fbpx
ಸಮಾಚಾರ

ವಿಶ್ವದ 2ನೇ ಬಹುದೊಡ್ಡ ಥಿಯೇಟರ್ ‘ಕಪಾಲಿ’ ಥಿಯೇಟರ್ ಮುಚ್ಚಿಹೋಗಲು ಅಸಲಿ ಕಾರಣ ಏನು ಗೊತ್ತಾ?

ವಿಶ್ವದ 2ನೇ ಬಹುದೊಡ್ಡ ಥಿಯೇಟರ್ ‘ಕಪಾಲಿ’ ಇನ್ನು ನೆನಪು ಮಾತ್ರ…ಇವತ್ತೇ ಕೊನೆ ಪ್ರದರ್ಶನ.

 

 

ಏಷ್ಯಾದಲ್ಲೇ ಮೊದಲ ಬಾರಿಗೆ ‘ಸಿನೆರಾಮ್‌ ತಂತ್ರಜ್ಞಾನ’ ಅಳವಡಿಸಿಕೊಂಡು 49 ವರ್ಷ ಸಿನಿಪ್ರಿಯರ ನೆಚ್ಚಿನ ಚಿತ್ರಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದ ಗಾಂಧಿನಗರದ ಪ್ರಸಿದ್ಧ ‘ಕಪಾಲಿ’ ಚಿತ್ರಮಂದಿರ ಶೀಘ್ರದಲ್ಲೇ ನೆಲಸಮವಾಗಲಿದೆ. ಗುರುವಾರ ರಾತ್ರಿಯ ಪ್ರದರ್ಶನದೊಂದಿಗೆ ಇನ್ಮುಂದೆ ಕೇವಲ ನೆನಪಾಗಿ ಉಳಿಯಲಿದೆ. ಕಪಾಲಿ ಚಿತ್ರಮಂದಿರಲ್ಲಿ ನಾಳೆಯಿಂದ ಚಿತ್ರಪ್ರದರ್ಶನ ಇರುವುದಿಲ್ಲ..

 

 

ಕೆಲವೇ ದಿನಗಳಲ್ಲೇ ಕಪಾಲಿ ಚಿತ್ರಮಂದಿರ ನೆಲಸಮವಾಗಲಿದ್ದು ಈ ಜಾಗದಲ್ಲಿ ಬಹುಮಹಡಿ ಕಟ್ಟಡದ ಮಾಲ್‌ ತಲೆ ಎತ್ತಲಿದೆ. 1,465 ಆಸನಗಳನ್ನು ಹೊಂದಿದ್ದ ಕಪಾಲಿ ಥಿಯೇಟರ್ ಅನ್ನು 1968ರಲ್ಲಿ ಪ್ರಾರಂಭಿಸಲಾಗಿತ್ತು ಏಷ್ಯಾದಲ್ಲೇ ಬಹುದೊಡ್ಡ ಸಿಂಗಲ್ ಸ್ಕ್ರೀನ್ ಥಿಯೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು..ಆರ್ಥಿಕ ಕಾರಣಗಳಿಂದ ಕಪಾಲಿ ಥಿಯೇಟರ್ ಅನ್ನು ಕೆಡವಲು ನಿರ್ಧರಿಸಿರುವುದಾಗಿ ಥಿಯೇಟರ್ ಓನರ್ ತಿಳಿಸಿದ್ದಾರೆ…

 

 

ನವಗ್ರಹ,ವೀರ ಮದಕರಿ,ಜೋಗಯ್ಯ,ರಾಜಾಹುಲಿ,ಮುಂಗಾರುಮಳೆ-2,ಚೌಕ ಸೇರಿದಂತೆ ಅನೇಕ ಚಿತ್ರಗಳು ಈ ಚಿತ್ರಮಂದಿರದಲ್ಲಿ ರೆಲೀಸ್ ಆಗಿ ಸೂಪರ್ ಹಿಟ್ ಆಗಿದ್ದವು. ಪ್ರಸ್ತುತ ಕಪಾಲಿ ಥಿಯೇಟರ್ ನಲ್ಲಿ ಹುಲಿರಾಯ ಚಿತ್ರ ಪ್ರದರ್ಶನ ವಾಗುತ್ತಿದ್ದು,, ಹುಲಿರಾಯ ಚಿತ್ರವೇ ಕಪಾಲಿ ಥಿಯೇಟರ್ ನ ಕೊನೆಯ ಪ್ರದರ್ಶನವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top