fbpx
ಭವಿಷ್ಯ

ಈ ಮೂರು ರಾಶಿಲಿ ಹುಟ್ಟಿರೋರು ಮಹಾ ಮೇಧಾವಿಗಳಂತೆ ಹಾಗೆ ಎಂತಹ ಸಮಸ್ಯೆ ಕೊಟ್ರು ಪರಿಹಾರ ಕಂಡ್ಕೋತಾರಂತೆ

ಈ ಮೂರು ರಾಶಿಯವರು ಮಾತ್ರ ಬೇರೆಯವರಿಗಿಂತ ಅತೀ ಬುದ್ಧಿವಂತರು ಹೇಗೆ ಎಂದು ಇಲ್ಲಿ ಓದಿ ತಿಳಿದುಕೊಳ್ಳಿ.

ವಿಜ್ಞಾನದ ಪ್ರಕಾರ ಬುದ್ಧಿವಂತಿಕೆಯಲ್ಲಿ ಎರಡು ವಿಧಗಳಿವೆ. ಅವು ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ. ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯನ್ನು ಬುದ್ಧಿ ಪ್ರಮಾಣದಿಂದ ಅಳತೆ ಮಾಡಿ ಪರೀಕ್ಷೆ ಮಾಡಲಾಗುತ್ತದೆ. ಇದಾದ ನಂತರ ಭಾವನಾತ್ಮಕ ಬುದ್ಧಿವಂತಿಕೆಯ ಅಂತರ್ಬೋಧನೆಯ ಸಾಮರ್ಥ್ಯವನ್ನು ಕೂಡ ಎಷ್ಟಿದೆ ಎಂದು ಅದು ಸೂಚಿಸುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು ಹನ್ನೆರಡು ರಾಶಿಗಳಿವೆ. ಆ ಹನ್ನೆರಡು ರಾಶಿಗಳಲ್ಲಿ ಕೇವಲ ಮೂರು ರಾಶಿಗಳು ಮಾತ್ರ ಈ ಮೇಲೆ ಹೇಳಿರುವ ಗನಿಷ್ಠ ಪ್ರಮಾಣದ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ.

 

 

ಇದರ ಆಧಾರದ ಮೇಲೆ ಅವರನ್ನು ತುಂಬಾ ಬುದ್ಧಿವಂತರು, ತೀಕ್ಷ್ಣವಾದ ಸ್ವಭಾವವನ್ನು ಹೊಂದಿರುವವರು, ಎಂದು ಉಲ್ಲೇಖಿಸಲಾಗಿದೆ. ಯಾವ ಯಾವ  ವ್ಯಕ್ತಿಗಳು ಈ ರಾಶಿಗಳಲ್ಲಿ ಹುಟ್ಟಿರುತ್ತಾರೋ ಅವರು ಇವೆಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಇವೆಲ್ಲ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ .ಅವರು ಯಾವುದೇ ವಿದ್ಯಮಾನವನ್ನು ಮತ್ತು  ಅವರ ಸುತ್ತಮುತ್ತ  ನಡೆಯಲಿರುವುದನ್ನು ಸುಲಭವಾಗಿ ಅರ್ಥ ಮಾಡಿಕೊಂಡು ವಿಷಯವನ್ನು ಬೇಗನೇ ಗ್ರಹಿಸುತ್ತಾರೆ.

ಅಂದರೆ ಇದರರ್ಥ ಬೇರೆ  ರಾಶಿಗಳಲ್ಲಿ ಹುಟ್ಟಿದವರು ಮೂರ್ಖರು, ದಡ್ಡರು ಎಂದಲ್ಲ.ಇದು ಕೇವಲ ಕೆಲವೇ ಕೆಲವು ಗ್ರಹಗಳ ಪರಿಣಾಮದಿಂದಾಗಿ ನಿರ್ದಿಷ್ಟ ಲಕ್ಷಣವನ್ನು ಆಯಾ ರಾಶಿಗಳಲ್ಲಿ ಪ್ರಭಾವಿಸುತ್ತವೆ. ಆ ರಾಶಿಗಳಾದ ಮಿಥುನ, ವೃಶ್ಚಿಕ ಮತ್ತು ಕುಂಭ ರಾಶಿ.

 1.ಮಿಥುನ ರಾಶಿ.

 

 

ಇದು ಸಂವಹನಾ ಗ್ರಹವಾಗಿದ್ದು. ಬುಧ ಗ್ರಹವು ಈ ರಾಶಿಯನ್ನು ಆಳುತ್ತದೆ. ಅಂದರೆ ಮಿಥುನ ರಾಶಿಯ ಅಧಿಪತಿ ಬುಧ ಗ್ರಹನಾಗಿದ್ದಾನೆ. ಅವಳಿಗಳ ಚಿತ್ರವಿರುವ ಈ ರಾಶಿಯವರನ್ನು ಉತ್ತಮ ಭಾಷಣಕಾರರು, ತ್ವರಿತ ಬುದ್ಧಿವಂತರು ಮತ್ತು ಸಾಕಷ್ಟು ಬುದ್ಧಿವಂತಿಕೆ ಇರುವವರು ಎಂದು ಪರಿಗಣಿಸಲಾಗಿದೆ ಸಾಮಾನ್ಯವಾಗಿ ಮಿಥುನ ರಾಶಿಯವರಿಗೆ ಗಣಿತ ಶಾಸ್ತ್ರದಲ್ಲಿ ಬುದ್ಧಿ ಚೆನ್ನಾಗಿದ್ದು ಬ್ಯಾಂಕಿನಲ್ಲಿ ಸಮರ್ಥವಾಗಿ ವ್ಯವಸ್ಥಾಪಕರ ಕೆಲಸವನ್ನು ನಿರ್ವಹಿಸಲು ಸಾಮರ್ಥ್ಯ ಇವರಿಗೆ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ ಈ ರಾಶಿಯಲ್ಲಿ ಹುಟ್ಟಿದವರು ಸಂಖ್ಯಾಶಾಸ್ತ್ರಜ್ಞರು ಕೂಡ ಮತ್ತು ಭೌತ ಶಾಸ್ತ್ರಜ್ಞರು ಕೂಡ ಆಗುವ ಸಾಧ್ಯತೆ ಹೆಚ್ಚಿದೆ.

 ಮಿಥುನ ರಾಶಿಯ ಹೆಸರಾಂತ ವ್ಯಕ್ತಿಗಳು.

* ಡೇನಿಯಲ್ ಫ್ಯಾರನ್ ಹೀಟ್ ಇವರು ದೇಹದ ಉಷ್ಣಾಂಶವನ್ನು ಅಳತೆ ಮಾಡುವ ಥರ್ಮೋಮೀಟರ್ ಮಾಪನವನ್ನು ಕಂಡು ಹಿಡಿದವರು.

*ಫ್ರಾನ್ಸಿಸ್ ಚಿಕ್ಕ ಡಿ ಎನ್ ಎ ರಚನೆಯನ್ನು ಪತ್ತೆ ಹಚ್ಚಿದವರು.

*ಮೇರಿ ಎನ್ನಿಂಗ್ ಹೆಸರಾಂತ ಪಳೆಯುಳಿಕೆ ತಜ್ಞರು.

*ಜೇಮ್ಸ್ ಕ್ಲಾರ್ಕ್ ವೆಲ್ ಆಧುನಿಕ ಭೌತ ಶಾಸ್ತ್ರದ ತಂದೆಯಾಗಿದ್ದು ಇವರು ವಿದ್ಯುತ್ ಕಾಂತೀಯತೆಯನ್ನು ಪತ್ತೆ ಹಚ್ಚಿದವರು.

2.ವೃಶ್ಚಿಕ ರಾಶಿ.

ಆಶ್ಚರ್ಯ ಪಡಬೇಡಿ. ಮೋಸಗಾರರಾದ ವೃಶ್ಚಿಕ ರಾಶಿಯವರು ತಮ್ಮ ಇನ್ನೊಂದು ಮುಖವಾದ ಕತ್ತಲೆಯ ಭಾಗವನ್ನು ಹೊಂದಿದ್ದು. ವಿವೇಚನೆ ಇಲ್ಲದ ನಿರ್ಧಾರಗಳನ್ನು ಉತ್ಸಾಹದಿಂದ ತೆಗೆದುಕೊಳ್ಳುತ್ತಾರೆ . ಹಾಗೆ ಅವುಗಳನ್ನು ಕೇಂದ್ರೀಕರಿಸಿ ಪ್ರೇರೇಪಿಸಲಾಗುತ್ತದೆ. ಇವರು ಸದಾ ಬಹಳ ಉತ್ಸಾಹದಿಂದ ಕೂಡಿದ್ದು. ತೀಕ್ಷ್ಣವಾದ ಬುದ್ಧಿಯಿಂದ ಜೀವನದ ರಸ್ತೆಯಲ್ಲಿ ಸಾಗುತ್ತಾರೆ.

 ವೃಶ್ಚಿಕ ರಾಶಿಯ ಹೆಸರಾಂತ ವ್ಯಕ್ತಿಗಳು.

ಹೋಮಿ ಜೆ ಬಾಬಾ. ಸರ್ ಸಿ ವಿ ರಾಮನ್. ಮೇಡಂ ಕ್ಯೂರಿ ಮತ್ತು ಬಿಲ್ ಗೇಟ್ಸ್.

3.ಕುಂಭ ರಾಶಿ.

 

ಕುಂಭ ರಾಶಿಯ ಅಧಿಪತಿ ಶನಿ ಗ್ರಹ .ಕುಂಭ ಮತ್ತು ಮಕರ ರಾಶಿಯನ್ನು ಶನಿ ಗ್ರಹವೇ ಆಳುತ್ತದೆ  .ಕುಂಭ ರಾಶಿಯವರು ಸ್ವತಂತ್ರವಾದ ಸ್ವಭಾವವನ್ನು ಮತ್ತು ಮೂಲ ಆಲೋಚನೆಗಳನ್ನು ಸೃಷ್ಟಿ ಮಾಡುತ್ತಾರೆ. ಇವರು ಏನೇ ಹೇಳಿದರೂ ಹೆಚ್ಚು ಅರ್ಥಗರ್ಭಿತವಾಗಿದ್ದು ಇವರ ಮಾತು ಹೆಚ್ಚು ಪ್ರತಿಫಲವಾದದ್ದು ಕೂಡ. ಇವರು ನೈಸರ್ಗಿಕ ಪ್ರವೃತ್ತಿಯನ್ನು ಹೊಂದಿದ್ದು. ಇವರ ದೃಷ್ಟಿಯ ಚಿಂತನೆಯಿಂದಾಗಿ ಸಮಾಜ ಕಾರಿ ಸವಾಲುಗಳನ್ನು ಎದುರಿಸುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಆದ್ದರಿಂದ ಇವರನ್ನು ಈ ಪಟ್ಟಿಗೆ ಸೇರಿಸಲಾಗಿದೆ.

ಕುಂಭ ರಾಶಿಯಲ್ಲಿ ಹುಟ್ಟಿರುವ ಹೆಸರಾಂತ ವ್ಯಕ್ತಿಗಳು.

ಚಾರ್ಲ್ಸ್ ಡಾರ್ವಿನ್ ಜೀವಶಾಸ್ತ್ರಜ್ಞರು, ಗೆಲಿಲಿಯೊ ಗೆಲಿಲಿ ವಿಜ್ಞಾನ  ಮತ್ತು ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬನ್ನು ಕಂಡು ಹಿಡಿದವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top