fbpx
ಸಾಧನೆ

ಅಂದು ಶಾಲೆ ಮತ್ತು ಮನೆಯಿಂದ ಹೊರಹಾಕಲ್ಪಟ್ಟ ಮಂಗಳಮುಖಿ ಇಂದು ದೇಶದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆ..

ಅಂದು ಶಾಲೆ ಮತ್ತು ಮನೆಯಿಂದ ಹೊರಹಾಕಲ್ಪಟ್ಟ ಮಂಗಳಮುಖಿ ಇಂದು ದೇಶದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆ..

 

 

ಪಶ್ಚಿಮ ಬಂಗಾಳದಲ್ಲಿ ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಜನಿಸಿದ ಜೊಯೀತ ಮೊಂಡಲ್ ಅವರು ತಾರತಮ್ಯದಿಂದಾಗಿ ಸಾಕಷ್ಟು ತಾರತಮ್ಯವನ್ನು ಅನುಭವಿಸಿದರು. ಹುಡುಗನಾಗಿ ಹುಟ್ಟಿ ಹುಡುಗಿಯಾಗಿ ಬದಲಾದ ಈಕೆ ತನ್ನ ಚಿಕ್ಕ ವಯಸಿನಲ್ಲಿ ಶಾಲೆಯಿಂದ ಹೊರಬಂದು ಬಸ್ ಸ್ಟಾಪ್ ನಲ್ಲಿ ನಿದ್ದೆ ಮಾಡುತ್ತಿದ್ದರು, ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಆದರೆ ಅವುಗಳನ್ನೆಲ್ಲಾ ಮೆಟ್ಟಿನಿಂತು ಇಂದು ದೇಶದ ಮೊದಲ ಮಂಗಳಮುಖಿ ಜಡ್ಜ್ ಆಗಿ ಹೊರಹೊಮ್ಮಿದ್ದಾರೆ..

 

 

ಜೋಯಿತಾ ಕೋಲ್ಕತಾದಲ್ಲಿ ಜನಿಸಿದರು. ಅವರಿಗೆ ಅವರ ಮೇಲೆ ಹೇರಿದ ಲಿಂಗ ರೂಢಿಗಳನ್ನು ಅನುಸರಿಸಲು ಸಾಧ್ಯವಾಗಲಿಲ್ಲ ಲಿಂಗ ಬದಲಾವಣೆಗೊಂಡ ಈಕೆಯನ್ನ ಸಮಾಜದಲ್ಲಿ ತಿರಸ್ಕಾರ ಮನೋಭಾವದಿಂದ ನೋಡುತ್ತಿದ್ದರಂತೆ. ಸ್ವತಃ ಇವರ ಮನೆಯವರೇ ಇವರನ್ನು 2009ರಲ್ಲಿ ಮನೆಯಿಂದ ಹೊರಹಾಕಿದ್ದರು. ಮನೆಯಿಂದ ಹೊರಬಂದ ಜೊಯೀತ ಬಾಂಗ್ಲಾದೇಶದ ಗಡಿಭಾಗವಾದ ಉತ್ತರ ದಿನಜ್ ಪುರ್ ಜಿಲ್ಲೆಯ ಇಸ್ಲಾಂಪುರ್ ನಲ್ಲಿ ನೆಲೆಸುತ್ತಾರೆ. ಅಲ್ಲಿ ಅವರಿಗೆ ಎದುರಾದ ನೋವು ಕಷ್ಟಗಳು ಅವರನ್ನು ಗಟ್ಟಿಗೊಳಿಸಿ ಅವರಲ್ಲಿ ಛಲವನ್ನು ತುಂಬುತ್ತದೆ..

 

 

ಅಲ್ಲಿಂದ ಏಳು ವರ್ಷಗಳವರೆಗೆ ಆ ಪ್ರದೇಶದಲ್ಲಿ ದಿನಜ್ ಪುರ್ ನೊಟುನ್ ಅಲೊ ಎಂಬ ಸಂಘಟನೆಯನ್ನು ಕಟ್ಟಿ ಅವರೊಂದಿಗೆ ಬದುಕುತ್ತಾರೆ. ಈಗ ಆ ಸಂಘಟನೆಯಲ್ಲಿ ಸುಮಾರು 2,200 ಮಂದಿ ತೃತೀಯಲಿಂಗಿಗಳಿದ್ದಾರೆ.ಏಕಕಾಲದಲ್ಲಿ, ಅವರು ಖಾಸಗಿಯಾಗಿ ಓದಿಕೊಂಡು ತನ್ನ ಅಧ್ಯಯನಗಳನ್ನು ಪೂರ್ಣಗೊಳಿಸಿ ಕಾನೂನಿನಲ್ಲಿ ಪದವಿ ಪಡೆದರು.2010 ರಲ್ಲಿ, ಅವರು ಮತದಾರರ ID ಯನ್ನು ಪಡೆದುಕೊಳ್ಳಲು ತನ್ನ ಜಿಲ್ಲೆಯ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

 

 

ಅವರೂ ಒಮ್ಮೆ ಹೋಟೆಲ್ ಗೆ ಹೋಗಿ ರೂಮ್ ಕೇಳಿದಾಗ ಹೋಟೆಲ್ ನಲ್ಲಿ ರೂಮ್ ಕೊಡದೆ ಅವರನ್ನು ಅವಮಾನ ಮಾಡಲಾಗಿತ್ತು ಆಗ ಅವರು ಬಸ್ ಸ್ಟಾಪ್ ನಲ್ಲೆ ಉಳಿದು ಅಲ್ಲೇ ನಿದ್ರೆ ಮಾಡುವ ಅನಿವಾರ್ಯತೆ ಎದುರಾಗಿತ್ತು.ಕೆಲವೇ ವರ್ಷಗಳ ಹಿಂದೆ ಅವರು ರಾತ್ರಿ ಕಳೆಯಲು ಬಳಸಿದ ಬಸ್ ನಿಲ್ದಾಣದಿಂದ ಈ ನ್ಯಾಯಾಲಯವು ಕೆಲವೇ ಹೆಜ್ಜೆಗಳ ದೂರದಲ್ಲಿದೆ ಎಂದು ಅವರು ಹೇಳುತ್ತಾರೆ..ಕಳೆದ ಜುಲೈ 8ರಂದು ಇಸ್ಲಾಂಪುರ್ ನ ಲೋಕ ಅದಾಲತ್ ನ ನ್ಯಾಯಾಧೀಶೆಯಾಗಿ ಜೊಯಿತಾ ನೇಮಕಗೊಂಡಾಗ ತೃತೀಯಲಿಂಗಿಗಳ ಸಮುದಾಯದಲ್ಲಿ ನಿಜಕ್ಕೂ ಹರ್ಷದ ವಾತಾವರಣ ಕಂಡಿತು..

 

 

“ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದು ನಿಲ್ಲುವವರೆಗೆ ವೈಯಕ್ತಿಕ ಬೆಳವಣಿಗೆಗೆ ಅರ್ಥವಿಲ್ಲ. ತೃತೀಯ ಲಿಂಗಿಗಳಲ್ಲಿ ಬಹುತೇಕರು ವಿದ್ಯಾವಂತರಾಗಿರದಿದ್ದರೂ ಕೂಡ ಅವರನ್ನು ಗ್ರೂಪ್ ಡಿ ನೌಕರಿಗೆ ನೇಮಕ ಮಾಡಿಕೊಳ್ಳಬಹುದು.ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಸಮುದಾಯದವರೇ ಕಾರಣ.ಸರ್ಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಂಡರೆ ನಮ್ಮ ಪರಿಸ್ಥಿತಿಯೂ ಉತ್ತಮವಾಗುತ್ತದೆ.” ಎಂದು ಜೊಯೀತ ಹೇಳುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top