fbpx
ಜಾಗೃತಿ

ಲಂಡನ್ನಿನ ಪ್ರತಿಷ್ಠಿತ ಕಂಪನಿಯಲ್ಲಿನ ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟು ತನ್ನ ಹಳ್ಳಿ ಮಕ್ಕಳಿಗೆ ಪಾಠ ಮಾಡುತ್ತಿರುವ ಯುವಕ..

ಲಂಡನ್ನಿನ ಪ್ರತಿಷ್ಠಿತ ಕಂಪನಿಯಲ್ಲಿನ ಕೈತುಂಬಾ ಸಂಬಳ ಬರೋ ಕೆಲಸ ಬಿಟ್ಟು ತನ್ನ ಹಳ್ಳಿ ಮಕ್ಕಳಿಗೆ ಪಾಠ ಮಾಡುತ್ತಿರುವ ಯುವಕ..

 

 

ಇದು ಒಬ್ಬ ಎಂ.ಬಿ.ಎ ಪದವೀಧರ ಯುವಕನ ಕನಸಿನ ಕತೆ..ಉತ್ತರಪ್ರದೇಶದ 26 ವರ್ಷದ ಯುವಕ ಶುವಾಜಿತ್ ಪಾಯ್ನೆ ಎಂಬುವವನು, ಗ್ರಾಮೀಣ ಪ್ರದೇಶದಲ್ಲಿನ ಯುವಕರು ಜೀವನೋಪಾಯಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗದೇ ತಮ್ಮ ತಮ್ಮ ಹಳ್ಳಿಗಳಲ್ಲೇ ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೊಲ್ಕತ್ತಾದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಶುವಾಜಿತ್ ಪೇನ್ ಅವರ ಬಾಲ್ಯದಲ್ಲಿ ತಮಗೆ ಅವಶ್ಯವಾಗಿದ್ದ ಕನಿಷ್ಠ ಅಗತ್ಯತೆಗಳನ್ನು ಪೂರೈಸಲು ಸಹ ಹೋರಾಟ ಮಾಡಬೇಕಾಯಿತು,, ತಮ್ಮ ಬಾಲ್ಯದಲ್ಲಿ ಅವರ ತಂದೆ ಹಣಕಾಸಿನ ಸಮಸ್ಯೆಯಿಂದ ಸಂಕಟಪಡುತ್ತಿದ್ದ ಪರಿಸ್ಥಿತಿಗಳನ್ನು ನೋಡುತ್ತಿದ್ದರು.. ಅವರು ಬಹಳ ಚಿಕ್ಕವರತಾಗಿದ್ದಾಗಲೇ ಖರ್ಚು ಮಾಡುವಿಕೆಯು ಅವಶ್ಯಕವೇ ಹೊರತು ಆಯ್ಕೆಯಾಗಿರಬಾರದು ಎಂದು ತಮ್ಮ ತಂದೆಯ ಕಷ್ಟಗಳನ್ನು ನೋಡಿ ತಿಳಿದುಕೊಂಡಿದ್ದರು.

 

 

ಅವರು ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜ್ನಿಂದ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ನಂತರ ಐಐಎಂ, ಲಕ್ನೋದಿಂದ ಎಂಬಿಎ.ಅವರು ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜ್ನಿಂದ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ನಂತರ ಐಐಎಂ, ಲಕ್ನೋದಿಂದ ಎಂಬಿಎ ಪಡಿಯನ್ನು ಪಡೆಯುತ್ತಾರೆ.ತಾವು ವ್ಯಾಸಂಗ ಮಾಡೋದಕ್ಕೆ ಹಣದ ಕೊರತೆಯ ಸಮಸ್ಯೆ ಎದುರಾದಾಗ ಛಲಬಿಡದೆ ತಾವೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ವ್ಯಾಸಂಗವನ್ನು ಮಾಡುತ್ತಾರೆ.

 

 

ಎಂಬಿಎ ಪದವಿ ಪಡೆದ ನಂತರ ಶುವಾಜಿತ್ ಪೇನ್ ಗೆ ಲಂಡನ್ ನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಗುತ್ತದೆ. ಶುವಾಜಿತ್ ಪೇನ್ ಸಂತೋಷದಿಂದ ಲಂಡನ್ ಗೆ ಹೋಗಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಅವರು ಲಂಡನ್ ನಲ್ಲಿ ಕೆಲಸ ಮಾಡುತ್ತಿರುವಾಗ ಮನಸ್ಸು ಮಾತ್ರ ಹಳ್ಳಿಗಳತ್ತ ಮಿಡಿಯುತ್ತಿರುತ್ತದೆ. ನಮ್ಮ ಹಳ್ಳಿಗಳಿಗಾಗಿ ಏನನ್ನಾದರೂ ಮಾಡಬೇಕು ಎಂದು ನಿರ್ಧಾರ ಮಾಡಿದ ಶುವಾಜಿತ್ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಭಾರತಕ್ಕೆ ವಾಪಸ್ಸು ಬರುತ್ತಾರೆ.

 

 

ವಿದೇಶದಿಂದ ಮರಳಿ ಬಂದ ಶಿವಾಜಿತ್ ಎಸ್‌ಬಿಐ ಬ್ಯಾಂಕ್‌ನ ಗ್ರಾಮೀಣಾಭಿವೃದ್ಧಿ ಫೆಲೋಶಿಪ್ ಪಡೆದು ಹಳ್ಳಿಗಳಲ್ಲಿನ ಯುವಕರಿಗೆ ಸ್ವಾವಲಂಬನೆ ಪಾಠ ಮಾಡಲು ಮುಂದಾದರು. ಶಿವಾಜಿತ್ ಹಳ್ಳಿಯ ಹುಡುಗರಿಗೆ ಇಂಗ್ಲಿಷ್ ಬೋಧನೆಯನ್ನು ಮಾಡಲು ಪ್ರಾರಂಭಿಸುತ್ತಾರೆ,,ಅವರು ಹಲವಾರು ಸೃಜನಶೀಲ ತಂತ್ರಗಳನ್ನು ಬಳಸಿ ಯುವಕರಿಗೆ ತರಬೇತಿ ನೀಡಿದ್ದರು ಅವುಗಳಲ್ಲಿ 50 ಕ್ಕೂ ಹೆಚ್ಚು ಯುವಕರು ಯಶಸ್ವಿಯಾಗಿ ಹೊರಹೊಮ್ಮಿದ್ದಾರೆ..

 

ಇಂಗ್ಲೀಷ್ ಜೊತೆಗೆ, ಅವರು ಕಂಪ್ಯೂಟರ್ ಕೌಶಲಗಳನ್ನು, ವಿಶ್ವಾಸಾರ್ಹ ಬೆಳವಣಿಗೆಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು ಮತ್ತು ಕಾಲಕಾಲಕ್ಕೆ ಅವರಿಗೆ ಸಲಹೆ ನೀಡುತ್ತಿದ್ದಾರೆ. ವಾಸ್ತವವಾಗಿ, ಶುವಾಜಿತ್ ನ ಇಬ್ಬರು ವಿದ್ಯಾರ್ಥಿಗಳು ದೊಡ್ಡ ಸಾಧನೆಯನ್ನು ಮಾಡಿದ್ದು ಒಬ್ಬ ಸಾಫ್ಟ್ವೇರ್ ಡೆವಲಪರ್ ಆಗಿದ್ದರೆ ಇನ್ನೊಬ್ಬ ಆನಿಮೇಟರ್ ಆಗಿ ಹೊರಹೊಮ್ಮಿದ್ದಾನೆ.

 

 

ಈ ರೀತಿ ಮೂವತ್ತಕ್ಕೂ ಹೆಚ್ಚು 1200 ಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡುತ್ತಿರುವ ಶುವಾಜಿತ್ “ಹಳ್ಳಿ ಯುವಕರು ಸ್ವಾವಲಂಬಿ ಜೀವನ ಜೀವನವನ್ನು ಮಾಡುವಂತೆ ಮಾಡುವುದೇ ನನ್ನ ಸದ್ಯದ ಗುರಿಯಾಗಿದೆ.. ನನ್ನ ಈ ಪ್ರಯತ್ನಕ್ಕೆ ಯಾರಾದರೂ ಅನುದಾನ ನೀಡಬೇಕು ಎಂದೆನಿಸಿದಲ್ಲಿ ಸ್ವಾಗತ. ” ಎಂದು ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Roopa says:

Great

To Top