fbpx
ಸಮಾಚಾರ

ಲೇಡೀಸ್ ಟಾಯ್ಲೆಟ್‍ಗೆ ಎಂಟ್ರಿ ಕೊಟ್ಟು ಟ್ರೋಲ್ ಗೆ ಆಹಾರವಾದ ರಾಹುಲ್ ಗಾಂಧಿ..

ಲೇಡೀಸ್ ಟಾಯ್ಲೆಟ್‍ಗೆ ಎಂಟ್ರಿ ಕೊಟ್ಟು ಟ್ರೋಲ್ ಗೆ ಆಹಾರವಾದ ರಾಹುಲ್ ಗಾಂಧಿ..

 

ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿ ಇತ್ತೀಚಿನ ಕೆಲವು ದಿನಗಳಿಂದ ಗುಜರಾತ್‍ನಲ್ಲಿ ಪ್ರಚಾರ ಮಾಡುತ್ತಾ, ಮೋದಿ ಸರ್ಕಾರವನ್ನು ಟೀಕಿಸುತ್ತಾ ಭರ್ಜರಿ ಸುದ್ದಿಯಲ್ಲಿದ್ದಾರೆ. ಆದರೆ ರಾಹುಲ್‌ ಗಾಂಧಿ ಗಡಿಬಿಡಿಯಲ್ಲಿ ಮಹಿಳಾ ಶೌಚಾಲಯಕ್ಕೆ ತೆರಳಿ ಎಡವಟ್ಟು ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.

 

 

ಛೋಟಾ ಉದಯ್‌ಪುರ್‌ನಲ್ಲಿ ಯುವಜನತೆಯೊಂದಿಗಿನ ‘ಸಾಮವಾದ್‌ ಸಂವಾದ’ದಲ್ಲಿ ಪಾಲ್ಗೊಂಡ ನಂತರ ಟೌನ್ ಹಾಲ್‍ನಿಂದ ಹೊರಗೆ ಬಂದು ಲೇಡಿಸ್ ಟಾಯ್ಲೆಟ್ ಗೆ ಹೋಗಿ ಪೇಚಿಗೆ ಸಿಲುಕಿದ್ದಾರೆ. ಅಲ್ಲಿ ಪುರಷ ಮತ್ತು ಮಹಿಳೆಯರ ಟಾಯ್ಲೆಟ್ ಎಂದು ಸೂಚಿಸಲು ಯಾವುದೇ ನಾಮಫಲಕಗಳು ಇರಲಿಲ್ಲ ಎಂದು ತಿಳಿದುಬಂದಿದೆ.. ಆದರೂ ‘ಮಹಿಳಾ ಮಾತಾವೋ ಶೌಚಾಲಯ’ ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು…

 

 

ರಾಹುಲ್ ಗಾಂಧಿಯವರಿಗೆ ಗುಜರಾತಿ ಭಾಷೆ ಓದಲು ಬಾರದೆ ಇರುವುದರಿಂದ ರಾಹುಲ್ ಮಹಿಳಾ ಶೋಚಾಲಯಕ್ಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ…ರಾಹುಲ್‌ ಹೊರ ಬರುತ್ತಿರುವಂತೆಯೇ ಅಲ್ಲಿದ್ದ ಜನರು ನಗಲಾರಂಭಿಸಿದ್ದಾರೆ ಮತ್ತು ಮಾದ್ಯಮದವರು ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top