fbpx
ಭವಿಷ್ಯ

ಎಷ್ಟೇ ಕಷ್ಟ ಪಟ್ಟು ದುಡುದ್ರು ಖರ್ಚು ಜಾಸ್ತಿ ಆಗ್ತಿದೆ ಅನ್ನೋರು ವಾಸ್ತು ಶಾಸ್ತ್ರದ ಪ್ರಕಾರ ಈ ಪರಿಹಾರ ಮಾಡ್ಕೊಂಡ್ರೆ ಹಣದ ಕೊರತೆ ಕಾಡೋದಿಲ್ಲ

ವಾಸ್ತು ಶಾಸ್ತ್ರದ ಪ್ರಕಾರ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಕೈಗೆ ತಿಂಗಳ ಸಂಬಳ ಬಂದ ತಕ್ಷಣ ಹೀಗೆ ಮಾಡಿದರೆ ಎಂದಿಗೂ ಹಣದ ಕೊರತೆ ಕಾಡುವುದಿಲ್ಲ ಅದಕ್ಕಾಗಿ ಈ ಸರಳ ಮತ್ತು ಸುಲಭವಾದ  ಉಪಾಯಗಳನ್ನು ಪಾಲಿಸಿದರೆ ಸಾಕು.

ನಮಗೆ ತಿಂಗಳ ಸಂಬಳ ಕೈಗೆ ಬರುತ್ತಿದ್ದಂತೆ ಎಷ್ಟೋ ಸಂತೋಷ ಪಡುತ್ತೇವೆ. ಆದರೆ ಮನೆಯಲ್ಲಿ ಸಾಧಾರಣ ಖರ್ಚು ಪ್ರತಿ ತಿಂಗಳು ಹೆಚ್ಚಾಗುತ್ತಲೇ ಇರುತ್ತದೆ.

 

 

ಹೀಗೆ ಅನಿರೀಕ್ಷಿತ ಖರ್ಚುಗಳು ಅಧಿಕವಾಗಿರುವುದರಿಂದ ಧನನಷ್ಟ ಆಗುವುದಲ್ಲದೆ ಮನೆಯಲ್ಲಿ ಅಶಾಂತಿಯ ವಾತಾವರಣ ಸಹ ಹೆಚ್ಚಾಗುವುದು .ಇದಕ್ಕೆ ಕಾರಣವೇನೆಂದರೆ ಮನೆಯಲ್ಲಿರುವ ಪ್ರತಿ ವಿರೋಧ ಶಕ್ತಿಗಳು ನಮಗೆ ತಿಳಿಯದೇ ಇರುವುದು.

ಇವುಗಳನ್ನು ಮನೆಯಿಂದ  ಹೋಗಲಾಡಿಸಬೇಕು ಎಂದರೆ ಏನು ಮಾಡಬೇಕು ? ಎಂದು ಇಂದು ನಾವು ತಿಳಿಯೋಣ…..

ತಿಂಗಳ ಸಂಪಾದನೆ ಬರುತ್ತಿದ್ದಂತೆಯೇ ಆ ಮನೆಯ ಮಹಿಳೆ ಮೊದಲಿಗೆ ಮನೆಯ ಖರ್ಚಿಗೆ ಬೇಕಾದಷ್ಟು  ದುಡ್ಡನ್ನು ತೆಗೆದುಕೊಳ್ಳಬೇಕು.ನಂತರ ಮನೆಯ ಖರ್ಚಿನ ದುಡ್ಡಿನಲ್ಲಿ ಮೊದಲಿಗೆ ಉಪ್ಪನ್ನು ಖರೀದಿಸಬೇಕು. ಆದರೆ ಉಪ್ಪನ್ನು ಶನಿವಾರದ ದಿನದಂದು ಮಾತ್ರ ಖರೀದಿಸಬಾರದು.

 

ಶುಭ ಶುಕ್ರವಾರದ ದಿನದಂದು ಉಪ್ಪನ್ನು ಖರೀದಿಸಿದರೆ ಆ ತಿಂಗಳ ಖರ್ಚು ತುಂಬುವವರೆಗೂ ಕಡಿಮೆಯಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ .

ಹಾಗೆಯೇ ನೀವು ಮನೆಯನ್ನು ಸ್ವಚ್ಛಗೊಳಿಸಿ ನೆಲವನ್ನು ಒರೆಸುವಾಗ  ಸ್ವಲ್ಪ ಉಪ್ಪನ್ನು ನೀರಿನಲ್ಲಿ ಹಾಕಿ ಸ್ವಚ್ಛ ಮಾಡಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.

 

 

ಮನೆಯಲ್ಲಿ ಯಾರಿಗಾದರೂ ಮನಸ್ಸಿಗೆ ಶಾಂತಿ ಇಲ್ಲವೆಂದು ಯಾರಾದರೂ ಭಾವಿಸುತ್ತಿದ್ದರೆ. ಅಂಥವರು ನೀರಿನಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ಹಾಕಿ ನಂತರ ಅವರ ಪಾದವನ್ನು ಸ್ವಲ್ಪ ಹೊತ್ತು ಆ ನೀರಿನಲ್ಲಿ ಇಡಬೇಕು ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ.

 

 

ಇಷ್ಟೇ ಅಲ್ಲದೆ ಸ್ವಲ್ಪ ಕಲ್ಲು ಉಪ್ಪನ್ನು ಬೆರೆಸಿ ಆ ನೀರಿನಲ್ಲಿ ಸ್ನಾನವನ್ನೂ ಸಹ ಮಾಡಿಕೊಳ್ಳಬಹುದು.

 

 

ಹಾಗೆಯೇ ಶುಕ್ರವಾರದ ದಿನದಂದು ಲಕ್ಷ್ಮಿ ದೇವಿಗೆ ಅಕ್ಕಿ ಮತ್ತು ಚೆಂಡು ಹೂವಿನಿಂದ ಪೂಜೆ ಮಾಡಬೇಕು. ನಂತರ ಪೂಜೆ ಮಾಡಿದ ಅಕ್ಕಿಯನ್ನು ಸ್ವಲ್ಪ ತೆಗೆದುಕೊಂಡು ನಿಮ್ಮ ಪರ್ಸ್ ಅಥವಾ ನಿಮ್ಮ ಮನೆಯಲ್ಲಿ ಹಣವನ್ನು ಇಡುವ ಸ್ಥಳದಲ್ಲಿ ಇಟ್ಟರೆ ನಿಮ್ಮ ಖರ್ಚು ಸಹ ಕಡಿಮೆಯಾಗುವುದು.

ಹೀಗೆ ಮಾಡಿದರೆ ದುಡ್ಡಿನ ಅಭಾವ ನಿಮ್ಮನ್ನು ಎಂದಿಗೂ ಕಾಡುವುದಿಲ್ಲ. ಹಾಗೆಯೇ ಲಕ್ಷ್ಮಿಯ ಅನುಗ್ರಹ ಮತ್ತು ಕೃಪಾಕಟಾಕ್ಷ ಸದಾ ನಿಮ್ಮ ಮೇಲೆ  ಇರುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top