ಆರೋಗ್ಯ

ಜಿಮ್ ಗೆ ಹೋಗಿ ‘ಮಸಲ್ಸ್’ ಗೋಸ್ಕರ ‘ಸ್ಟೀರಾಯ್ಡ್ಸ್’ ತಗೋಳೋ ಜನರೇ ‘ಪುರುಷರ ಆ ವಿಷಯ’ಕ್ಕೆ ತೊಂದ್ರೆ ಆಗುತ್ತೆ ಅಂತಾ ಗೊತ್ತಾದ್ಮೇಲೆ ಇನ್ಮುಂದೆ ಜಪ್ಪಯ್ಯ ಅಂದ್ರು ಮುಟ್ಟಲ್ಲ

ಜಿಮ್ ಗೆ ಹೋಗಿ ‘ಮಸಲ್ಸ್’ ಗೋಸ್ಕರ ‘ಸ್ಟೀರಾಯ್ಡ್ಸ್’ ತಗೋಳೋ ಜನರೇ ‘ಪುರುಷರ ಆ ವಿಷಯ’ಕ್ಕೆ ತೊಂದ್ರೆ ಆಗುತ್ತೆ ಅಂತಾ ಗೊತ್ತಾದ್ಮೇಲೆ ಇನ್ಮುಂದೆ ಜಪ್ಪಯ್ಯ ಅಂದ್ರು ಮುಟ್ಟಲ್ಲ

 

 

ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಗಳ ಪ್ರಮಾಣ ಜಾಸ್ತಿಯಾಗಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಜಾಸ್ತಿ ಆಗುತ್ತದೆ ಮತ್ತು ಲೈಂಗಿಕ ಆಸಕ್ತಿಯನ್ನು ಕೆರಳಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ದೇಹಕ್ಕೆ ಶೇಪ್ ಬೇಕೆಂದು ಮಾಂಸಖಂಡಗಳನ್ನು ಬಲವಾಗಿ ಇರಿಸಿಕೊಳ್ಳಬೇಕೆಂದು ಯುವಕರು ಬಯಸುತ್ತಾರೆ , ಈ ಬಯಕೆ ಸಾಮಾನ್ಯವಾಗಿ 21 ವರ್ಷದಿಂದ 35 ವರ್ಷಗಳ ಒಳಗಿನವರ ಬಯಕೆ ಇದಕ್ಕಾಗಿ ನಾನಾ ಕಸರತ್ತುಗಳನ್ನು ಸಹ ಮಾಡುತ್ತಾರೆ .

ಕೆಲವರು ಯೋಗ , ವ್ಯಾಯಾಮ , ಈಜು ಹೀಗೆ ಮಾಡಿದರೆ ಇನ್ನು ಕೆಲವರು ನೈಸರ್ಗಿಕವಲ್ಲದ ಮಾರ್ಗಗಳನ್ನು ಹುಡುಕುತ್ತಾರೆ , ಇನ್ನು ಕೆಲವರು ಮಾತ್ರೆ ಮದ್ದುಗಳ ಮೊರೆ ಹೋಗಿ ಜೀವನ ಹಾಳು ಮಾಡಿಕೊಳ್ಳುತ್ತಾರೆ.

 

 

ದೇಹದ ತೂಕ ಹೆಚ್ಚಾಗಬೇಕೆಂದು ಜಿಮ್ ಗೆ ಹೋಗಿ ಕಸರತ್ತು ಮಾಡುವವರಲ್ಲಿ ಶೇಖಡಾ 75 ಜನ ಸ್ಟೀರಾಯ್ಡ್ಸ್ ಗಳನ್ನು ತೆಗೆದುಕೊಳ್ಳುತ್ತಾರೆ , ಏಕೆಂದರೆ ಈ ಸ್ಟೀರಾಯ್ಡ್ಸ್ ಗಳು
ಪುರುಷತ್ವವನ್ನು ಹೆಚ್ಚಿಸುತ್ತದೆ ಎಂದು .

ಅಸಲಿಗೆ ಈ ಸ್ಟೀರಾಯ್ಡ್ಸ್ ಏನು ಮಾಡುತ್ತದೆ ಎಂದರೆ ಹೆಚ್ಚು ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಉತ್ಪಾದನೆಯಾಗುವಂತೆ ಮಾಡುತ್ತದೆ.

ಟೆಸ್ಟೋಸ್ಟೆರಾನ್ ಹಾರ್ಮೋನ್ ಪುರುಷತ್ವದ ಗುಣಗಳಿಗೆ ಮುಖ್ಯವಾದದ್ದು , ಆದ್ದರಿಂದ ಹೆಚ್ಚು ಮಾಂಸಖಂಡಗಳನ್ನು ಅಂದರೆ ಮಸಲ್ಸ್ ಉತ್ಪಾದನೆಗೆ ಸಹಾಯ ಮಾಡುತ್ತದೆ .

 

 

ಈಗ ನೀವು ಕೇಳ ಬಹುದು ಎಲ್ಲ ಸರಿಯಾಗಿದೆ ಇನ್ನು ಏನು ತೊಂದರೆ ಎಂದು ?

 

 

ಹೌದು ಇದು ಸಮಸ್ಯೆಯನ್ನು ಹೆಚ್ಚಿಸುತ್ತದೆ , ಇದು ನೈಸರ್ಗಿಕ ಹಾರ್ಮೋನ್ ಉತ್ಪಾದನೆಯನ್ನು ತಗ್ಗಿಸುತ್ತದೆ , ಅಥವಾ ಕೆಲವರಲ್ಲಿ ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ , ಅಂದರೆ ನಿಮ್ಮನ್ನು ಅಡಿಕ್ಟ್ ಆಗುವಂತೆ ಮಾಡುತ್ತದೆ , ಮುಂದೆ ನೀವು ಸ್ಟೀರಾಯ್ಡ್ಸ್ ನಿಲ್ಲಿಸಲು ಸಾಧ್ಯವಾಗದೆ ಹೋಗದಂತೆ ಮಾಡುತ್ತದೆ.

ಒಂದು ವೇಳೆ ನೀವು ಸ್ಟೀರಾಯ್ಡ್ಸ್ ಸೇವನೆ ನಿಲ್ಲಿಸಿದರು ಮತ್ತೆ ಮರಳಿ ನಿಮ್ಮ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆ ಮಾಡಿಕೊಳ್ಳಲು ಮೂರರಿಂದ ಒಂದು ವರ್ಷ ಬೇಕು ಮತ್ತು ಕೆಲವರಲ್ಲಿ ಇದು ಸಂಪೂರ್ಣವಾಗಿ ಸಾಧ್ಯವಾಗುವುದಿಲ್ಲ ಆದ್ದರಿಂದ ಮಸೆಲ್ಸ್ ಗೋಸ್ಕರ ಸ್ಟೀರಾಯ್ಡ್ಸ್ ಸೇವಿಸಿ ಜೀವನ ಹಾಳು ಮಾಡಿಕೊಳ್ಳಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top