fbpx
ದೇವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ರೀತಿಯ ಹನುಮಂತನ ಫೋಟೋವನ್ನು ಹಾಕಬಾರದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ರೀತಿಯ ಹನುಮಂತನ ಫೋಟೋವನ್ನು ಹಾಕಬಾರದು.

 

 

ಶಾಸ್ತ್ರಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ದೇವರ ಫೋಟೋಗಳನ್ನು  ಮತ್ತು ಮೂರ್ತಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಹೇಳಲಾಗಿದೆ.

ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದಿರುವ ಅಥವಾ ಯುದ್ಧ ಮಾಡುತ್ತಿರುವ ಫೋಟೋಗಳನ್ನು ಮನೆಯಲ್ಲಿ ಹಾಕಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.ಕಲಿಯುಗದಲ್ಲಿ ಭಕ್ತರ ಭಕ್ತಿಗೆ ಬೇಗ ಕೃಪೆ ತೋರುವ ದೇವರೇ ಹನುಮಂತ ಅಥವಾ ಮಾರುತಿ ಎಂದು ಕರೆಯುವ  ಕಲಿಯುಗದ ದೈವ ಆಂಜನೇಯ  ಸ್ವಾಮಿ.  ಆದರೆ ಹನುಮಂತನ ಕೆಲವು ಮೂರ್ತಿ ಮತ್ತು ಫೋಟೋಗಳನ್ನು ಮನೆಯಲ್ಲಿ ಹಾಕುವುದು ಶುಭವಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.ಅವು ಯಾವುವು ಎಂದು ಇಂದು ನಾವು ತಿಳಿಯೋಣ ಬನ್ನಿ….

ಹನುಮಂತ ಅಸ್ಥಿರವಾಗಿದ್ದು. ಸಂಜೀವಿನಿಯ ಬೆಟ್ಟವನ್ನು ಎತ್ತಿಹಿಡಿದು ಹಾರುತ್ತಿರುವ ಫೋಟೋವನ್ನು ಮನೆಯೊಳಗೆ ಹಾಕಬಾರದು.

 

 

ದುಷ್ಟರನ್ನು ನಾಶ ಮಾಡುವ ಮತ್ತು  ಮಾಡುತ್ತಿರುವ ಮೂರ್ತಿಯನ್ನು ಅಥವಾ ಫೋಟೋವನ್ನು ಮನೆಯೊಳಗೆ ಹಾಕಬೇಡಿ.

ಶ್ರೀರಾಮ  ಮತ್ತು  ಲಕ್ಷ್ಮಣನನ್ನು ಹನುಮಂತನ ಭುಜದ ಮೇಲೆ ಕೂಡಿಸಿಕೊಂಡು  ಹೋಗುತ್ತಿರುವ ಫೋಟೋವನ್ನು ಮನೆಯಲ್ಲಿ ಹಾಕಬೇಡಿ.

 

 

ಹನುಮಂತನ ಲಂಕೆಯನ್ನು ಸುಡುತ್ತಿರುವ ಫೋಟೋವನ್ನು ಮನೆಯಲ್ಲಿ ಹಾಕಬೇಡಿ.

ಅಪಾರ ಶಕ್ತಿಯನ್ನು ಉಳ್ಳವನು ಎನ್ನುವ ರೀತಿಯಲ್ಲಿ   ಬಿಂಬಿತವಾಗಿರುವ ಹನುಮಂತನ ಮೂರ್ತಿ ಅಥವಾ ಫೋಟೋವನ್ನು ಸಹ ಮನೆಯಲ್ಲಿಡುವುದು  ಒಳ್ಳೆಯದಲ್ಲ.

ಹಳದಿ ಬಣ್ಣದ ಬಟ್ಟೆ ತೊಟ್ಟಿರುವ ಯಾವ ಹನುಮಂತನ ಚಿತ್ರವನ್ನು ಸಹ ಮನೆಯಲ್ಲಿ ಇಡಬೇಡಿ.

 

 

ಓದುತ್ತಿರುವ ಮಕ್ಕಳ ಕೋಣೆಯಲ್ಲಿ ಹಳದಿ ಬಣ್ಣದ  ಹನುಮಂತನ ಫೋಟೋ ಹಾಕುವುದು ಶುಭ ಎಂದು ಪರಿಗಣಿಸಲಾಗಿದೆ.

ಶ್ರೀರಾಮನ ಪಾದದ ಅಡಿಯಲ್ಲಿ ಹನುಮಂತನು ಕುಳಿತಿರುವ ಫೋಟೋ ಅಥವಾ ಮೂರ್ತಿಯನ್ನು ಹಾಕುವುದು ಮನೆಗೆ ಶುಭ ತರುವುದು.

 

 

ಮಲಗುವ ಕೋಣೆಯಲ್ಲಿ ಹನುಮಂತನ ಯಾವುದೇ ರೀತಿಯ ಫೋಟೋವನ್ನು ಸಹ ಹಾಕಬಾರದು. ಯಾಕೆಂದರೆ ಹನುಮಂತ ದೇವನು ಬ್ರಹ್ಮಚಾರಿಯ ವ್ರತವನ್ನು ಪಾಲಿಸುವನಾದ್ದರಿಂದ ಹನುಮಂತನ ಫೋಟೋವನ್ನು ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಇಡುವುದು ಒಳ್ಳೆಯದಲ್ಲ ಹಾಗೆ ಶುಭ ಸೂಚನೆಯೂ ಅಲ್ಲ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top