fbpx
ಸಮಾಚಾರ

ಚುನಾವಣೆ ಹಿನ್ನೆಲೆ: ಅವಧಿಗೂ ಮುನ್ನವೇ ನಡೆಯಲಿದೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ..?

ಚುನಾವಣೆ ಹಿನ್ನೆಲೆ: ಅವಧಿಗೂ ಮುನ್ನವೇ ನಡೆಯಲಿದೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ..?

 

 

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇನ್ನೂ ಪರೀಕ್ಷೆ ದೂರವಿದೆ ಎಂದು ಉದಾಸೀನ ಪಡುವಂತಿಲ್ಲ ಏಕೆಂದರೆ ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಗಳು ಅವಧಿಗೂ ಮುಂಚೆಯೇ ಪರೀಕ್ಷೆ ನಡೆಯುವ ಎಲ್ಲಾ ಸಾಧ್ಯತೆಗಳಿದ್ದು,.ಈಗಲೇ ತಮ್ಮ ಪರೀಕ್ಷೆಗಳಿಗೆ ಸಿದ್ಧರಾಗುವುದು ಉತ್ತಮ..ಮುಂದೆ ಓದಿ

 

 

ಪಿಯುಸಿ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಹೆಚ್ಚೇನೂ ಬದಲಾವಣೆಯಾಗದೆ ಪ್ರತಿ ವರ್ಷ ಯಾವ ಸಮಯಕ್ಕೆ ನಡೆಯುತ್ತಿತ್ತೋ ಅದೇ ಸಮಯಕ್ಕೆ ನಡೆಯುವ ಸಾಧ್ಯತೆಯಿದೆ ಆದರೆ ಪ್ರತಿವರ್ಷ ಏಪ್ರಿಲ್‌-ಮೇಯಲ್ಲಿ ನಡೆಯುವ ಎಸೆಸೆಲ್ಸಿ ಪರೀಕ್ಷೆಗಳು ಮಾತ್ರ ಅವಧಿಗೂ ಮುಂಚೆಯೇ ನಡೆಯುತ್ತವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮುಂದೆ ಓದಿ

 

 

ಈಗಿನ ಕಾಂಗ್ರೆಸ್‌ ಸರಕಾರದ ಅವಧಿ ಮುಂದಿನ ವರ್ಷ ಮೇ 13ಕ್ಕೆ ಪೂರ್ಣಗೊಳ್ಳಲಿದೆ..ಸರ್ಕಾರದ ಅವಧಿ ಮುಗಿಯುದಕ್ಕೂ ಮುನ್ನವೇ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಬೇಕಿದೆ.. ಹಾಗೆ ಮಾಡಿದರೆ ಚುನಾವಣೆಯನ್ನು ಏಪ್ರಿಲ್ ತಿಂಗಳಲ್ಲಿ ಮಾಡಬೇಕು.. ಏಪ್ರಿಲ್ ನಲ್ಲಿ ಚುನಾವಣೆ ನಡೆದರೆ ಇಡೀ ತಿಂಗಳು ಚುನಾವಣೆ ಪ್ರಕ್ರಿಯೆ ನಡೆಯುತ್ತದೆ…ಚುನಾವಣೆ ಕೆಲಸಕ್ಕಾಗಿ ಶಿಕ್ಷಕರು ಮತ್ತು ಶಾಲಾ ಕೊಠಡಿಗಳನ್ನು ಬಳಸಲಾಗುತ್ತದೆ… ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ನಡೆಸುವುದರಿಂದ ಗೊಂದಲ ಉಂಟಾಗುತ್ತದೆ ಎಂಬ ಆಲೋಚನೆ ಹಿನ್ನೆಲೆಯಲ್ಲಿ ಈ ಭಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾರ್ಚ್‌ ತಿಂಗಳಲ್ಲೇ ಮುಗಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

 

 

ಈ ಬಗ್ಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಮಾರ್ಚ್‌ ಅಂತ್ಯದೊಳಗೆ ಪರೀಕ್ಷೆ ಮುಗಿಸಲು ಸಾಧ್ಯವೇ ಎಂದು ಚುನಾವಣಾ ಆಯೋಗ ಅಭಿಪ್ರಾಯ ಕೇಳಿದೆ.. “ಚುನಾವಣಾ ಆಯೋಗದ ಸಲಹೆ ಪಡೆದು ನಮ್ಮ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಮುಂದಿನ ಒಂದೆರಡು ದಿನಗಳಲ್ಲಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಾಗುತ್ತದೆ” ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top