ತಿಂಡಿ ತೀರ್ಥ

ಬೆಳಗಿನ ಟಿಫನ್’ಗೆ ಸ್ವೀಟ್ ಕಾರ್ನ್ ಚಿತ್ರಾನ್ನ ಮಾಡುವ ವಿಧಾನ

ಸ್ವೀಟ್ ಕಾರ್ನ್ ಚಿತ್ರಾನ್ನ ಮಾಡಲು ಬೇಕಾಗುವ ಸಾಮಗ್ರಿಗಳು :

*ಅಕ್ಕಿ : 1 1/4 ಕಪ್

*ಎಣ್ಣೆ : 3-4 ಚಮಚ

*ಹಸಿಮೆಣಸಿನ ಕಾಯಿ : 2-3

*ಕರಿಬೇವು : 1 ಎಸಳು

*ಉದ್ದಿನ ಬೇಳೆ : 1/2 ಚಮಚ

*ಸಾಸಿವೆ : 1/2 ಚಮಚ

*ಸ್ವೀಟ್ ಕಾರ್ನ್ : 1 ಕಪ್

*ನಿಂಬೆ ರಸ : 1-2 ಚಮಚ

*ಅರಿಶಿನ ಪುಡಿ : 1/4 ಚಮಚ

*ಸಕ್ಕರೆ : 1/2 ಚಮಚ

*ತೆಂಗಿನ ತುರಿ : 3 ಚಮಚ

*ಕೊತ್ತಂಬರಿ ಸೊಪ್ಪು : 1/2 ಚಮಚ

*ಉಪ್ಪು : ರುಚಿಗೆ

ಸ್ವೀಟ್ ಕಾರ್ನ್ ಚಿತ್ರಾನ್ನ ಮಾಡುವ ವಿಧಾನ :

*ಅಕ್ಕಿಯಿಂದ ಉದುರಾದ ಅನ್ನ ಮಾಡಿಕೊಳ್ಳಿ.

*ಸ್ವೀಟ್ ಕಾರ್ನ್ ಗೆ ಸ್ವಲ್ಪವೇ ಉಪ್ಪು ಹಾಕಿ ಬೇಯಿಸಿ ಬಸಿದುಕೊಳ್ಳಿ.

*ಇತ್ತ ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಉದ್ದಿನ ಬೇಳೆ ಹಾಕಿ ಹೊಂಬಣ್ಣ ಬಂದ ಮೇಲೆ ಸಾಸಿವೆ ಹಾಕಿ ಚಿಟಪಟಾಯಿಸಿ.

*ಇದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಅರಿಶಿನ ಪುಡಿ ಹಾಕಿ, ಬೇಯಿಸಿದ ಕಾರ್ನ್ ಹಾಕಿ ಸ್ವಲ್ಪ ಫ್ರೈ ಮಾಡಿ.

*ಇದಕ್ಕೆ ತೆಂಗಿನ ತುರಿ ಹಾಕಿ ಅರ್ಧ ನಿಮಷ ಫ್ರೈ ಮಾಡಿಕೊಂಡು ನಿಂಬೆ ರಸ, ಉಪ್ಪು ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ. ಈಗ ಕೊತ್ತಂಬರಿ ಸೊಪ್ಪು, ಅನ್ನ ಹಾಕಿ ಕಲಸಿದರೆ ಸ್ವೀಟ್ ಕಾರ್ನ್ ರೈಸ್ ಸವಿಯಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top