fbpx
ಸಮಾಚಾರ

“ಸುರಿಯುತ್ತಿರುವ ಮಳೆಗೆ ನಾನು ಕೊಡೆ ಹಿಡಿಯಲು ಸಾಧ್ಯವೇ” -ಸಚಿವ ಕೆ.ಜೆ.ಜಾರ್ಜ್ ಪ್ರಶ್ನೆ 

“ಸುರಿಯುತ್ತಿರುವ ಮಳೆಗೆ ನಾನು ಕೊಡೆ ಹಿಡಿಯಲು ಸಾಧ್ಯವೇ” -ಸಚಿವ ಕೆ.ಜೆ.ಜಾರ್ಜ್ ಪ್ರಶ್ನೆ 

 

 

ಬುಧವಾರ ಮಾಧ್ಯಮಗಳಿಗೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಬೆಂಗಳೂರಿನಲ್ಲಿ ಇತ್ತೀಚಿಗೆ ಆಗಿರುವ ಎಲ್ಲಾ ಅಪಘಾತಗಳು “ರಸ್ತೆಗುಂಡಿಗಳಿಂದ ಆಗಿರುವ ಅಪಘಾತಗಳಂತೆ ಚಿತ್ರಿಸಲಾಗಿದೆ, ಎಲ್ಲಾ ಅಪಘಾತಗಳಿಗೂ ರಸ್ತೆಯಲ್ಲಿರುವ ಗುಂಡಿಗಳೇ ಹೊಣೆ ಅಲ್ಲ.. ಎಲ್ಲಾ ಅಪಘಾತಗಳಿಗೂ ರಸ್ತೆಗುಂಡಿಗಳೇ ಕಾರಣ ಎಂದು ಹೇಳಿ ಬೆಂಗಳೂರಿನ ಹೆಸರನ್ನು ಹಾಳುಮಾಡಬೇಡಿ” ಎಂದು ಹೇಳಿದರು.

 

 

’15 ದಿನಗಳ ಒಳಗೆ ಎಲ್ಲಾ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುತ್ತೇವೆ. 3 ತಿಂಗಳ ಒಳಗೆ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡುತ್ತೇವೆ. ರಸ್ತೆಗಳನ್ನು ಹೇಗೆ ಮಾಡುತ್ತೇವೆ ನೀವೇ ನೋಡಿ,, ಮಳೆಗಾಲದಲ್ಲಿ ಹಾಟ್‍ಮಿಕ್ಸ್ ಬಳಸಿ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೋಲ್ಡ್ ಮಿಕ್ಸ್ ಬಳಸಿ ಆದಷ್ಟು ಬೇಗ ಗುಂಡಿಗಳನ್ನು ಮುಚ್ಚುತ್ತೇವೆ..ರಸ್ತೆಗಳನ್ನು ದುರಸ್ತಿ ಮಾಡಲು ಈಗಾಗಲೇ ವರ್ಕ್ ಆರ್ಡರ್ ನೀಡಲಾಗಿದ..”‘ ಎಂದು ಜಾರ್ಜ್ ಹೇಳಿದರು…

 

 

ನಂತರ ಮಾಧ್ಯಮದವರ ಪ್ರಶ್ನೆಗಳು ಎದುರಾದಾಗ “ಕಳೆದ 10 ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ ಅಧಿಕ ಮಳೆಯಾಗಿರುವ ಕಾರಣ ರಸ್ತೆಗಳು ಹಾಳಾಗಿವೆ.. ಸುರಿಯುತ್ತಿಯುವ ಮಳೆಗೆ ನಾನು ಕೊಡೆ ಹಿಡಿಯಲು ಸಾಧ್ಯವೇ ” ಎಂದು ಮಾದ್ಯಮದವರಿಗೆ ಪ್ರಶ್ನಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top