fbpx
ಭವಿಷ್ಯ

ಅಕ್ಟೋಬರ್ 13: ನಿತ್ಯಭವಿಷ್ಯ ಮತ್ತು ಪಂಚಾಂಗ

ಶುಕ್ರವಾರ, ೧೩ ಅಕ್ಟೋಬರ್ ೨೦೧೭
ಸೂರ್ಯೋದಯ : ೦೬:೧೩
ಸೂರ್ಯಾಸ್ತ : ೧೭:೫೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಶ್ವಯುಜ
ಪಕ್ಷ : ಕೃಷ್ಣ ಪಕ್ಷ
ತಿಥಿ : ನವಮೀ
ನಕ್ಷತ್ರ : ಪುನರ್ವಸು
ರಾಹು ಕಾಲ: ೧೦:೩೭ – ೧೨:೦೫
ಗುಳಿಕ ಕಾಲ: ೦೭:೪೧ – ೦೯:೦೯
ಯಮಗಂಡ: ೧೫:೦೨ – ೧೬:೩೦

ಮೇಷ (Mesha)

 

ಅಜ್ಞಾನವನ್ನು ನೀಗಿಸುವ ನಿಮ್ಮ ಕ್ರಿಯಾಶೀಲತೆಯು ನಿಮ್ಮ ಬೆಳವಣಿಗೆಗೆ ಸಾರ್ಥಕ ಕಾಣಿಕೆಯೊಂದನ್ನು ನೀಡಲಿದೆ.ಪ್ರತಿಯೊಂದು ತೊಂದರೆಗೆ, ಸಂಕಷ್ಟಕ್ಕೆ ಪರಿಹಾರವಿದ್ದೇ ಇರುತ್ತದೆ. ಅದನ್ನು ಶ್ರಮಪಟ್ಟು ಕಂಡುಕೊಳ್ಳಬೇಕಾದ ಅಗತ್ಯ ನಮಗಿರುತ್ತದೆ. ಯಾವುದನ್ನೇ ಆಗಲಿ ಪ್ರತಿಷ್ಠೆಯನ್ನಾಗಿ ಪರಿಗಣಿಸದೆ, ನಾವೂ ಸಮಾಜದ ಒಂದು ಭಾಗವೆಂದು ಅಂದುಕೊಂಡರೆ ಸಮಸ್ಯೆ ಸಮಸ್ಯೆಯಾಗಿ ಇರುವುದೇ ಇಲ್ಲ.

ವೃಷಭ (Vrushabh)

ಪರದಾಟ ಇದೆ. ಮನಸಿನ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆ ಇದೆ, ಹೊಸ ವಿಚಾರವೊಂದನ್ನು ರ್ಚಚಿಸಲು ಅವಸರ ಮಾಡದಿರಿ. ಕೈಯಲ್ಲಿರುವ ಕೆಲಸ ಮುಗಿಸಲು ಯತ್ನಿಸಿ. ಸಿದ್ಧಿ ಇದೆ.

ಮಿಥುನ (Mithuna)

ಎಲ್ಲರ ವಿಶ್ವಾಸವನ್ನು ಗಳಿಸಿಕೊಳ್ಳುವತ್ತವೂ ನಿಮ್ಮ ಚಿತ್ತವಿರಲಿ, ಖರ್ಚುವೆಚ್ಚಗಳನ್ನು ನಿಭಾಯಿಸುವುದು ಕಷ್ಟದ ವಿಷಯವೇ ಆಗಿರುತ್ತದೆ. ಕೆಲವು ವಿಚಾರಗಳಿಗೆ ಕತ್ತರಿ ಇಡಿ.

ಕರ್ಕ (Karka)

ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾದರೂ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಯೋಗ್ಯ ವಯಸ್ಕರ ವೈವಾಹಿಕ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲಿವೆ. ಆರೋಗ್ಯದಲ್ಲಿ ಜಾಗ್ರತೆ.ಸಾಲ ಕೇಳಲು ಹೋಗದಿರಿ, ಸಿಗುವುದಿಲ್ಲ. ವೃಥಾ ಓಡಾಟ ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳುಗೆಡವುತ್ತದೆ.

ಸಿಂಹ (Simha)

ವ್ಯಾಪಾರ, ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಅದೇ ರೀತಿಯಲ್ಲಿ ಎಷ್ಟೋ ವಿಚಾರಗಳು ಅಚ್ಚರಿಯ ರೀತಿಯಲ್ಲಿ ಕಾರ್ಯಗತವಾಗುತ್ತವೆ. ಉದ್ಯೋಗಿಗಳಿಗೆ ಆರ್ಥಿಕವಾಗಿ ಮುಂಭಡ್ತಿ ಇದೆ.

ಕನ್ಯಾರಾಶಿ (Kanya)

ಬಹಳ ದಿನಗಳಿಂದಲೂ ಕಾಲು ಕೆದರಿ ಜಗಳ ಮಾಡುವ ಯೋಚನೆ ಹಾಕಿರುವ ಜನರನ್ನು ಮೌನದಿಂದ ಸಾಗಹಾಕಿ.ಸಂಚಾರದಲ್ಲಿ ದೇಹಾ ರೋಗ್ಯದ ಬಗ್ಗೆ ಕೂಡಾ ಜಾಗ್ರತೆ ವಹಿಸಿರಿ.

ತುಲಾ (Tula)

ನಿಮಗೆ ಸಂಬಂಧ ಇರದ ವಿಚಾರಗಳಿಗೆ ತಲೆ ಹಾಕದೇ ಇದ್ದಲ್ಲಿ ವಾರ ಪೂರಾ ಸಂತೋಷ, ನೆಮ್ಮದಿ ಇದೆ, ಮಹಿಳಾ ವರ್ಗದವರಿಗೆ ಅನಾವಶ್ಯಕ ಉದ್ವೇಗ ಕಂಡು ಬಂದೀತು.

ವೃಶ್ಚಿಕ (Vrushchika)

ವ್ಯಾಪಾರ ವರ್ಗದ ವರಿಗೆ ಲಾಭದಾಯಕ ಆದಾಯವಿರುವುದು. ಶ್ರೀ ದೇವತಾ ದರ್ಶನ ಭಾಗ್ಯವಿದೆ,ನಿಮ್ಮ ಕೆಲಸದ ಸ್ಥಳದಲ್ಲಿ ಅನಪೇಕ್ಷಿತವಾದ ಕಲಹವೊಂದು ಉದ್ಭವಿಸಬಹುದಾಗಿದೆ. ಆದಷ್ಟು ಜಾಗ್ರತರಾಗಿರಿ.

ಧನು ರಾಶಿ (Dhanu)

ವಿಶೇಷ ವ್ಯಕ್ತಿಯೊಬ್ಬರ ಪರಿಚಯ ಅಥವಾ ದರ್ಶನ ಭಾಗ್ಯ ಒದಗಿ ಬರುವುದು. ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ಮೂಡಿ ಪ್ರಗತಿ ಕಾಣುವಿರಿ. ಸೋದರರ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ.

ಮಕರ (Makara)

ಸ್ವಲ್ಪ ಪ್ರಮಾಣದ ಪ್ರಯತ್ನ, ಪ್ರಭಾವ, ಜಾಣ್ಮೆಯನ್ನು ಬಳಸಬೇಕಾಗುತ್ತದೆ , ಹಿರಿಯರ ಆಶೀರ್ವಾದದಿಂದ ಸಂತೃಪ್ತ ಜೀವನ ನಿಮ್ಮದಾಗಲಿದೆ. ಹೊಸ ಹೊಸ ಯೋಜನೆಗಳನ್ನು ಆರಂಭಿಸಲು ಸಕಾಲವಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು.

ಕುಂಭರಾಶಿ (Kumbha)

ಅಪ್ಪ ಮಕ್ಕಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ. ಅನವಶ್ಯಕ ಕೆಲಸ ಕಾರ್ಯಗಳಲ್ಲಿ ತೊಡಗದಿರುವುದು ಉತ್ತಮ. ಶುಭಕಾರ್ಯಗಳಲ್ಲಿ ಆತುರತೆಯಿಂದಾಗಿ ತೊಂದರೆ ಉಂಟಾಗಬಹುದು , ಶ್ರಮಕ್ಕೆ ತಕ್ಕ ಪ್ರತಿಫಲ ಮಾತ್ರ ಲಭಿಸುತ್ತಿರುವ ಸಮಾಧಾನ ಇರುತ್ತದೆ.

ಮೀನರಾಶಿ (Meena)

ಎಷ್ಟೋ ವಿಚಾರಗಳು ಅಚ್ಚರಿಯ ರೀತಿಯಲ್ಲಿ ಕಾರ್ಯಗತವಾಗುತ್ತವೆ.  ಹಿರಿಯರ ಸಲಹೆ, ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರದಿಂದ ಗಂಡಾಂತರ. ಹಿತ ಶತ್ರುಗಳಿಂದ ಸಮಸ್ಯೆ ಎದುರಿಸಬೇಕಾದೀತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top