fbpx
ಆರೋಗ್ಯ

ಬೊಜ್ಜು ಕರಗಿಸೋಕೆ ಇಷ್ಟು ಮಾಡಿದ್ರೆ ಸಾಕು , ಒಳ್ಳೆ ಸಪೂರ ಮೈಕಟ್ಟು ನಿಮ್ಮದಾಗುತ್ತೆ

ಹೊಟ್ಟೆಯ ಮೇಲಿರುವ ಕೊಬ್ಬು ಎಷ್ಟು ಕಷ್ಟ ಪಟ್ಟರು ಕರಗುವುದಿಲ್ಲ ಅದಕ್ಕಾಗಿ ಈ ಆಯುರ್ವೇದದ ಪರಿಹಾರವನ್ನು ಬಳಕೆ ಮಾಡಿಕೊಳ್ಳಿ ಉತ್ತಮ ಫಲಿತಾಂಶ ದೊರೆಯುತ್ತದೆ ಅಷ್ಟೇ ಅಲ್ಲದೆ ದೇಹಕ್ಕೆ ಒಳ್ಳೆಯದು ಕೂಡ .

 

ಹೊಟ್ಟೆಯ ಕೆಟ್ಟ ಕೊಬ್ಬು ಕರಗಿಸಲು ಆಯುರ್ವೇದದ ಮನೆಮದ್ದು !

 ತ್ರಿಫಲಾ ಚೂರ್ಣ  :

ಆಮ್ಲ ಕಾಯಿ , ಹರೀತಕಿ , ಬಿಭಿತಕಿ ಇವುಗಳ ಸಮ ಪ್ರಮಾಣವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಬೇಕು.

 

ತ್ರಿಫಲಾ ಚೂರ್ಣಕ್ಕೆ  ಕೆಳಗಿನ ಸಾಮಗ್ರಿಗಳನ್ನು ಬೆರೆಸಿ ಅಥವಾ ನೇರವಾಗಿ ಒಟ್ಟಿಗೆ ಬೇಕಾದರೂ ಪುಡಿ ಮಾಡಿಕೊಳ್ಳಬಹುದು ಹೀಗೆ ಪುಡಿ ಮಾಡಿಟ್ಟುಕೊಂಡ ಅಥವಾ ಅಂಗಡಿಯಲ್ಲಿ ದೊರೆಯುವ ತ್ರಿಫಲಾ ಪುಡಿಯನ್ನು ಅರ್ಧ ಚಮಚ ತೆಗೆದುಕೊಂಡು ಒಂದು ಲೋಟ ನೀರಿನಲ್ಲಿ ಬೆರೆಸಿ , ಬೆರೆಸಿದ ಮೇಲೆ ರಾತ್ರಿ ಇಡೀ ಹಾಗೆಯೇ ಇಟ್ಟು ಬೆಳಗ್ಗೆ ಅರ್ಧ ಚಮಚ ಜೇನು ತುಪ್ಪ ಬೆರೆಸಿ, ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ .

ಲೋಳೆಸರ

 

 

ಒಂದು ಲೋಟ ನೀರಿಗೆ ಒಂದು ಚಮಚ ಅಲೋವೆರಾ ಅಥವಾ ಲೋಳೆಸರದ ರಸ ಸೇರಿಸಿ ಕುಡಿಯಿರಿ .

 

ಕರಿ ಬೇವಿನ ಸೊಪ್ಪು

 

 

ಒಂದು ಲೋಟ ನೀರನ್ನು ಚೆನ್ನಾಗಿ ಬಿಸಿ ಮಾಡಿ ,ಅರ್ಧ ಹಿಡಿಯಷ್ಟು ಕರಿ ಬೇವಿನ ಸೊಪ್ಪನ್ನು ಸೇರಿಸಿ ಕುದಿಸಿ ಹೀಗೆ ಕುದಿಸಿದ ನೀರನ್ನು ಕುಡಿದರೆ ಸಹ ಬೊಜ್ಜು ಕಡಿಮೆಯಾಗುತ್ತದೆ .

ಜೇನುತುಪ್ಪ ಹಾಗು ನಿಂಬೆ ರಸ 

ಒಂದು ಲೋಟ ನೀರನ್ನು ಚೆನ್ನಾಗಿ ಬಿಸಿ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಗು ಒಂದು ಚಮಚ ನಿಂಬೆ ರಸ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಜೀರಿಗೆ

 

ಎರಡು ಲೋಟ ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಎರಡು ಚಮಚ ಜೀರಿಗೆ ಬೆರೆಸಿ ನೀರು ಅರ್ಧಕ್ಕೆ ಹಿಂಗುವವರೆಗೂ ಕುದಿಸಿ ನಂತರ ಈ ನೀರನ್ನು ಬೆಳಗ್ಗೆ ತಿಂಡಿಗೆ ಮುನ್ನ ಸೇವಿಸಿ  ಹೀಗೆ ಈ ನೀರನ್ನು ಸೇವಿಸುತ್ತಾ ಬಂದರೆ ಜೀರ್ಣ ಕ್ರಿಯೆಯ ಜೊತೆಗೆ ಬೊಜ್ಜು ಕಡಿಮೆಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top