fbpx
ಭವಿಷ್ಯ

14 ಅಕ್ಟೋಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೧೪ ಅಕ್ಟೋಬರ್ ೨೦೧೭
ಸೂರ್ಯೋದಯ : ೦೬:೧೩
ಸೂರ್ಯಾಸ್ತ : ೧೭:೫೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಶ್ವಯುಜ
ಪಕ್ಷ : ಕೃಷ್ಣ ಪಕ್ಷ
ತಿಥಿ : ದಶಮೀ
ನಕ್ಷತ್ರ : ಪುಷ್ಯ
ಯೋಗ : ಸಾಧ್ಯ
ಅಮೃತಕಾಲ : ೨೮:೪೭+ – ೩೦:೨೧+

ರಾಹು ಕಾಲ: ೦೯:೦೯ – ೧೦:೩೭
ಗುಳಿಕ ಕಾಲ: ೦೬:೧೩ – ೦೭:೪೧
ಯಮಗಂಡ: ೧೩:೩೩ – ೧೫:೦೧

ಮೇಷ (Mesha)

ನಿಮ್ಮ ಕರ್ತವ್ಯನಿಷ್ಠೆ ಪ್ರಯತ್ನಶೀಲತೆ ಆತ್ಮವಿಶ್ವಾಸ ನಿಮಗೆ ನಿಶ್ಚಿತ ರೂಪದಲ್ಲಿ ಫ‌ಲ ನೀಡಲಿದೆ. ಆದರೂ ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿರಿ. ಮನೆಯಲ್ಲಿ ಶ್ರೀ ದೇವತಾ ಅನುಗ್ರಹಕ್ಕಾಗಿ ದಿನನಿತ್ಯ ಪ್ರಾರ್ಥಿಸುವುದು ಅಗತ್ಯ.

 

ವೃಷಭ (Vrushabh)


ದೂರ ಸಂಚಾರದಲ್ಲಿ ಅಡೆತಡೆಗಳು ಆಗಾಗ ತೋರಿಬಂದರೂ ನಿಮ್ಮ ಪ್ರಯತ್ನಬಲ ಕಾರ್ಯಶೀಲತೆಗೆ ನಿಶ್ಚಿತ ರೂಪದಲ್ಲಿ ಸದ್ಯದಲ್ಲೇ ಫ‌ಲ ಸಿಗಲಿದೆ. ಉದರ, ಬೆನ್ನು, ಆಹಾರದ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯವಿದೆ.

 

ಮಿಥುನ (Mithuna)


ಸಾಂಸಾರಿಕವಾಗಿ ಉತ್ತಮ ಅಭಿವೃದ್ಧಿ ತೋರಿಬಂದರೂ ವೈಯಕ್ತಿಕವಾಗಿ ನಿಮ್ಮ ಸಹಕಾರ, ಹೊಂದಾಣಿಕೆ ಅತೀ ಅಗತ್ಯವಿದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾದರೂ ಜಾಗ್ರತೆ ವಹಿಸುವ ಪ್ರಸಂಗ ತೋರಿಬಂದೀತು.

 

ಕರ್ಕ (Karka)


ಯೋಗ್ಯ ವಯಸ್ಕರ ವಿವಾಹ ಪ್ರಸ್ತಾವಗಳು ಕಂಕಣಬಲವನ್ನು ತಂದುಕೊಟ್ಟಾವು. ದಾಯಾದಿಗಳ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಇಟ್ಟುಕೊಳ್ಳದಿರಿ. ಕುಲದೇವರ ಸೇವಾಭಾಗ್ಯದಿಂದ ನಿಮಗೆ ಸಮಾಧಾನ ಸಿಗಲಿದೆ.

 

ಸಿಂಹ (Simha)


ಆಸ್ತಿ ವಿವಾದಗಳಿಂದ ಮುಕ್ತಿಯ ಸಾಧ್ಯತೆ. ಆರೋಗ್ಯದಲ್ಲಿ ಕೊಂಚ ಏರುಪೇರು ಸಂಭವಿಸಬಹುದು. ಕುಲದೇವತಾ ಸೇವೆಯಿಂದ ನಿಯೋಜಿತ ಕೆಲಸಗಳು ಪೂರ್ಣಗೊಳ್ಳುವವು.

 

ಕನ್ಯಾರಾಶಿ (Kanya)


ವಿಶೇಷ ವ್ಯಕ್ತಿಯೊಬ್ಬರ ಪರಿಚಯ ಅಥವಾ ದರ್ಶನ ಭಾಗ್ಯ ಒದಗಿ ಬರುವುದು. ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ಮೂಡಿ ಪ್ರಗತಿ ಕಾಣುವಿರಿ. ಸೋದರರ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ.

 

ತುಲಾ (Tula)


ಹಿತ ಶತ್ರುಗಳ ಬಾಧೆ ಉಂಟಾಗುವ ಸಾಧ್ಯತೆ. ಮಹಿಳೆಯಿಂದ ಆತಂಕದ ಕ್ಷಣ ನಿರ್ಮಾಣವಾಗಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ. ಸಾಂಸ್ಕೃತಿಕ ಕಾರ್ಯಗಳಲ್ಲಿ ಭಾಗಿಯಾಗುವ ಅವಕಾಶ ದೊರಕಲಿದೆ.

 

ವೃಶ್ಚಿಕ (Vrushchika)


ಗೃಹ ಸುಖ ಉತ್ತಮವಿರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಉತ್ತಮ ಆದರೂ ಜಾಗ್ರತೆ ವಹಿಸಿರಿ. ಗುರು ಹಿರಿಯರ ಮಾರ್ಗದರ್ಶನ ಸಾಧಕವಾದೀತು. ವಾಹನ ಖರೀದಿಗೆ ಸಕಾಲ.

 

ಧನು ರಾಶಿ (Dhanu)


ದೇವತಾನುಗ್ರಹ ಇರುವುದರಿಂದ ಅದರ ಸದುಪಯೋಗ ಪಡೆಯಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳ ಚಿಂತನೆ ಕಾರ್ಯಗತವಾದೀತು. ದಾಂಪತ್ಯದಲ್ಲಿ ಸಂತಾನ ಭಾಗ್ಯದ ಯೋಗವು ಕಂಡುಬರಲಿದೆ.

ಮಕರ (Makara)


ಆಗಾಗ ಧನಾಗಮನ, ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡರೂ ಸದ್ಯದಲ್ಲೇ ಮುನ್ನಡೆ ಗೋಚರಕ್ಕೆ ಬರಲಿದೆ ವಿದ್ಯಾರ್ಥಿಗಳು ಉತ್ತಮ ಅಭ್ಯಾಸಬಲವನ್ನು ಮಾಡತಕ್ಕದ್ದು. ಅತಿಥಿಗಳ ಆಗಮನವಿದೆ.

ಕುಂಭರಾಶಿ (Kumbha)


ಮಾನಸಿಕ ಅಸ್ಥಿರತೆ ಕಾಡಲಿದೆ. ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಹಿರಿಯರ ಸೂಕ್ತ ಸಲಹೆಗಳು ಮುನ್ನಡೆಗೆ ಸಾಧಕವಾಗಲಿವೆ. ವೃತ್ತಿ ರಂಗದಲ್ಲಿ ಮುನ್ನಡೆ ನಿಮ್ಮ ಅಭಿವೃದ್ಧಿಗೆ ಪೂರಕವಾಗಲಿದೆ.

 

ಮೀನರಾಶಿ (Meena)


ದೇಹಾರೋಗ್ಯದ ಬಗ್ಗೆ ಆಗಾಗ ಗಮನ ಹರಿಸಬೇಕಾದೀತು. ಎಲ್ಲಾ ಶುಭ ಮಂಗಲ ಕಾರ್ಯಗಳಿಗೆ ಇದು ಸಕಾಲವಾದ ಕಾರಣ ಇದರ ಸದುಪಯೋಗಿಸಿಕೊಳ್ಳಿರಿ. ಆಗಾಗ ಖರ್ಚುವೆಚ್ಚಗಳು ತೋರಿಬಂದರೂ ಧನಾಗಮನ ಇದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top