ತಿಂಡಿ ತೀರ್ಥ

ಬೆಳಗಿನ ಉಪಹಾರಕ್ಕೆ ಕರಾವಳಿಯ ನೀರ್‍ದೋಸೆ ಅತಿ ಸುಲಭವಾಗಿ ಮಾಡುವ ಬಗೆ

ನೀರ್ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು:

  1. 2 ಪಾವು ಅಕ್ಕಿ
  2. ಅರ್ಧ ಹೋಳು ಕಾಯಿ
  3. ಉಪ್ಪು
  4. ನೀರು
  5. ಎಣ್ಣೆ

ನೀರ್ದೋಸೆ ಮಾಡುವ ವಿಧಾನ:

*ರಾತ್ರಿ 2 ಪಾವು ಅಕ್ಕಿಯನ್ನು ನೀರಿನಲ್ಲಿ ನೆನೆಹಾಕಿಕೊಳ್ಳಿ.

*ಮಾರನೆ ದಿನ ಬೆಳಗ್ಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದಕ್ಕೆ ಅರ್ದ ಹೋಳು ಕಾಯಿ ತುರಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

*ಆನಂತರ ರುಚಿಗೆ ತಕ್ಕಶ್ಟು ಉಪ್ಪು, ನೀರು ಹಾಕಿ ತೆಳ್ಳಗೆ ಕಲಸಿಕೊಳ್ಳಿ. ಬಳಿಕ, ಚೆನ್ನಾಗಿ ಕಾದ ಕಾವಲಿ ಮೇಲೆ ಎಣ್ಣೆ ಸವರಿ ಸೌಟಿನಿಂದ ಎರಚಿ.

*ಅದಕ್ಕೆ ಮೇಲಿಂದ ಕಾಲು ಚಮಚ ಎಣ್ಣೆಯನ್ನು ಹಾಕಿ. ದೋಸೆ ಬೆಂದ ಬಳಿಕ, ಸೌಟಿನಿಂದ ದೋಸೆಯನ್ನು ಮಗುಚಿ ಹಾಕಿ ಕೊಂಚ ಬೇಯಿಸಿ ತೆಗೆದರೆ ಆಯಿತು,

*ಬಿಸಿ ಬಿಸಿ ನೀರ್‍ದೋಸೆ ತಿನ್ನಲು ಅಣಿಯಾದಂತೆ. ನೀವು ಮಾಡಿದ ದೋಸೆಯನ್ನು ಕಾಯಿಚಟ್ನಿಯೊಂದಿಗೆ ತಿನ್ನಲು ನೀಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top