fbpx
ದೇವರು

ನೀವೇನಾದ್ರು ದೇವರಮನೆಯಲ್ಲಿ ಈ ತಪ್ಪು ಮಾಡಿದ್ರೆ ಈಗ್ಲೇ ನಿಲ್ಲಿಸಿಬಿಡಿ !!

 ನೀವೇನಾದ್ರು ದೇವರಮನೆಯಲ್ಲಿ ಈ ತಪ್ಪು ಮಾಡಿದ್ರೆ ಈಗ್ಲೇ ನಿಲ್ಲಿಸಿಬಿಡಿ !!

ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಕನಸಿನ ಮನೆ ಹಾಗಿರಬೇಕು, ಹೀಗಿರಬೇಕು ಎಂಬೆಲ್ಲಾ ಕನಸುಗಳು ಕಟ್ಟಿಕೊಳೋದು ಸರ್ವೇಸಾಮಾನ್ಯ. ಅದರಲ್ಲಿಯೂ ಮನೆಯ ಒಳಾಂಗಣ ಸೌಂದರ್ಯಕ್ಕೆ ಇತ್ತೀಚೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಅದರಲ್ಲಿಯೂ ಕಾಸು ಕೊಟ್ಟಂಗೆಲ್ಲಾ ಮನೆ ವಿನ್ಯಾಸ ಮಾಡಿಕೊಡುವ ಕಂಪನಿಗಳು ಇತ್ತೀಚಿಗೆ ಹೆಚ್ಚಿಕೊಂಡಿವೆ. ದೇವರ ಮನೆಗಂತೂ ದೇವರೇ ಧರೆಗಿಳಿದು ಬಂದ್ರೆ ಮೂರ್ಛೆ ಹೋಗುವಷ್ಟು ಸಿಂಗಾರ ಮಾಡಲಾಗಿರುತ್ತದೆ.

ದೇವರ ಕೋಣೆ ಎನ್ನುವುದು ಧರ್ಮವನ್ನೂ ಮೀರಿದ ವಿಷಯವಾಗಿದ್ದು, ಮೊದಲಿನಿಂದಲೂ ಭಾರತೀಯರಿಗೆ ದೇವರ ಕೋಣೆ ಅಥವಾ ಗರ್ಭಗುಡಿ ಎನ್ನುವುದು ಪವಿತ್ರ ಸ್ಥಳವಾಗಿ ಉಳಿದುಕೊಂಡಿದೆ. ದಿನಂಪ್ರತಿ ಗರ್ಭಗುಡಿಗೆ ಹೋಗಿ ದೇವರಲ್ಲಿ ಮೊರೆ ಇಡುವುದನ್ನು ನಾವೆಲ್ಲರೂ ಮೊದಲಿನಿಂದಲೂ ರೂಡಿಸಿಕೊಂಡು ಬಂದಿರುವ ಪದ್ಧತಿಯಾಗಿದೆ.

ಇಂತಹ ಪವಿತ್ರ ಕೋಣೆಯಲ್ಲಿ ಇಂತಿಪ್ಪ ಕೆಲಸಗಳನ್ನು ಮಾಡಬೇಕು ಅತ್ವ ಮಾಡಬಾರದು ಎಂಬ ನಿಯಮಗಳನ್ನು ನಮ್ಮ ಹಿರಿಯರು ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ.

ತಾತ್ತ್ವಿಕವಾಗಿ ಯೋಚಿಸುವುದಾದರೆ ಗರ್ಭಗುಡಿಯು ಹೆಚ್ಚಿನ ಧನಾತ್ಮಕ ಅಂಶಗಳನ್ನು ಒಳಗೊಂಡ ಸ್ಥಳವಾಗಿದ್ದು, ಈ ಸ್ಥಳದಲ್ಲಿ ಭಾರತೀಯರು ಒಂದು ಸಾಮಾನ್ಯ ತಪ್ಪು ಮಾಡುತಿದ್ದು, ಈ ತಪ್ಪಿನ ಬಗ್ಗೆ ಮುಂದೆ ತಿಳಿಸಲಾಗಿದೆ.

ನಮಗೆಲ್ಲರಿಗೂ ನಮ್ಮ ಪೂರ್ವಜರ ಬಗ್ಗೆ ಅಪಾರ ಗೌರವವಿದ್ದು, ಅವರ ನೆನಪು ನಮ್ಮಲ್ಲಿ ಸದಾ ಇರಲಿ ಎನ್ನುವ ಕಾರಣಕ್ಕೆ ಅವರ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಇನ್ನೂ ಕೆಲವರು ಜನರು ಮರಣ ಹೊಂದಿದ ತಮ್ಮ ಹೆತ್ತವರ ಅಥವಾ ಹಿರಿಯರ ಫೋಟೋಗಳನ್ನು ದೇವರ ಮನೆಯಲ್ಲಿಟ್ಟು ಪೂಜಿಸುತ್ತಾರೆ. ಈ ರೀತಿ ಮಾಡುವುದು ತಪ್ಪು ಎನ್ನವುದು ಹಲವು ಆಧ್ಯಾತ್ಮ  ಗುರುಗಳ ಅಭಿಪ್ರಾಯವಾಗಿದೆ.

ಹೌದು, ಶಾಸ್ತ್ರಗಳ ಪ್ರಕಾರ, ಒಬ್ಬ ಸತ್ತ ವ್ಯಕ್ತಿಗೆ ದೇವರ ಪಕ್ಕ ಇರಿಸಿ ಹೋಲಿಕೆ ಮಾಡಬಾರದು ಎಂಬ ಉಲ್ಲೇಖವಿದ್ದು, ಈ ರೀತಿ ಮಾಡುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಿ, ಮನೆ ಅಶಾಂತಿ ಇಂದ ಕೂಡಿರಲಿದೆಯಂತೆ.

ಇದು ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಸನಾತನ ಧರ್ಮವು ಪೂರ್ವಜರ ಫೋಟೋಗಳನ್ನು ಪೂಜಾ ಕೊಠಡಿಯಲ್ಲಿ ಇರಿಸುವುದನ್ನು ತೀವ್ರವಾಗಿ ಖಂಡಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top